Friday, April 4, 2025

Latest Posts

ಮೇಡಂ ಟುಸ್ಸಾಡ್ಸ್‌ನಲ್ಲಿರುವ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಿದ ನಟ ಅಲ್ಲು ಅರ್ಜುನ್

- Advertisement -

Movie News: ತೆಲುಗು ನಟ ಅಲ್ಲು ಅರ್ಜುನ್ ಮೇಣದ ಪ್ರತಿಮೆಯನ್ನು ದುಬೈನ ಮೇಡಂ ಟುಸ್ಸಾಡ್ಸ್ ಮ್ಯೂಸಿಎಂನಲ್ಲಿ ರೆಡಿ ಮಾಡಲಾಗಿದ್ದು, ದುಬೈಗೆ ಕುಟುಂಬ ಸಮೇತರಾಗಿ ತೆರಳಿರುವ ಅಲ್ಲು ಅರ್ಜುನ್, ತಮ್ಮದೇ ಪ್ರತಿಮೆಯನ್ನು ಅನಾವರಣ ಮಾಡಿದ್ದಾರೆ.

ಅಲಾ ವೈಕುಂಠಪುರಂಲೋದಲ್ಲಿ ಇರುವ ರೀತಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ತಯಾರಿಸಲಾಗಿದ್ದು, ಈ ಬಗ್ಗೆ ಅಲ್ಲು ಟ್ವೀಟ್ ಮಾಡಿದ್ದಾರೆ. ಇಂದು ಮೇಡಂ ಟುಸ್ಸಾಡ್ಸ್ನಲ್ಲಿರುವ ಪ್ರತಿಮೆ ಅನಾವರಣ ಮಾಡಿದ್ದು, ಇದು ಪ್ರತೀ ಸೆಲೆಬ್ರಿಟಿಗೂ ಮೈಲಿಗಲ್ಲಿನ ಕ್ಷಣವಿದ್ದಂತೆ ಎಂದು ಅಲ್ಲು ಬರೆದುಕೊಂಡಿದ್ದಾರೆ.

ಅಲ್ಲು ಅರ್ಜುನ್ ಪತ್ನಿ ಮಗಳೊಂದಿಗೆ ದುಬೈ ಪ್ರವಾಸಕ್ಕೆ ತೆರಳಿದ್ದು, ಕುಟುಂಬ ಸಮೇತರಾಗಿ ಹೋಗಿ, ಮೇಣದ ಪ್ರತಿಮೆ ಅನಾವರಣಗೊಳಿಸಿದ್ದಾರೆ. ಅಲ್ಲು ಅರ್ಜುನ್‌ಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದು, ಎಲ್ಲರಿಗೂ ಇದು ಖುಷಿ ಕೊಟ್ಟಿದೆ. ವಿಶೇಷ ಅಂದ್ರೆ ಅಲ್ಲು ಅರ್ಜುನ್ ಹಿಂಬದಿಯಿಂದ ಪೋಸ್ ಕೊಟ್ಟಿರುವ ಫೋಟೋ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಆದರೆ ಪೂರ್ತಿ ಮುಖ ಕಾಣುವ ಫೋಟೋ ಇನ್ನು ರಿಲೀಸ್ ಆಗಬೇಕಷ್ಟೇ..

ವೀರ್ ಸಾವರ್ಕರ್ ಚಿತ್ರದಲ್ಲಿ ನಟಿಸಲು ಸಂಭಾವನೆಯೇ ಪಡೆದಿಲ್ಲವಂತೆ ನಟಿ ಅಂಕಿತಾ..

ಮದುವೆಯಾಗಿಲ್ಲ.. ಎಂಗೇಜ್‌ಮೆಂಟ್ ಅಷ್ಟೇ ಆಗಿದ್ದು ಎಂದು ಸ್ಪಷ್ಟನೆ ನೀಡಿದ ನಟಿ ಅದಿತಿ ರಾವ್ ಹೈದರಿ

ಬೆಂಗಳೂರಿನ ನೀರಿನ ಸಮಸ್ಯೆಗೆ ಕನ್ನಡದಲ್ಲೇ ಪರಿಹಾರ ತಿಳಿಸಿದ ಮೆಗಾಸ್ಟಾರ್ ಚಿರಂಜೀವಿ

- Advertisement -

Latest Posts

Don't Miss