ಅರ್ಥಪೂರ್ಣವಾದ, ಹಲವರ ಜೀವನಕ್ಕೆ ಸೂಟ್ ಆಗುವಂಥ ರ್ಯಾಪ್ ಸಾಂಗ್‌ಗಳನ್ನ ಮಾಡಿ ಫೇಮಸ್ ಆಗಿರುವ ಆಲ್ ಓಕೆ ಅಲೋಕ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ತಮಗೆ ಹಾಡಿನ ಮೇಲೆ ಆಸಕ್ತಿ ಬಂದಿದ್ದು ಹೇಗೆ..? ತಾವು ಹುಟ್ಟಿದ್ದೆಲ್ಲಿ, ಬೆಳೆದಿದ್ದೆಲ್ಲಿ..? ತಾವು ಸಾಂಗ್ ಕ್ರಿಯೇಟ್ ಮಾಡಿದ್ದರ ಬಗ್ಗೆ ಅಲೋಕ್ ಮಾತನಾಡಿದ್ದಾರೆ.
ಅಲೋಕ್ ಹುಟ್ಟಿದ್ದು ಬೆಂಗಳೂರಲ್ಲಾದ್ರೂ ಬೆಳೆದಿದ್ದರು ಹುಬ್ಬಳ್ಳಿಯಲ್ಲಿ. ಅಪ್ಪನ ಕೆಲಸದ ನಿಮಿತ್ತ ಕೆಲ ವರ್ಷ ಹುಬ್ಬಳ್ಳಿಯಲ್ಲಿದ್ದ ಅಲೋಕ್, ನಂತರ ಮತ್ತೆ ಬೆಂಗಳೂರಿಗೆ ಬಂದ್ರು. ಹಲವು ವರ್ಷ ಬೆಂಗಳೂರಿನ ಹಲವೆಡೆ ಇದ್ದು, ಇಲ್ಲೇ ವಿದ್ಯಾಭ್ಯಾಸ ಮುಗಿಸಿದ್ರು. ಹೆಚ್ಚು ಕಲಿಯದಿದ್ರು ಕೂಡ ಸಂಗೀತದಲ್ಲಿ ಆಸಕ್ತಿ ಬೆಳೆದಿತ್ತು. ಅಪ್ಪ, ಅತ್ತೆ, ಇನ್ನುಳಿದ ಹಲವು ಸಂಬಂಧಿಕರು ಸುಮಧುರವಾಗಿ ಹಾಡುತ್ತಿದ್ದರು. ಮನೆಯಲ್ಲಿ ಟೇಪ್‌ರೆಕಾರ್ಡ್ ಹಾಕಿ ಹಾಡು ಕೇಳುತ್ತಿದ್ದ ಕಾರಣ, ಅಲೋಕ್‌ಗೆ ಸಂಗೀತದ ಮೇಲೆ ಆಸಕ್ತಿ ಬೆಳೆಯಿತು.
ಆದ್ರೆ ವಿದ್ಯೆಯಲ್ಲಿ ಅಲೋಕ್ ಹಿಂದಿದ್ದರು. ಪಿಯುಸಿಯಲ್ಲಿ ಅಲೋಕ್ ಫೇಲ್ ಆಗಿದ್ದಾಗ, ಅವಮಾನವನ್ನು ಅನುಭವಿಸಿದ್ದರಂತೆ. ಆಗ ತಮ್ಮವರು ಯಾರು ಹೊರಗಿನವರು ಯಾರು, ಚೆನ್ನಾಗಿ ಓದಿ, ಬೆಳೆದು ಸೆಟಲ್ ಆದಾಗ ಮಾತ್ರ ಜನ ಬೆಲೆ ಕೊಡ್ತಾರೆ ಅನ್ನೋ ಅರಿವು ತನಗಾಯ್ತು ಅಂತಾರೆ ಅಲೋಕ್. ಇದೇ ಜೀವನ ಪಾಠದಿದಂಲೇ ಅಲೋಕ್ ರ್ಯಾಪರ್ ಆಗಿದ್ದು. ಅವರ ಹಲವು ಸಾಂಗ್ಸ್ ಜೀವನದ ಬಗ್ಗೆಯೇ ಇದೆ. ಹಾಗಾಗಿಯೇ ಅದು ಅರ್ಥಪೂರ್ಣವಾಗಿಯೇ ಇದೆ.
ಇನ್ನು ಹೋಗ್ತಾ ಹೋಗ್ತಾ ಅಲೋಕ್‌ಗೆ ಅರ್ಥವಾದ ಸತ್ಯ ಏನಂದ್ರೆ, ಚೆನ್ನಾಗಿ ದುಡಿದು ಸೆಟಲ್ ಆಗಲು ಬರೀ ವಿದ್ಯೆ ಅಷ್ಟೇ ಮುಖ್ಯವಲ್ಲ. ಬುದ್ಧಿವಂತಿಕೆ ಟ್ಯಾಲೆಂಟ್ ಇದ್ರೂ ಕೂಡ ನಾವು ಜೀವನದಲ್ಲಿ ಯಶಸ್ಸು ಕಾಣಬಹುದು ಅಂತಾ. ಹಾಗಾಗಿ ಸಿನಿಮಾ ಇಂಡಸ್ಟ್ರಿಗೆ ಬರೋಕ್ಕೆ ನಿರ್ಧರಿಸಿದ್ರು ಅಲೋಕ್. ಇನ್ನು ರ್ಯಾಪರ್ ಆಗುವಾಗ, ಅಲೋಕ್‌ಗೆ ಯಾರು ಸಪೋರ್ಟ್ ಮಾಡಿದ್ರು..? ಅವರು ರ್ಯಾಪರ್ ಆಗಿದ್ದು ಹೇಗೆ ಇತ್ಯಾದಿ ವಿಷಯಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..