Spiritual: ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳನ್ನು ಚಾಣಕ್ಯರು ಹೇಳಿದ್ದಾರೆ. ಬುದ್ಧಿ ಬೆಳೆದಾಗಿನಿಂದ, ಸಾವು ಬರೆಯುವವರೆಗೂ ಮನುಷ್ಯ ಹೇಗೆ ಬದುಕಬೇಕು..? ಬಾಳ ಸಂಗಾತಿ ಬಗ್ಗೆ, ದುಡ್ಡಿನ ಬಗ್ಗೆ ಹೇಗೆ ಕಾಳಜಿ, ಎಚ್ಚರಿಕೆ ವಹಿಸಬೇಕು..? ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು ಹೇಳಿದ್ದಾರೆ. ಅದೇ ರೀತಿ, ನಮ್ಮ ಜೊತೆ ಇರುವ ಸಹೋದ್ಯೋಗಿಗಳು, ಸ್ನೇಹಿತರು, ಹಿತೈಷಿಗಳು ಒಳ್ಳೆಯವರೋ..? ಕೆಟ್ಟವರೋ ಎಂದು ಹೇಗೆ ಕಂಡು ಹಿಡಿಯುವುದು ಎಂದು ಚಾಣಕ್ಯರು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ನಿಮ್ಮೊಂದಿಗೆ ಇರುವ ಸ್ನೇಹಿತರು, ನಿಮ್ಮ ತಪ್ಪುಗಳನ್ನು ನಿಮ್ಮ ಮುಖಕ್ಕೆ ಹೊಡೆದ ಹಾಗೆ ಹೇಳುತ್ತಾರೆ. ನೀವು ಚೆಂದಗಾಣಿಸದಿದ್ದಲ್ಲಿ, ಚೆಂದಗಾಣಿಸುತ್ತಿಲ್ಲವೆಂದು ಹೇಳುತ್ತಾರೆ. ಅಥವಾ ನೀವು ಮಾಡುವ ಕೆಲಸ ತಪ್ಪು, ಅಥವಾ ಕೆಟ್ಟದ್ದು ಎಂದಲ್ಲಿ, ನೀವು ಮಾಡುತ್ತಿರುವ ಕೆಲಸ ತಪ್ಪು ಎಂದು ಹೇಳುತ್ತಾರೆ. ಇದು ಉತ್ತಮ ಸ್ನೇಹಿತರ ಗುಣ. ಆದರೆ ನಿಮ್ಮ ತಪ್ಪನ್ನು ತಪ್ಪಲ್ಲವೆಂದು ಹೇಳಿ, ಆ ತಪ್ಪನ್ನು ಮಾಡಲು ಪ್ರೋತ್ಸಾಹಿಸುವ ಸ್ನೇಹಿತರು, ನಿಮ್ಮ ದಾರಿ ತಪ್ಪಿಸುವ ಸ್ನೇಹಿತರಾಗಿರುತ್ತಾರೆ. ನೀವು ಚೆಂದಗಾಣಿಸದಿದ್ದರೂ, ನಿಮ್ಮನ್ನು ಹಾಡಿ ಹೊಗಳುವವರು ನಿಮ್ಮನ್ನು ತಮಾಷೆ ಮಾಡುವ ಸ್ನೇಹಿತರಾಗಿರುತ್ತಾರೆ. ಹಾಗಾಗಿ ಸತ್ಯವನ್ನು ಯಾರು ಮುಖಕ್ಕೆ ಹೊಡೆದ ಹಾಗೆ ಹೇಳುತ್ತಾರೋ, ಅಂಥವರು ಉತ್ತಮ ಸ್ನೇಹಿತರಾಗಿರುತ್ತಾರೆ ಎನ್ನುತ್ತಾರೆ ಚಾಣಕ್ಯರು.
