ಉಡುಪಿ ಕೃಷ್ಣಮಠಕ್ಕೆ ಭೇಟಿ ಕೊಟ್ಟ ನಟಿ ಸಾಯಿ ಪಲ್ಲವಿ

Movie News: ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ, ಉಡುಪಿಯ ಕೃಷ್ಣಮಠಕ್ಕೆ ಭೇಟಿ ಕೊಟ್ಟು, ಶ್ರೀಕೃಷ್ಣನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ, ಮಠಾಧೀಶರನ್ನು ಭೇಟಿಯಾಗಿ, ಆಶೀರ್ವಾದ ಪಡೆದರು.

ಖಾಸಗಿ ಕಾರ್ಯಕ್ರಮದ ಸಲುವಾಗಿ, ಸಾಯಿ ಪಲ್ಲವಿ ಉಡುಪಿಗೆ ಬಂದಿದ್ದರು. ಈ ವೇಳೆ ಉಡುಪಿ ಕೃಷ್ಣನ ದರ್ಶನ ಪಡೆದರು. ಅಲ್ಲದೇ, ಕಾಣಿಯೂರು ಮಠಕ್ಕೆ ತೆರಳಿ, ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದಿದ್ದಾರೆ. ಮಠಕ್ಕೆ ಭೇಟಿ ನೀಡಿದ ನಟಿಗೆ, ಶಾಲು ಹೊದಿಸಿ, ಹಣ್ಣನ್ನು ಪ್ರಸಾದವಾಗಿ ನೀಡಲಾಯಿತು.

ತಮ್ಮ ನೈಜ ಅಭಿನಯದ ಮೂಲಕ ಮನೆಮಾತಾಗಿರುವ ಸಾಯಿ ಪಲ್ಲವಿ, ಅತ್ಯದ್ಭುತ ನಟಿ. ಅತ್ಯುತ್ತಮ ನೃತ್ಯಗಾರ್ತಿ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಕಳೆದ ಒಂದು ವರ್ಷದಿಂದ ಸಾಯಿ ಪಲ್ಲವಿಯ ಯಾವ ಹೊಸ ಸಿನಿಮವೂ ರಿಲೀಸ್ ಆಗಲಿಲ್ಲ. ಸಮಾಜ ಸೇವೆಯೊಂದಿಗೆ, ಜನರಿಗೆ ತಪ್ಪು ಸಂದೇಶ ನೀಡುವ ಆ್ಯಡ್‌ಗಳಲ್ಲಿ ತಾನು ನಟಿಸುವುದಿಲ್ಲವೆಂದು ಸಾಯಿ ಪಲ್ಲವಿ ಹೇಳಿದ್ದರು. ಅದರಂತೆ ತಮಗೆ ಬಂದಿದ್ದ ಕೋಟಿ ರೂಪಾಯಿ ಆಫರ್‌ನ ಕ್ರೀಮ್‌ ಆ್ಯಡನ್ನು ಸಹ ಸಾಯಿ ಪಲ್ಲವಿ ನಿರಾಕರಿಸಿದ್ದರು.

ಇಷ್ಟೆಲ್ಲ ಆದರೂ, ದಿ ಕಾಶ್ಮೀರ್ ಫೈಲ್ಸ್ ಚಿತ್ರ ರಿಲೀಸ್ ಆದಾಗ, ನಡೆದ ಕೋಮುವಾದದ ಘಟನೆಯ ಬಗ್ಗೆ ಆಕೆ ಹಿಂಸೆ ಮಾಡುವುದು ತಪ್ಪು ಅನ್ನೋ ಅರ್ಥ ಬರುವಂತೆ ಒಂದು ಹೇಳಿಕೆ ಕೊಟ್ಟಿದ್ದರು. ಆಕೆಯ ಒಳ್ಳೆಯತನದ ಮುಂದೆ, ಆಕೆ ಕೊಟ್ಟ ಒಂದೇ ಒಂದು ಹೇಳಿಕೆಯಿಂದ, ಕೆಲವರು ಆಕೆಯನ್ನು ವಿರೋಧಿಸುತ್ತಿರುವುದು ಮಾತ್ರ ವಿಪರ್ಯಾಸದ ಸಂಗತಿ.

ಬಿಗ್‌ಬಾಸ್ ಮನೆಯಲ್ಲೇ ಪತಿ-ಪತ್ನಿ ಮಧ್ಯೆ ಡಿವೋರ್ಸ್ ಮಾತುಕತೆ..

ಹೊಡೆದಾಡಿಕೊಂಡ ಬಿಗ್‌ಬಾಸ್ ಫ್ಯಾನ್ಸ್: ವಾಹನಗಳು ಜಖಂ

ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಯಶ್..?: ಸ್ಪಷ್ಟನೆ ನೀಡಿದ ಪ್ರಶಾಂತ್ ನೀಲ್

About The Author