Thursday, July 25, 2024

Latest Posts

ಚಂಡೀಘಡ್ ಏರ್ಪೋರ್ಟ್‌ನಲ್ಲಿ ನಟಿ, ಸಂಸದೆ ಕಂಗನಾ ರಾಣಾವತ್‌ಗೆ ಕಪಾಳಮೋಕ್ಷ

- Advertisement -

Movie News: ಚಂಢೀಗಢ್ ಏರ್ಪೋರ್ಟ್‌ನಿಂದ ದೆಹಲಿಗೆ ತೆರಳುತ್ತಿರುವಾಗ, ಏರ್ಪೋರ್ಟ್‌ನಲ್ಲಿ ನಟಿ, ಸಂಸದೆ ಕಂಗನಾ ರಾಣಾವತ್‌ಗೆ, ಮಹಿಳಾ ಸಿಐಎಸ್‌ಎಫ್‌ ಕಪಾಳಕ್ಕೆ ಹೊಡೆದಿದ್ದಾರೆ.

ಕಂಗನಾ ಹಿಮಾಚಲಪ್ರದೇಶದ ಮಂಡಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದು, ಗೆಲುವು ಸಾಧಿಸಿ, ಸಂಸದೆಯಾಗಿದ್ದಾರೆ. ಈ ಖುಷಿಯಲ್ಲಿರುವಾಗಲೇ, ಕಂಗನಾಗೆ ಮತ್ತೊಂದು ಶಾಕ್ ಕಾದಿತ್ತು. ಇಂದು ಕಂಗನಾ ಚಂಡೀಘಡ್‌ದಿಂದ ದೆಹಲಿಗೆ ತೆರಳಲು, ಏರ್ಪೋರ್ಟ್‌ನಲ್ಲಿ ಕಾಯುತ್ತ ನಿಂತಾಗ, ಅಲ್ಲಿದ್ದ ಮಹಿಳಾ ಸಿಐಎಸ್ಎಫ್‌ ಸಿಬ್ಬಂದಿ, ಕುಲ್ವಿಂದರ್ ಕೌರ್ ಎಂಬಾಕೆ ಕಂಗನಾಳ ಕಪಾಳಕ್ಕೆ ಬಾರಿಸಿದ್ದಾರೆ.

ಈಕೆ ಯಾಕೆ ಕಂಗನಾಗೆ ಕಪಾಳ ಮೋಕ್ಷ ಮಾಡಿದ್ದಾಳೆಂದು ತಿಳಿದಿಲ್ಲ. ಕುಲ್ವಿಂದರ್‌ರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಇರುವ ಸಿಸಿಟಿವಿ ದೃಶ್ಯವನ್ನು ಕೂಡ ಪರಿಶೀಲಿಸಲಾಗುತ್ತಿದೆ. ರೈತರ ಹೋರಾಟದ  ಬಗ್ಗೆ ಕಂಗನಾ ನೆಗೆಟಿವ್ ಆಗಿ ಮಾತನಾಡಿದ್ದರು. ಈ ಕಾರಣಕ್ಕಾಗಿ, ಕುಲ್ವಿಂದರ ಅದೇ ಆಕ್ರೋಶದಿಂದ ಕಂಗನಾಗೆ ಕಪಾಳಮೋಕ್ಷ ಮಾಡಿದ್ದಾರೆಂದು ಹೇಳಲಾಗುತ್ತಿದೆ.

June 7ಕ್ಕೆ ತೆರೆಕಾಣಲಿದೆ ಬಹು ನಿರೀಕ್ಷಿತ ಕ್ರೀಡಾ ಕಥೆ ‘ಸಹಾರಾ’

ಬಹುನಿರೀಕ್ಷಿತ ‘ಕೋಟಿ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ!

ಚಿಕ್ಕಣ್ಣ ಮತ್ತೆ ಹೀರೋ: ಎ..ಪಿ.ಅರ್ಜುನ್ ನಿರ್ಮಾಣ

- Advertisement -

Latest Posts

Don't Miss