Bollywood News: ಬಾಲಿವುಡ್ ನಟ ನಟಿಯರು ಮೊದಲೆಲ್ಲ ಸಖತ್ ಫೇಮಸ್ ಇದ್ದರು, ಅವರೇನೇ ಮಾಡಿದರೂ ಅದು ಟ್ರೆಂಡಿಂಗ್‌ನಲ್ಲಿ ಇರುತ್ತಿತ್ತು. ಜನರ ಪ್ರೀತಿಯೇ ಅವರನ್ನು ಟಾಪ್‌ನಲ್ಲಿ ಇಟ್ಟಿತ್ತು. ಆದರೆ ಈಗ ಕಾಲ ಬದಲಾಗಿದೆ. ಬಾಲಿವುಡ್ನ ಕೆಲವು ನಟ ನಟಿಯರ ಒಂದೊಂದೇ ಬಂಡವಾಳ ಬಯಲಾಗುತ್ತಿದೆ. ಸಾಮಾಜಿಕ ಜಾಲತಾಣ ಆ್ಯಾಕ್ಟಿವ್ ಆದ ಬಳಿಕ, ವೀಡಿಯೋ ಮೂಲಕ ಬಾಲಿವುಡ್ ಕರಾಳ ಮುಖ ಬಯಲಾಗುತ್ತಿದೆ.
ಇನ್ನು ವಿಷಯವೇನೆಂದರೆ, ಹಲವು ಸಿನಿಮಾ ನಟ ನಟಿಯರು ತಾವು ಈಗ ವೆಜಿಟೇರಿಯನ್ ಆಗಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೇ, ಪ್ರಾಣಿಗಳಿಗೆ ಹಿಂಸೆ ಕೊಡುವುದು ತಪ್ಪು ಅನ್ನೋ ಕಾರಣಕ್ಕಾಗಿ ನಾವು ಶಾಖಾಹಾರಿಯಾಗಿದ್ದೇವೆ ಎಂದಿದ್ದಾರೆ. ಕೆಲವರು ನಿಜವಾಗಿಯೂ ವೆಜಿಟೇರಿಯನ್ ಆಗಿದ್ದಾರೆ. ಆದರೆ ನಟಿ ಮಲೈಕಾ ಅರೋರಾ ತಾವು ವೆಜಿಟೇರಿಯನ್ ಎಂದು ವೀಡಿಯೋ ಮುಂದೆ ಹೇಳಿಕೊಂಡು, ಸೆಟ್ನಲ್ಲಿ ನಾನ್‌ವೆಜ್ ಊಟ ಮಾಡುತ್ತಿದ್ದಾರೆ.
ಮಲೈಕಾ ನಾನ್‌ವೆಜ್ ತಿನ್ನುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ ನಾರ್ಮಲ್ ಆಗಿ ಅಪ್ಲೋಡ್ ಆಗಿತ್ತು. ಆದರೆ ಮಲೈಕಾ ತಾನು ವೆಜಿಟೇರಿಯನ್ ಎಂದು ನಾನ್‌ವೆಜ್ ತಿಂತಿದ್ದಾರೆ ಅಂತಾ ಕೆಲವರು ಹೇಳಿದಾಗ, ಮಲೈಕಾ ಬಂಡವಾಳ ಬಯಲಾಗಿದೆ. ಆದರೆ ಇದೀಗ ನಾನು ವೆಜಿಟೇರಿಯನ್ ಎನ್ನುವ ನಟ ನಟಿಯರ ಮೇಲೆ ಅನುಮಾನ ಬರುಂತೆ ಮಾಡಿದೆ.
ಅಲ್ಲದೇ ತಾನು ಶಾಖಹಾರಿ ಎಂದುಕೊಂಡು ಮಲೈಕಾ ಪೇಟಾ ಸಂಸ್ಥೆಯ ಮೆಂಬರ್ ಆಗಿದ್ದಾರೆ. ಪೇಟಾ ಸಂಸ್ಥೆಯಲ್ಲಿ ಯಾರು ಮೆಂಬರ್ ಆಗಿರುತ್ತಾರೋ, ಅವರು ಪ್ರಾಣಿಹಿಂಸೆ ಮಾಡುವಂತಿಲ್ಲ. ಪ್ರಾಣಿಗಳನ್ನು ಸಾಕಿರಬೇಕು. ಅಂಥವರನ್ನು ಪೇಟಾ ಸಂಸ್ಥೆ ಅವಾರ್ಡ್ ನೀಡಿ, ಗೌರವಿಸುತ್ತದೆ. ಬಾಲಿವುಡ್‌ನಲ್ಲಿ ಸನ್ನಿಲಿಯೋನ್ ಸೇರಿ, ಹಲವು ಸೆಲೆಬ್ರಿಟಿಗಳಿಗೆ ಈ ಅವಾರ್ಡ್ ಸಿಕ್ಕಿದೆ.




