Movie News: ನಟಿ ಸೋನಲ್ ಮಂಥೆರೋ ಮತ್ತು ನಿರ್ದೇಶಕ ತರುಣ್ ಸುಧೀರ್ ಆಗಸ್ಟ್ 10ರಂದು ವಿವಾಹವಾಗುತ್ತಿದ್ದು, ಈಗಾಗಲೇ ಎಲ್ಲೆಡೆ ಅವರ ವೆಡ್ಡಿಂಗ್ ಕಾರ್ಡ್ ವೈರಲ್ ಆಗಿದೆ.
ಡಿಫ್ರೆಂಟ್ ಆಗಿರುವ ವೆಡ್ಡಿಂಗ್ ಕಾರ್ಡ್‌ನಿಂದಲೇ ಎಲ್ಲರ ಗಮನ ಸೆಳೆದಿರುವ ಜೋಡಿ, ಉಪಯುಕ್ತವಾಗುವ ಕಾರ್ಡ್ ರೆಡಿ ಮಾಡಿಸಿದೆ. ಈ ಕಾರ್ಡ್‌ನಲ್ಲಿ ಬುಕ್, ಪೆನ್, ಗಿಡದ ಬೀಜಗಳನ್ನು ಹಾಕಲಾಗಿದೆ. ಮದುವೆ ಮುಗಿದ ಬಳಿಕ, ವೆಡ್ಡಿಂಗ್ ಕಾರ್ಯ್ ಮಣ್ಣಿನಲ್ಲಿ ಹಾಕಿದರೂ, ಅಲ್ಲಿ ಉಪಯುಕ್ತವಾದ ಗಿಡ ಬೆಳೆಯುತ್ತದೆ.
ಇದು ವೆಡ್ಡಿಂಗ್ ಕಾರ್ಡ್ ವಿಷಯವಾದರೆ, ನಟಿ ಸೋನಲ್ ಫ್ರೆಂಡ್ಸ್, ಫ್ಯಾಮಿಲಿ ಸೇರಿ, ಅವರಿಗೆ ಬ್ಯಾಚುಲರ್ ಪಾರ್ಟಿ ನೀಡಿದೆ. ಈ ವೀಡಿಯೋವನ್ನು ಸೋನಲ್ ಶೇರ್ ಮಾಡಿದ್ದು, ಸಖತ್ ಎಂಜಾಯ್ ಮಾಡಿದ್ದಾರೆ.
ಇನ್ನು ಈ ಜೋಡಿ ಈಗಾಗಲೇ ಹಲವು ಸಿನಿ ಗಣ್ಯರಿಗೆ ವೆಡ್ಡಿಂಗ್ ಕಾರ್ಡ್ ನೀಡಿದ್ದು, ವಿವಾಹಕ್ಕೆ ಆಮಂತ್ರಿಸಿದೆ. ತರುಣ್ ಸುಧೀರ್ ತಮ್ಮ ಮದುವೆಯ ಮೊದಲ ಕಾರ್ಡನ್ನು ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ನೀಡಿದ್ದರು. ವಿವಾಹದ ದಿನಾಂಕ ಚೇಂಜ್ ಮಾಡಲು ತರುಣ್ ನಿರ್ಧರಿಸಿದ್ದಾಗ, ಡೇಟ್ ಚೇಂಜ್ ಮಾಡಬೇಡ ನಾನು ಮದುವೆಗೆ ಬರುತ್ತೇನೆ ಎಂದು ದರ್ಶನ್ ಹೇಳಿದ್ದಾರಂತೆ.
ಸೋನಲ್ ಬ್ಯಾಚುಲರ್ ಪಾರ್ಟಿ ಎಂಜಾಯ್ ಮಾಡಿದ ವೀಡಿಯೋ ನೋಡಬೇಕೆಂದಲ್ಲಿ ಇಲ್ಲಿ ಕ್ಲಿಕ್ ಮಾಡಿ.