Friday, November 22, 2024

Latest Posts

ಪ್ರಸವದ ಬಳಿಕ, ಯಾವ ರೀತಿ ದೇಹದಲ್ಲಿರುವ ಕೊಳೆಯನ್ನು ತೆಗೆದು ಹಾಕಬೇಕು..?

- Advertisement -

Health Tips: ಬಾಣಂತನದ ಸಮಯದಲ್ಲಿ ತಾಯಿಯಾದವಳು ಎಷ್ಟು ಕಾಳಜಿ ವಹಿಸುತ್ತಾಳೋ, ಅಷ್ಟು ಉತ್ತಮ. ಈ ವೇಳೆ ತಾಯಿ ಮಗು ಇಬ್ಬರೂ ಬೆಚ್ಚಗಿರಬೇಕು. ಉತ್ತಮ ಆಹಾರವನ್ನೂ ಸೇವಿಸಬೇಕು. ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಜೊತೆಗೆ ಕೆಲ ಪದಾರ್ಥಗಳನ್ನು ಸೇವಿಸಿ, ದೇಹದಲ್ಲಿರುವ ಕೊಳೆಯನ್ನು ಸ್ವಚ್ಛಗೊಳಿಸಬೇಕು. ಹಾಗಾದರೆ ಇದಕ್ಕಾಗಿ ಏನು ಸೇವಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಪ್ರಸವದ ಬಳಿಕ ನಿಮ್ಮ ದೇಹ ಸ್ವಚ್ಛವಾಗಬೇಕು ಅಂದ್ರೆ, ನೀವು ದಶಮೂಲಾರಿಷ್ಠದ ಸೇವನೆ ಮಾಡಬೇಕು. ಇದನ್ನು ಸೇವಿಸಲು ನೀವು ನಿಮ್ಮ ಮನೆಯ ಹಿರಿಯರ ಅಥವಾ ವೈದ್ಯರ ಸಲಹೆಯನ್ನೂ ಪಡೆಯಬಹುದು.

ಪ್ರತಿದಿನ 4 ಸ್ಪೂನ್ ದಶಮೂಲಾರಿಷ್ಠವನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಬೇಕು,. ಬೆಳಿಗ್ಗೆ ತಿಂಡಿ ತಿಂದ ಮೇಲೆ, ಮಧ್ಯಾಹ್ನ ಊಟದ ಬಳಿಕ, ಸಂಜೆ ಹಾಲು ಕುಡಿದ ಬಳಿಕ ಇದನ್ನು ಸೇವಿಸಬೇಕು. 21 ದಿನಗಳ ಕಾಲ ನೀವು ಇದನ್ನು ಸೇವಿಸಿದರೆ, ನಿಮ್ಮ ದೇಹದ ಒಳಗಿನ ಸ್ವಚ್ಛತೆಯಾಗುತ್ತದೆ.

ಇದರೊಂದಿಗೆ ನೀವು ನಿಮ್ಮ ದೇಹವನ್ನು ಸಮವಾಗಿ ಇಡಬೇಕು. ಅಂದರೆ, ದೇಹದಲ್ಲಿ ಹೆಚ್ಚು ಉಷ್ಣತೆಯೂ ಇರಬಾರದು, ಹೆಚ್ಚು ತಂಪೂ ಇರಬಾರದು. ಈ ಎರಡೂ ಪ್ರಮಾಣ ಸಮವಾಗಿರಬೇಕು. ಇದರಲ್ಲಿ ಒಂದರ ಪ್ರಮಾಣ ಹೆಚ್ಚಾದರೂ ಕೂಡ, ನಿಮಗೂ ನಿಮ್ಮ ಮಗುವಿನ ಆರೋಗ್ಯಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ. ಹಾಗಾಗಿ ಸರಿಯಾದ ಆಹಾರ ಸೇವನೆ ಮಾಡಿ, ದೇಹದ ಸಮತೋಲನವನ್ನು ಕಾಪಾಡಬೇಕು.

ಇನ್ನು ಪ್ರಸವದ ಬಳಿಕ, ಬಾಣಂತನದಲ್ಲಿ ಸರಿಯಾದ ಸಮಯಕ್ಕೆ, ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಚೆನ್ನಾಗಿ ವಿಶ್ರಾಂತಿ ಮಾಡಬೇಕು. ಬಿಸಿ ನೀರು, ಹಸುವಿನ ಹಾಲು, ತುಪ್ಪ, ಮೊಸರು, ಮಜ್ಜಿಗೆ, ಹಣ್ಣು-ತರಕಾರಿ ಸೇವನೆ ಮಾಡುವುದರಿಂದ ನಿಮ್ಮ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ದೆ ಹಾಲು ಹೆಚ್ಚಾಗುತ್ತದೆ.

ಐಸ್ ವಾಟರ್, ಐಸ್ ಕ್ರೀಮ್ ಸೇವನೆಯಿಂದ ದೇಹ ತಂಪಾಗಿರತ್ತಾ..?

ಗೋಧಿ ಬಳಕೆಯಿಂದ ಆರೋಗ್ಯಕ್ಕಾಗುವ ಲಾಭವೇನು..? ಅತಿಯಾಗಿ ಚಪಾತಿ ತಿಂದರೆ ಏನಾಗತ್ತೆ..?

ಅಂಜೂರದಿಂದ ಆಗುವ ಆರೋಗ್ಯ ಲಾಭವೇನು..? ಇದನ್ನು ಹೇಗೆ ಸೇವಿಸಬೇಕು..?

- Advertisement -

Latest Posts

Don't Miss