Friday, August 29, 2025

Latest Posts

ಚಾಣಕ್ಯರ ಪ್ರಕಾರ ಪತ್ನಿ ಈ ರೀತಿ ಇದ್ದಾಗ ಮಾತ್ರ, ಪತಿ ನೆಮ್ಮದಿಯಾಗಿ, ಆರ್ಥಿಕವಾಗಿ ಸಬಲನಾಗಿರುತ್ತಾನೆ..

- Advertisement -

Spiritual: ಚಾಣಕ್ಯ ನೀತಿಯಲ್ಲಿ ಪತ್ನಿಯ ಗುಣಗಳ ಬಗ್ಗೆ ಸುಂದರವಾಗಿ ವರ್ಣಿಸಲಾಗಿದೆ. ಪತ್ನಿ ಹೇಗಿದ್ದರೆ, ಪತಿ ನೆಮ್ಮದಿಯಾಗಿ, ಖುಷಿ ಖುಷಿಯಾಗಿ, ಆರ್ಥಿಕವಾಗಿ ಸಬಲನಾಗಿರುತ್ತಾನೆ ಅಂತಾ ವರ್ಣಿಸಲಾಗಿದೆ. ಹಾಗಾದರೆ ಚಾಣಕ್ಯರ ಪ್ರಕಾರ ಹೆಂಡತಿಯಾದವಳು ಹೇಗಿರಬೇಕು ಅಂತಾ ತಿಳಿಯೋಣ ಬನ್ನಿ..

ಗೃಹ ದಕ್ಷಾ: ಅಂದರೆ, ಯಾವ ಪತ್ನಿ ಅಡುಗೆ ಮಾಡುವುದನ್ನು, ಮನೆ ಸ್ವಚ್ಛವಾಗಿ ಇಟ್ಟುಕೊಳ್ಳುವುದನ್ನು, ಪಾತ್ರೆ, ಬಟ್ಟೆಗಳನ್ನು ತೊಳೆದುವುದನ್ನು, ಮಕ್ಕಳು, ಪತಿ, ಹಿರಿಯರನ್ನು ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುವವಳು ಆಗಿರುತ್ತಾಳೋ, ಅಂಥ ಪತ್ನಿಯನ್ನು ಪಡೆದವ ಅದೃಷ್ಟವಂತನಾಗಿರುತ್ತಾನೆ. ಇಂಥ ಮನೆಯಲ್ಲಿ ಲಕ್ಷ್ಮೀ ದೇವಿಯೂ ವಾಸವಾಗಿರುತ್ತಾಳೆ.

ಪ್ರಿಯಂ ವದಾ: ಅಂದರೆ, ಯಾವ ಪತ್ನಿ ತನ್ನ ಪತಿ ಮತ್ತು ಪತಿಯ ಕುಟುಂಬಸ್ಥರನ್ನು ಪ್ರೀತಿ, ಗೌರವದಿಂದ ಕಾಣುತ್ತಾಳೋ, ಆ ಮನೆಯ ಹಿರಿಯರೊಂದಿಗೆ ಸಂಯಮದಿಂದ ಮಾತನಾಡುತ್ತಾಳೋ, ಅಂಥ ಪತ್ನಿ ಪತಿಯೊಂದಿಗೆ ಎಲ್ಲರ ಮನಸ್ಸನ್ನೂ ಗೆಲ್ಲುತ್ತಾಳೆ. ಆದರೆ ಇದರೊಂದಿಗೆ ಆಕೆಯ ಪತಿ ಮತ್ತು ಪತಿಯ ಮನೆಯವರ ವರ್ತನೆಯೂ, ಅವಳೊಂದಿಗೆ ಉತ್ತಮವಾಗಿರುವುದು ಮುಖ್ಯವಾಗಿರುತ್ತದೆ.

