ಮನುಷ್ಯನ ಜೀವನ ಅಂದ್ರೆ, ಅವನಿಂದ ನಾಲ್ಕು ಜನರಿಗೆ ಸಹಾಯವಾಗಬೇಕು. ಅವನ ಮನೆ ಜನ ಅವನಿಂದ ಖುಷಿಯಾಗಿರಬೇಕು. ಅವನ ಜೀವನ ಎಲ್ಲರಿಗೂ ಮಾದರಿಯಾಗಿರಬೇಕು. ಹೀಗೆ ಉತ್ತಮ ಗುಣವುಳ್ಳ ಮನುಷ್ಯ ಮಾತ್ರ, ಸಮಾಜದಲ್ಲಿ ಗೌರವ ಪಡೆಯುತ್ತಾನೆ. ಆದ್ರೆ ಇನ್ನು ಕೆಲ ಚಟವಿರುವ, ಗುಣವಿರುವ ಜನ ಎಂದಿಗೂ ಉತ್ತಮರಾಗಲು ಸಾಧ್ಯವಿಲ್ಲ. ಅಂಥವರೆಲ್ಲ ಬದುಕಿದ್ದೂ ಸತ್ತ ಹಾಗೆ. ಹಾಗಾದ್ರೆ ರಾಮಚರಿತ ಮಾನಸದ ಪ್ರಕಾರ ಯಾರು ಹೀಗೆ ನಿಶ್ಪ್ರಯೋಜಕರು ಅಂತಾ ತಿಳಿಯೋಣ ಬನ್ನಿ..
ಮೊದಲನೇಯವರು, ವಾಮಮಾರ್ಗಿ. ಅಂದರೆ ಇಂಥವರು ಸಮಾಜದ ಉತ್ತಮ ಕಾರ್ಯಗಳನ್ನು ಮಾಡುವುದಿಲ್ಲ. ಮತ್ತು ಉತ್ತಮ ಕಾರ್ಯ ಮಾಡುವವರನ್ನೂ ಇವರು ಇಷ್ಟ ಪಡುವುದಿಲ್ಲ. ಇವರು ಯಾವಾಗಲೂ ಒಳ್ಳೆ ಕೆಲಸಗಳ ವಿರುದ್ಧವೇ ಇರುತ್ತಾರೆ. ಹಾಗಾಗಿ ಇಂಥವರು ಬದುಕಿದ್ದು ಸತ್ತ ಹಾಗೆ ಎನ್ನಲಾಗಿದೆ.
ಸೀತಾಮಾತೆ ಲಕ್ಷ್ಮಣನನ್ನೇ ನುಂಗಿದ್ದಳಂತೆ.. ಯಾಕೆ ಗೊತ್ತಾ..?
ಎರಡನೇಯವರು, ಕಾಮಿ. ಇಂಥವರು ತಮಗೆ ಕಾಣುವ ಪ್ರತೀ ಹೆಣ್ಣನ್ನ ಕೂಡ ಕಾಮಿಸುತ್ತಾರೆ. ಇವರಿಗೆ ಸಂಬಂಧದ ಅರಿವಿರುವುದಿಲ್ಲ. ಹೆಣ್ಣು ಹುಚ್ಚರಾಗಿರುತ್ತಾರೆ. ಇಂಥವರನ್ನ ವಿವಾಹವಾಗುವುದೇ ದೊಡ್ಡ ದುರಂತವಾಗಿರುತ್ತದೆ. ಹೆಣ್ಣಿನ ಬಗ್ಗೆ ಗೌರವವಿರದ ಕಾಮಿಗಳು ಬದುಕಿದ್ದು, ಸತ್ತಂತೆ.
ಮೂರನೇಯವರು, ಕಂಜೂಸ್. ದಾನ ಧರ್ಮ ಮಾಡದ, ಬರೀ ಸ್ವಾರ್ಥದ ಜೀವನ ನಡೆಸುವ ಜನ ಎಂದಿಗೂ ಉದ್ಧಾರವಾಗುವುದಿಲ್ಲ. ಇವರು ಎಂದಿಗೂ ನೆಮ್ಮದಿಯಾಗಿ, ಖುಷಿಯಾಗಿ ಜೀವನ ನಡೆಸಲು ಆಗುವುದಿಲ್ಲ. ಇವರು ಬೇರೆಯವರಿಗೋಸ್ಕರವಷ್ಟೇ ಅಲ್ಲ, ಬದಲಾಗಿ ತಮ್ಮ ಸಲುವಾಗಿಯೂ ಹಣ ಖರ್ಚು ಮಾಡಲು ಹಿಂಜರಿಯುತ್ತಾರೆ. ಇಂಥವರು ಜೀವನದ ಯಾವ ಖುಷಿಯನ್ನೂ ಅನುಭವಿಸುವುದಿಲ್ಲ. ಅಲ್ಲದೇ ಕೆಲವು ಕಡೆ ಇಂಥ ಕಂಜೂಸುತನದಿಂದ ಸಾವು ಸಂಭವಿಸಿದ ಘಟನೆಯೂ ನಡೆದಿದೆ. ಹಾಗಾಗಿ ಅತೀಯಾದ ಕಂಜೂಸುತನ ಇರುವವರು, ಬದುಕಿದ್ದೂ, ಸತ್ತಂತೆ.
