ಲಕ್ಷಣ ಸಿರಿಯಲ್ ನಟಿಯಾಗಿರುವ ವಿಜಯ ಲಕ್ಷ್ಮೀ, ನಕ್ಷತ್ರ ಅನ್ನೋ ಪಾತ್ರ ಮಾಡಿ, ಎಲ್ಲರ ಮನೆ ಮಾತಾಗಿದ್ದಾರೆ. ಇಂದು ವಿಜಯ ಲಕ್ಷ್ಮೀ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಮ್ಮ ಸಿನಿನ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ.
ಲಕ್ಷಣ ಸಿರಿಯಲ್‌ನಲ್ಲಿ ನಟಿಸೋಕ್ಕೆ ಮುನ್ನ ಮತ್ತು ಈಗ ವಿಜಯ ಲಕ್ಷ್ಮೀ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಮೊದಲು ನನ್ನನ್ನು ಯಾರೂ ಗುರುತಿಸುತ್ತಿರಲಿಲ್ಲ. ಈಗ ಎಲ್ಲರೂ ನನ್ನನ್ನು ಕಂಡುಹಿಡಿತಾರೆ. ಈಗ ನಾನು ತಾಳ್ಮೆ ಕಲಿತಿದ್ದೇನೆ. ಯೋಚಿಸಿ ಹಣ ಖರ್ಚು ಮಾಡುತ್ತೇನೆ. ಅಪ್ಪ ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ತೇನೆ. ಹೀಗೆ ಸುಮಾರು ಜೀವನ ಪಾಠ ಕಲಿತಿದ್ದೇನೆ ಅೞತಾರೆ ವಿಜಯ ಲಕ್ಷ್ಮೀ.
ಇನ್ನು ಕಪ್ಪಗಿದ್ದರೂ ಲಕ್ಷಣವಾಗಿರುವ ಹುಡುಗಿ ಬೇಕು ಅಂತಾ ಲಕ್ಷಣ ಸಿರಿಯಲ್‌ನವರು ಆಡಿಶನ್‌ಗೆ ಕರಿದಾಗ, ವಿಜಯ ಲಕ್ಷ್ಮೀ ಒಂದು ಟ್ರೈ ಮಾಡೋಣ ಅಂತಾ ಸುಮ್ಮನೆ ಅರ್ಜಿ ಹಾಕಿದ್ದರು. ಆದ್ರೆ ಸೆಲೆಕ್ಟ್ ಆದೆ. ನನಗೆ ಚಿಕ್ಕಂದಿನಿಂದಲೇ ನಟಿಯಾಗುವ ಆಸೆಯೇನು ಇರಲಿಲ್ಲ. 10ನೇ ತರಗತಿ ತನಕ ನಾನು ಉತ್ತಮ ವಿದ್ಯಾರ್ಥಿನಿಯಾಗಿದ್ದೆ. ಆದ್ರೆ ನೃತ್ಯ, ನಾಟಕದಲ್ಲೆಲ್ಲಾ ಭಾಗವಹಿಸಿರಲಿಲ್ಲ. ಪಿಯುಸಿಗೆ ಬಂದ ಬಳಿಕ ನನಗೆ ಇದರಲ್ಲಿ ಆಸಕ್ತಿ ಬೆಳೆಯಿತು.
ನನ್ನ ಶಿಕ್ಷಕರು, ಪ್ರಾಂಶುಪಾಲರು, ನಾಟಕದಲ್ಲಿ ಅಭಿನಯಿಸಲು ಸಪೋರ್ಟ್ ಮಾಡಿದ್ರು. ಹಾಗಾಗಿ ಇನ್ನೂ ಇಂಟ್ರೆಸ್ಟ್ ಬೆಳೆಯುತ್ತ ಹೋಯಿತು. ಇದಾದ ಬಳಿಕ ನನಗೆ ಬೇರೆ ಜಾಬ್ ಮಾಡ್ಬೇಕು ಅನ್ನೋದು ತಲೆಯಲ್ಲಿರಲಿಲ್ಲ. ಬದಲಾಗಿ ನಾನು ನಟಿ ಆಗಲೇಬೇಕೆಂದು ಆ ಅನ್ನಿಸಿತು. ನನಗೆ ಎಲ್ಲರೂ ಲಕ್ಷಣವಾಗಿದ್ದೀಯ ಎಂದು ಹೇಳಿದ್ದಾರೆ. ಆದ್ರೆ ಈ ರೀತಿ ಅತ್ಯುತ್ತಮವಾದ ಪಾತ್ರ ಸಿಗತ್ತೆ ಅೞತಾ ನಾನು ಯೋಚಿಸಿಯೇ ಇರಲಿಲ್ಲ ಅಂತಾರೆ ವಿಜಯ ಲಕ್ಷ್ಮೀ.

