Friday, August 29, 2025

Latest Posts

ಓರ್ವ ಮನುಷ್ಯನ ಮರಣದ ಬಳಿಕ, ಅವರ ಈ 3 ವಸ್ತುಗಳನ್ನು ಬಳಸಬಾರದಂತೆ..

- Advertisement -

ಓರ್ವ ಮನುಷ್ಯನ ಮರಣದ ಬಳಿಕ, ಅವರ ಕೆಲ ವಸ್ತುಗಳನ್ನು ಬಳಸಬಾರದಂತೆ. ಹಾಗೆ ಬಳಸುವುದರಿಂದ, ಕೆಲ ದರಿದ್ರಗಳು ನಮ್ಮನ್ನು ಸುತ್ತಿಕೊಳ್ಳುತ್ತದೆ. ನಮ್ಮ ಜೀವನದ ನೆಮ್ಮದಿ.ನ್ನೇ ಹಾಳು ಮಾಡುತ್ತದೆ ಎಂದು ನಂಬಲಾಗಿದೆ. ಹಾಗಾದ್ರೆ ಸತ್ತವರ ಯಾವ ವಸ್ತುಗಳನ್ನು ನಾವು ಬಳಸಬಾರದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ವಸ್ತು : ಸತ್ತವರ ಆಭರಣವನ್ನು ಧರಿಸಬಾರದು. ಕೆಲವೊಮ್ಮೆ ಕೆಲವರು ತಾವು ಸತ್ತ ಮೇಲೆ ತಮ್ಮ ಚಿನ್ನಾಭರಣ ತಮ್ಮ ಮಗಳಿಗೆ ಕೊಡಬೇಕು. ಅಥವಾ ಮುಂದೆ ಬರುವ ಸೊಸೆಗೆ ಕೊಡಬೇಕು ಎಂಬ ಆಸೆ ಹೊಂದಿರುತ್ತಾರೆ. ಆ ವೇಳೆ ಆ ಆಭರಣವನ್ನು ನೀವು ಅವರಿಗೆ ಕೊಡಬಹುದು. ಆದರೆ ಸತ್ತವರಿಗೆ ಆ ಚಿನ್ನದ ಮೇಲೆ ಆಸೆ ಇದ್ದಲ್ಲಿ, ಅದನ್ನು ಮಾರಿ ಬೇರೆ ಚಿನ್ನಾಭರಣ ಮಾಡಿಸಿಕೊಳ್ಳಬಹುದು.

ಎರಡನೇಯ ವಸ್ತು : ಮೃತರ ಬಟ್ಟೆಯನ್ನ ಯಾರೂ ಧರಿಸಬಾರದು. ಅದನ್ನ ಮನೆಯಲ್ಲೂ ಇಡಕೂಡದು. ಆ ಬಟ್ಟೆಯನ್ನು ದಾನ ಮಾಡಿಬಿಡಿ. ಯಾಕೆ ಮೃತರ ಬಟ್ಟೆಗಳನ್ನು ಧರಿಸಬಾರದು ಅಂದ್ರೆ, ಅವರು ಬದುಕಿದ್ದಾಗ, ಅವರಿಗೆ ಅದು ಅಚ್ಚುಮೆಚ್ಚಾಗಿರುತ್ತದೆ. ಅದರ ಮೇಲೆ ಅವರಿಗೆ ಆಸೆ ಇರುತ್ತದೆ. ಸತ್ತ ಮೇಲೂ ಅದರ ಮೇಲೆ ಅವರು ಆಸೆ ಹೊಂದಿರುತ್ತಾರೆ. ಅದನ್ನು ಪಡಿಯುವುದಕ್ಕೆ ಪ್ರಯತ್ನಿಸುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿ ಸತ್ತ ವ್ಯಕ್ತಿಯ ಬಟ್ಟೆ ಧರಿಸಬಾರದು.

ಮೂರನೇಯ ವಸ್ತು : ಮೃತ ವ್ಯಕ್ತಿ ಧರಿಸುತ್ತಿದ್ದ ವಾಚನ್ನ ನೀವು ಧರಿಸಬಾರದು. ಇದರಿಂದ ಅದರಲ್ಲಿರುವ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮ ನಿಮ್ಮ ಮೇಲೆ ಬೀರಬಹುದು. ಸತ್ತ ವ್ಯಕ್ತಿಯ ಬಗ್ಗೆ ಪದೇ ಪದೇ ನಿಮಗೆ ಕೆಟ್ಟ ಕನಸು ಬೀಳಬಹುದು. ಹಾಗಾಗಿ ಮೃತ ವ್ಯಕ್ತಿಯ ವಾಚ್ ಧರಿಸಬೇಡಿ. ಇಷ್ಟೇ ಅಲ್ಲದೇ, ಬದುಕಿದ್ದಾಗ, ಅವರಿಗೆ ತುಂಬ ಇಷ್ಟವಿದ್ದ ವಸ್ತು. ಅವರು ಅದನ್ನೂ ಯಾರಿಗೂ ನೀಡಲು ಇಚ್ಛಿಸದ ವಸ್ತುಗಳನ್ನ, ಅವರ ಮರಣದ ಬಳಿಕ ಯಾರೂ ಬಳಸಕೂಡದು. ಹಾಗೇನಾದರೂ ಬಳಸಿದರೆ, ಅದರ ನಕಾರಾತ್ಮಕ ಪರಿಣಾಮವನ್ನು ನೀವು ಅನುಭವಿಸಬೇಕಾಗುತ್ತದೆ.

ಬ್ರಾಹ್ಮಿ ಮುಹೂರ್ತದಲ್ಲಿ ಇಂಥ ತಪ್ಪನ್ನ ಎಂದಿಗೂ ಮಾಡಬೇಡಿ..

ಇಂಥ ಜನರನ್ನು ಎಂದಿಗೂ ಮನೆಗೆ ಬರಮಾಡಿಕೊಳ್ಳಬೇಡಿ..

ನಿಮ್ಮ ಹಣೆಬರದಲ್ಲಿರುವ ಈ 5 ವಿಚಾರವನ್ನು ಯಾರೂ ಬದಲಾಯಿಸಲಾಗುವುದಿಲ್ಲ..

- Advertisement -

Latest Posts

Don't Miss