ನಾಲ್ಕನೇಯವರು, ಮೂರ್ಖ. ಕೆಟ್ಟದ್ದು, ಒಳ್ಳೆಯದ್ದರ ನಡುವಿನ ವ್ಯತ್ಯಾಸ ಗೊತ್ತಿಲ್ಲದ ವ್ಯಕ್ತಿ ಮೂರ್ಖನಾಗಿರುತ್ತಾನೆ. ಇಂಥವರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಇಂಥವರನ್ನ ಜನ ದೂರ ಮಾಡುತ್ತಾರೆ. ಹಾಗಾಗಿ ಇಂಥವರು ಬದುಕಿದ್ದು, ಸತ್ತಂತೆ.
ಚಾಣಕ್ಯನ ಈ 5 ಮಾತನ್ನ ಜೀವನದಲ್ಲಿ ಅಳವಡಿಸಿಕೊಂಡರೆ, ನೆಮ್ಮದಿಯ ಜೀವನ ನಿಮ್ಮದಾಗುತ್ತದೆ..
ಐದನೇಯವರು, ಅತ್ಯಂತ ದರಿದ್ರ. ಮನುಷ್ಯ ಎಷ್ಟೇ ಬಡವನಾಗಿದ್ದರೂ, ಬುದ್ಧಿವಂತಿಕೆ ಉಪಯೋಗಿಸಿ, ಉತ್ತಮ ಜೀವನ ನಡೆಸುವ ಪ್ರಯತ್ನ ಮಾಡಬೇಕು. ಅವನು ಎಲ್ಲಿಯತನಕ ಉತ್ತಮವಾಗಿ ಬದುಕಲು ಪ್ರಯತ್ನಿಸುವುದಿಲ್ಲವೋ, ದರಿದ್ರನಾಗಿಯೇ ಇರುತ್ತಾನೋ, ಅಲ್ಲಿಯವರೆಗೂ ಅವನು ಬದುಕಿದ್ದು ಸತ್ತಂತೆ.
ಆರನೇಯವರು, ಕಳಂಕಿತ. ಒಂದು ವಿಷಯದಲ್ಲಿ ಕಳಂಕಿತನಾದ ವ್ಯಕ್ತಿಗೆ ಸಮಾಜ ಗೌರವಿಸುವುದಿಲ್ಲ. ಅವರನ್ನು ಎಂದಿಗೂ ಕೀಳಾಗಿಯೇ ನೋಡಲಾಗುತ್ತದೆ. ಹಾಗಾಗಿ ಅಂಥವರು ಬದುಕಿದ್ದು, ಸತ್ತಂತೆ.
ಏಳನೇಯವರು, ಯಾವಾಲೂ ಸಿಟ್ಟಿನಲ್ಲಿರುವವರು. ಚಿಕ್ಕ ಚಿಕ್ಕ ವಿಷಯಗಳಿಗೂ ಕೋಪ ಮಾಡಿಕೊಳ್ಳುವವರನ್ನ ಯಾರೂ ಇಷ್ಟಪಡುವುದಿಲ್ಲ. ಇಂಥವರು ಮನೆಯಲ್ಲಿ ಓರ್ವ ಒಳ್ಳೆಯ ಸಂಬಂಧಿಯಾಗಲು ಸಾಧ್ಯವಿಲ್ಲ. ಆಫೀಸಿನಲ್ಲಿ ಓರ್ವ ಉತ್ತಮ ಸಹೋದ್ಯೋಗಿಯಾಗಲು ಸಾಧ್ಯವಿಲ್ಲ. ಇಂಥವರಿಗೆ ಸ್ನೇಹಿತರೇ ಇರುವುದಿಲ್ಲ. ಇವರೆಂದೂ ಖುಷಿಯಾಗಿರಲು ಸಾಧ್ಯವಿಲ್ಲ. ಹಾಗಾಗಿ ಇಂಥವರು ಬದುಕಿದ್ದೂ ಸತ್ತಂತೆ.
ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..