Sunday, September 8, 2024

Latest Posts

ಪುರುಷರಿಗೆ ಹೋಲಿಸಿದರೆ, ಈ ವಿಷಯದಲ್ಲಿ ಮಹಿಳೆಯರೇ ಮುಂದು ಅಂತಾರೆ ಚಾಣಕ್ಯರು..

- Advertisement -

Spiritual: ಜೀವನ ನಡೆಸುವ ಬಗ್ಗೆ, ಹಣದ ವಿಷಯದ ಬಗ್ಗೆ, ಪತಿ-ಪತ್ನಿ ಹೇಗಿರಬೇಕು ಎಂಬ ಬಗ್ಗೆ, ಎಂಥ ಸ್ಥಳದಲ್ಲಿ ಜನ ಬದುಕಬೇಕು ಮತ್ತು ಎಂಥ ಸ್ಥಳದಲ್ಲಿ ಬದುಕಬಾರದು ಅನ್ನೋ ಬಗ್ಗೆ, ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಚಾಣಕ್ಯರು ಜೀವನ ನೀತಿಯನ್ನು ಹೇಳಿದ್ದಾರೆ. ಜೊತೆಗೆ ಪುರುಷರಿಗೆ ಹೋಲಿಸಿದರೆ, ಈ ವಿಷಯದಲ್ಲಿ ಮಹಿಳೆಯರೇ ಮುಂದು ಎಂದಿದ್ದಾರೆ. ಹಾಗಾದ್ರೆ ಮಹಿಳೆಯರು ಯಾವ ವಿಷಯದಲ್ಲಿ ಪುರುಷರಿಗಿಂತ ಮೇಲು ಅಂತಾ ತಿಳಿಯೋಣ ಬನ್ನಿ..

ಹಸಿವಿನ ವಿಷಯದಲ್ಲಿ ಮಹಿಳೆಯರೇ ಮೇಲು ಎಂದಿದ್ದಾರೆ ಚಾಣಕ್ಯರು. ಪುರುಷರು ಮಹಿಳೆಯರಿಗಿಂತ ಹೆಚ್ಚು ಊಟ ಮಾಡುತ್ತಾರೆ. ಆದರೆ ಮಹಿಳೆಯರಿಗೆ ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಹಸಿವು. ಹಾಗಾಗಿಯೇ ಹಲವು ಹೆಣ್ಣು ಮಕ್ಕಳು ಹಸಿವನ್ನು ತಡೆಹಿಡಿಯಲು ಚಡಪಡಿಸುತ್ತಾರೆ. ಇನ್ನು ನಾಚಿಕೆ ಸ್ವಭಾವದಲ್ಲಿ ಹೆಣ್ಣು ಮಕ್ಕಳೇ ಮುಂದು. ಪುರುಷರಿಗಿಂತ ಹೆಣ್ಣು ಹೆಚ್ಚು ನಾಚಿಕೆ ಪಡುತ್ತಾಳೆ.

ಜೊತೆಗೆ ಪುರುಷನಲ್ಲಿ, ಮಹಿಳೆಗಿಂತ ಹೆಚ್ಚು ಶಕ್ತಿ ಇದ್ದರೂ ಕೂಡ, ಪುರುಷರಿಗಿಂತ ಮಹಿಳೆಯರಿಗೆ ನಾಲ್ಕು ಪಟ್ಟು ಧೈರ್ಯ ಹೆಚ್ಚು ಎಂದಿದ್ದಾರೆ ಚಾಣಕ್ಯರು. ಜೊತೆಗೆ ಆಕೆ ಪುರುಷನಿಗಿಂತ ಹೆಚ್ಚು ಬುದ್ಧಿವಂತಳಾಗಿರುತ್ತಾಳೆ. ಯಾವ ಕೆಲಸ ಮಾಡಿದರೆ, ಪತಿಗೆ ಒಳ್ಳೆಯದಾಗುತ್ತದೆ. ಯಾವ ಕೆಲಸ ಮಾಡಿದಾಗ, ಪತಿ ಪೇಚಿಗೆ ಸಿಲುಕುತ್ತಾನೆ. ಯಾವ ಕೆಲಸದಿಂದ ಪತಿ ನಷ್ಟ ಅನುಭವಿಸುತ್ತಾನೆ ಅನ್ನೋದು ಹೆಣ್ಣಿಗೆ ಗೊತ್ತಿರುತ್ತದೆ. ಹಾಗಾಗಿ ಹಲವು ಹೆಣ್ಣು ಮಕ್ಕಳು ತಮ್ಮ ಪತಿಯನ್ನು ಆಗಾಗ, ಕೆಲವು ಕೆಲಸಗಳನ್ನು ಮಾಡಬೇಡಿ ಎಂದು ತಡೆಯುತ್ತಾರೆ. ಆಕೆಯ ಮಾತು ಕೇಳದೇ, ಕೆಲ ಕೆಲಸಗಳನ್ನು ಮಾಡಿದ ಪತಿ, ಕಷ್ಟಕ್ಕೆ ಸಿಲುಕುತ್ತಾನೆ.

ಇನ್ನು ಕರುಣೆ ತೋರಿಸುವುದರಲ್ಲಿ ಹೆಣ್ಣು ಮಕ್ಕಳು ಮುಂದಿರುತ್ತಾರೆ. ಆಕೆಯದ್ದು ತಾಯಿ ಹೃದಯವಾದ್ದರಿಂದ, ಎಷ್ಟೇ ಕೋಪವಿದ್ದರೂ, ಎಷ್ಟೇ ಕಷ್ಟವಿದ್ದರೂ, ಪಾಪದವರ ಮೇಲೆ ಹೆಣ್ಣು ಕರುಣೆ ತೋರಿಸುತ್ತಾಳೆ. ದಾನ ಧರ್ಮದ ಗುಣ ಆಕೆಯಲ್ಲಿ ಹೆಚ್ಚಾಗಿರುತ್ತದೆ. ಇನ್ನು ಸೌಂದರ್ಯದ ವಿಷಯದಲ್ಲಿ ಪುರುಷರಿಗಿಂತ ಹೆಚ್ಚಿನ ಹೆಣ್ಣು ಮಕ್ಕಳು ಸುಂದರವಾಗಿರುತ್ತಾರೆ. ಕೊನೆಗೆ ಕಾಮದ ವಿಷಯದಲ್ಲೂ ಹೆಣ್ಣು ಮಕ್ಕಳೇ ಮೇಲು ಎನ್ನುತ್ತಾರೆ ಚಾಣಕ್ಯರು.

ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ.. ಹೀಗೆ ಮಾಡಿದ್ರೆ ನಿಮ್ಮ ಅದೃಷ್ಟ ಅವರ ಪಾಲಾಗುತ್ತದೆ..

ಪತಿ ಶ್ರೀಮಂತನಾಗಬೇಕು, ಉದ್ಧಾರವಾಗಬೇಕು ಅಂದ್ರೆ ಪತ್ನಿ ಈ ಕೆಲಸವನ್ನು ಮಾಡಬೇಕು..

ಮಂಗಳವಾರದ ದಿನ ಇಂಥ ಕೆಲಸಗಳನ್ನು ಮಾಡಬೇಡಿ.. ಇಲ್ಲದಿದ್ದಲ್ಲಿ ದರಿದ್ರತನ ಆವರಿಸುತ್ತದೆ..

- Advertisement -

Latest Posts

Don't Miss