ಇನ್ನು ನಿಮಗೆ ಎಂಥದ್ದೇ ಕಷ್ಟ ಬರಲಿ, ಅದು ಅನಾರೋಗ್ಯವಾಗಿರಲಿ, ಹಣದ ಸಮಸ್ಯೆ ಆಗಿರಲಿ, ಏನೇ ಇರಲಿ. ಆ ಕಷ್ಟವನ್ನು ಎದುರಿಸಲು ನಿಮಗೆ ಸಹಾಯ ಮಾಡುವವನು ನಿಜವಾದ ಸ್ನೇಹಿತ. ಅದೇ ನಿಮಗೆ ಅನಾರೋಗ್ಯವಾಗಿದ್ದಾಗ, ದುಡ್ಡಿನ ಅವಶ್ಯಕತೆ ಇದ್ದಾಗ, ನನ್ನ ಬಳಿ ಹಣವಿಲ್ಲ. ನನಗೆ ಬೇರೆ ಕೆಲಸವಿದೆ. ಹೀಗೆ ಹಲವು ಕಾರಣಗಳನ್ನು ಹೇಳಿ, ನಿಮ್ಮಿಂದ ದೂರವಾಗುವವರು, ನಿಮ್ಮ ಉತ್ತಮ ಸ್ನೇಹಿತರಾಗಲು ಸಾಧ್ಯವೇ ಇಲ್ಲ.
ಇನ್ನು ನೀವು ಯಾರದ್ದಾದರೂ ಸಹವಾಸ ಮಾಡುವ ಮುನ್ನ, ಬೇರೆಯವರು ಅವರ ಬಗ್ಗೆ ಏನು ಮಾತನಾಡುತ್ತಾರೆ.? ಯಾವ ಅಭಿಪ್ರಾಯ ಹೊಂದಿದ್ದಾರೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಆದರೆ ಅದನ್ನೇ ನಂಬಬೇಕು ಅಂತಲ್ಲ. ಹೀಗೆ ಅಭಿಪ್ರಾಯ ತಿಳಿದಾಗ, ನೀವು ಆ ವ್ಯಕ್ತಿಯೊಂದಿಗೆ ಮಾತನಾಡುತ್ತ, ಅವರ ಹಾವಭಾವ, ಮಾತುಗಳನ್ನೆಲ್ಲ ಗಮನಿಸಬೇಕು. ಆಗ ನಿಮಗೆ ಬೇರೆಯವರ ಅಭಿಪ್ರಾಯ ಸತ್ಯವೋ, ಅಥವಾ ಆ ಮನುಷ್ಯ ಉತ್ತಮನೋ ಅನ್ನೋದು ಗೊತ್ತಾಗುತ್ತದೆ.
ಇನ್ನು ನೀವು ಯಾರ ಸಹವಾಸ ಮಾಡಿದ್ದೀರೋ, ಅವನು ಇತರರ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತಾನೆ. ಮತ್ತು ನಿಮ್ಮನ್ನು ಹೊಗಳುತ್ತಾನೆ ಎಂದಾದಲ್ಲಿ, ಅಂಥವರನ್ನು ಎಂದಿಗೂ ನಂಬಬೇಡಿ. ಇಂದು ನಿಮ್ಮ ಬಳಿ ಇನ್ನೊಬ್ಬರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದವ, ನಾಳೆ ನಿಮ್ಮ ಬಗ್ಗೆ ಇನ್ನೊಬ್ಬರಲ್ಲಿ, ಖಂಡಿತವಾಗಿಯೂ ಕೆಟ್ಟದ್ದನ್ನು ಮಾತನಾಡುತ್ತಾನೆ. ಹಾಗಾಗಿ ಇಂಥ ಗೆಳೆಯರ ಸಹವಾಸ ಬೇಡವೇ ಬೇಡ.
ಅಕ್ಕಿ ತೊಳೆದ ನೀರನ್ನು ಬಳಸುವುದರಿಂದ ಎಷ್ಟೆಲ್ಲ ಚಮತ್ಕಾರಿ ಉಪಯೋಗವಿದೆ ಗೊತ್ತಾ..?