ಪತಿಪ್ರಾಣಾ: ಯಾವ ಹೆಣ್ಣು, ತನ್ನ ಪತಿ ಹೇಳಿದ ಎಲ್ಲ ಮಾತುಗಳನ್ನು ಕೇಳುತ್ತಾಳೋ, ಅವನ ಸೇವೆ ಮಾಡುತ್ತಾಳೋ, ಪತಿಯ ಮನಸ್ಸಿಗೆ ನೋವಾಗುಂಥ ಮಾತನ್ನು ಆಡುವುದಿಲ್ಲವೋ, ಅಂಥ ಪತ್ನಿಗಾಗಿ ಪತಿ ಎಂಥ ಕೆಲಸವನ್ನೂ ಮಾಡಲು ಸಿದ್ಧನಿರುತ್ತಾನೆ. ಅಂದರೆ, ಅವಳನ್ನು ಅಷ್ಟು ಪ್ರೀತಿಸುತ್ತಾನೆ ಎಂದರ್ಥ.

ಪತಿವೃತಾ: ಅಂದರೆ, ಯಾವ ಪತ್ನಿ ತನ್ನ ಪತಿಯನ್ನು ಬಿಟ್ಟು ಪರಪುರುಷನ ಜೊತೆ ಸಂಗ ಹೊಂದುವುದಿಲ್ಲವೋ, ತನ್ನ ಪತಿಯನ್ನಷ್ಟೇ ಪ್ರೀತಿಸುತ್ತಾಳೋ, ಅಂಥವರ ಜೀವನ ಅತ್ಯುತ್ತಮವಾಗಿರುತ್ತೆ. ಅಲ್ಲದೇ ಈ ಮೊದಲೇ ಹೇಳಿದಂತೆ ಪತಿ ಹೇಳಿದ ಎಲ್ಲ ಮಾತನ್ನು ಕೇಳುವ ಪತ್ನಿ ಪತಿವೃತೆಯಾಗಿರುತ್ತಾಳೆ. ಆದರೆ ಅದರಿಂದ ಎಲ್ಲರಿಗೂ ಒಳ್ಳೆಯದಾಗಬೇಕು. ಪತಿ ತಪ್ಪು ದಾರಿ ಹಿಡಿದು, ತಾನು ಹೇಳಿದಂತೆ ಕೇಳು ಎಂದಾಗ, ಅವನನ್ನು ಸರಿ ದಾರಿಗೆ ತರುವುದು ಪತ್ನಿಯ ಕರ್ತವ್ಯವಾಗಿದೆ.

ಇಂಥ ಗುಣವಿರುವ ಪತ್ನಿಯನ್ನು ಪತಿಯಾದವನು ಸುಖವಾಗಿ, ಪ್ರೀತಿ, ಕಾಳಜಿಯಿಂದ ನೋಡಿಕೊಂಡಲ್ಲಿ, ಅವನು ಯಶಸ್ಸು ಕಾಣುತ್ತಾನೆ. ಧನವಂತನಾಗುತ್ತಾನೆ. ಲಕ್ಷ್ಮೀದೇವಿಯ ಕೃಪೆಗೆ ಪಾತ್ರನಾಗುತ್ತಾನೆ. ಇನ್ನು ಎಂಥ ಪತ್ನಿ ಪತಿಯ ಜೀವನವನ್ನು ಹಾಳು ಮಾಡಬಲ್ಲಳು ಅನ್ನೋ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

ರಾಜ ಮತ್ತು ಸಾಡೇಸಾಥಿ ಕಥೆ (ಶನಿವಾರ ವೃತ ಕಥೆ)- ಭಾಗ 1

ರಾಜ ಮತ್ತು ಸಾಡೇಸಾಥಿ ಕಥೆ (ಶನಿವಾರ ವೃತ ಕಥೆ)- ಭಾಗ 3

ರಾಜ ಮತ್ತು ಸಾಡೇಸಾಥಿ ಕಥೆ (ಶನಿವಾರ ವೃತ ಕಥೆ)- ಭಾಗ 2

- Advertisement -

Latest Posts

Don't Miss