International News: ಆನ್‌ಲೈನ್‌ನಲ್ಲಿ ಲವ್ ಆಗಿ, ಮದುವೆಯಾಗುವವರನ್ನು ನೀವು ನೋಡಿರುತ್ತೀರಿ. ಕೆಲವರು ಚೆನ್ನಾಗಿ ಜೀವನ ನಡೆಸುತ್‌ತಾರೆ. ಇನ್ನು ಕೆಲವರು ಮೋಸ ಹೋಗುತ್ತಾರೆ.
ಇಲ್ಲೊಂದು ಕೇಸ್‌ನಲ್ಲೂ ಓರ್ವ ಯುವಕ ಆನ್‌ಲೈನ್ ಲವ್ ಮಾಡೋಕ್ಕೆ ಹೋಗಿ, ಮೋಸ ಹೋಗಿದ್ದಾನೆ. ಇಂಡೋನೇಷಿಯಾದಲ್ಲಿ ಈ ಘಟನೆ ನಡೆದಿದ್ದು, ಎಕೆ ಎಂಬ ಯುವಕ ಮೋಸ ಹೋಗಿದ್ದಾನೆ.
ಎಕೆ ಆನ್‌ಲೈನ್‌ನಲ್ಲಿ ಪ್ರೀತಿಸಿ, ಅದಿಂಡಾ ಎಂಬುವವರನ್ನು ವಿವಾಹವಾಗಿದ್ದ. ಆದರೆ ವಿವಾಹವಾದ 12 ದಿನಗಳ ಬಳಿಕ ಗೊತ್ತಿಗಿದ್ದೇನೆಂದರೆ, ಇಷ್ಟು ದಿನ ಪ್ರೀತಿಸಿ, ರಾಶಿ ರಾಶಿ ಖರ್ಚು ಮಾಡಿ ಮದುವೆಯಾಗಿರುವುದು ಅವಳನ್ನು ಅಲ್ಲ ಅವನನ್ನು ಎಂದು.
ಹೌದು.. ಎಕೆಗೆ ತಾನು ಮದುವೆಯಾಗಿರುವುದು ಹೆಣ್ಣನ್ನಲ್ಲ ಬದಲಾಗಿ ಗಂಡನ್ನು ಅಂತಾ, ಮದುವೆಯಾಗಿ 12 ದಿನಗಳಾದ ಮೇಲೆ ಗೊತ್ತಾಗಿದೆ. ಇದಕ್ಕೂ ಮುನ್ನ ಅವರು ಹಲವು ಬಾರಿ ಭೇಟಿಯಾಗಿದ್ದರು. ಈ ವೇಳೆ ಅದಿಂಡಾ ತಮ್ಮ ಸಂಸ್ಕೃತಿ ಎಂದು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬರುತ್ತಿದ್ದ. ಹೀಗಾಗಿ ಆತ ಗಂಡು ಎಂದು ಗುರುತಿಸಲಾಗಲಿಲ್ಲ. ಅಲ್ಲದೇ, ತನಗೆ ಯಾರೂ ಸಂಬಂಧಿಕರಿಲ್ಲ. ತಾನು ಅನಾಥೆ ಎಂದು ಅದಿಂಡಾ ಹೇಳಿಕೊಂಡಿದ್ದ.
ಇನ್ನು ಮದುವೆಯಾದ ಬಳಿಕ, ಎಕೆಯ ಸಂಬಂಧಿಕರ ಜೊತೆ ಬೆರೆಯಲು ಅದಿಂಡಾ ನಿರಾಕರಿಸುತ್ತಿದ್ದ. ಎಲ್ಲಿ ತನ್ನ ಆಟ ಬಯಲಾಗುತ್ತದೋ ಎಂದು ಎಲ್ಲರಿಂದ ದೂರ ಇರುತ್ತಿದ್ದ. ಇನ್ನು ಲೈಂಗಿಕ ಕ್ರಿಯೆಯ ಬಗ್ಗೆ ಮಾತನಾಡಿದರೆ, ಮುಟ್ಟಿನಿಂದಾಗಿ ಆರೋಗ್ಯ ಹಾಳಾಗಿದೆ ಎಂದು ದೂರ ಸರಿಯುತ್ತಿದ್ದ.
ಒಮ್ಮೆ ಎಕೆಗೆ ಈ ಬಗ್ಗೆ ಅನುಮಾನ ಬಂದು, ಎಕೆ ಅದಿಂಡಾ ಬಗ್ಗೆ ವಿಚಾರಣೆ ನಡೆಸಿದಾಗ, ತಿಳಿದು ಬಂದಿದ್ದೇನೆಂದರೆ, ಅದಿಂಡಾಗೆ ತಂದೆ ತಾಯಿ ಇದ್ದಾರೆ. ಆತ ಅನಾಥನಲ್ಲ. ಅಲ್ಲದೇ, ಹಲವು ದಿನಗಳಲ್ಲಿ ಹೆಣ್ಣು ಮಕ್ಕಳ ರೀತಿ ಬಟ್ಟೆ ಧರಿಸಿ, ಹೆಣ್ಣು ಮಕ್ಕಳಂತೆ ವರ್ತಿಸಿ, ಗಂಡಸರನ್ನು ಪಟಾಯಿಸುವ ಹುನ್ನಾರ ನಡೆದಿದ್ದು, ಇವಳ ಬುಟ್ಟಿಗೆ ಬಿದ್ದ ಬಲಿಕಾ ಬಕರಾ ತಾನೇ ಎಂದು ಗೊತ್ತಾಗಿತ್ತು. ಬಳಿಕ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ, ಎಕೆಯ ಆಸ್ತಿ ಲಪಟಾಯಿಸಿ, ಕೈ ಕೊಟ್ಟು ಹೋಗಬೇಕು ಎಂದು ಅದಿಂಡಾ ಹುನ್ನಾರ ನಡೆಸಿದ್ದನೆಂದು ಗೊತ್ತಾಗಿದೆ. ಈತನ ಕೆಲಸಕ್ಕೆ 4 ವರ್ಷ ಜೈಲು ಶಿಕ್ಷೆ ನೀಡಲಾಗಿದೆ.