Saturday, July 5, 2025

Latest Posts

ಮನೆಯಲ್ಲೇ ತಯಾರಿಸಿ ಆ್ಯಲೋವೆರಾ ಎಣ್ಣೆ..

- Advertisement -

ಆ್ಯಲೋವೆರಾ ಅಂದ್ರೆ ನಮ್ಮ ಹಲವು ಸಮಸ್ಯೆಗಳಿಗೆ ರಾಮ ಬಾಣವಿದ್ದಂತೆ. ಕೂದಲ ಬುಡಕ್ಕೆ ಹಚ್ಚಿದ್ರೆ, ಕೂದಲು ಉದುರುವ ಸಮಸ್ಯೆ ಕಡಿಮೆಯಾಗತ್ತೆ. ಮುಖಕ್ಕೆ ಹಚ್ಚಿದ್ರೆ, ಸ್ಕಿನ್ ಮೇಲೆ ಒಂದು ಕಲೆಯೂ ಕಾಣಸಿಗಲ್ಲಾ. ಇನ್ನು ಸುಟ್ಟ ಗಾಯಕ್ಕೆ ಹಚ್ಚಿದ್ರೆ, ಅಲ್ಲಿ ಸುಟ್ಟಿತ್ತು ಅನ್ನೋದೇ ಗೊತ್ತಾಗಲ್ಲಾ, ಹಂಗೆ ವಾಸಿಯಾಗತ್ತೆ. ಇನ್ನು ಇದನ್ನ ಸೇವಿಸಿದ್ರೆ, ಹೊಟ್ಟೆ ನೋವಿನ ಸಮಸ್ಯೂ ಕಡಿಮೆಯಾಗತ್ತೆ.

ಹಾಗಂತ ಗರ್ಭಿಣಿಯರು ಇದರ ಸೇವನೆ ಮಾಡ್ಬಾರ್ದು. ಇನ್ನು ತಲೆಗೆ ಆ್ಯಲೋವೆರಾ ಎಣ್ಣೆ ಹಚ್ಚಿದ್ರೆ, ಕೂದಲು ಉದುರುವ ಸಮಸ್ಯೆ ಸೇರಿ ಹಲವು ಸಮಸ್ಯೆಗೆ ಮುಕ್ತಿ ಸಿಗತ್ತೆ. ಆದ್ರೆ ಎಣ್ಣೆ ಹೇಗೆ ತಯಾರಿಸೋದು ಅಂತಾ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ಆ್ಯಲೋವೆರಾ ಎಣ್ಣೆ ತಯಾರಿಸೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ತಂದಿದ್ದೇವೆ.

ಒಂದು ಕಪ್ ನ್ಯಾಚುರಲ್ ಆ್ಯಲೋವೆರಾ ಜೆಲ್, ಅಷ್ಟೇ ಪ್ರಮಾಣದ ತೆಂಗಿನ ಎಣ್ಣೆ, 6 ಕಾಳು ಮೆಣಸು. ಇವಿಷ್ಟು ಆ್ಯಲೋವೆರಾ ಎಣ್ಮೆ ತಯಾರಿಸಲು ಬೇಕಾಗಿರುವ ಸಾಮಗ್ರಿ. ಆ್ಯಲೋವೆರಾ ಜೆಲ್ ಅಂದ್ರೆ ಮನೆಯಲ್ಲಿ ಆ್ಯಲೋವೆರಾ ಗಿಡ ಇದ್ದರೆ, ಅದರಲ್ಲಿರುವ ಜೆಲ್ ಬಳಸಿ. ಯಾವುದೇ ಕಾರಣಕ್ಕೂ ಮಾರುಕಟ್ಟೆಯಲ್ಲಿ ಸಿಗುವ ಜೆಲ್ ಬಳಸಬೇಡಿ. ಇದನ್ನ ಮಾಡಲು ಕಬ್ಬಿಣದ ಬಾಣಲೆ ಬಳಸಿದರೆ ಉತ್ತಮ.

ಮೊದಲು ಒಂದು ಬಾಣಲೆಗೆ ಕಾಳು ಮೆಣಸು ಹಾಕಿ ಕೊಂಚ ಬಾಡಿಸಿ, ಇದಕ್ಕೆ ಎಣ್ಣೆ ಹಾಕಿ ಮಂದ ಉರಿಯಲ್ಲಿ ಒಂದು ನಿಮಿಷ ಬಿಸಿ ಮಾಡಿ. ಈಗ ಇದಕ್ಕೆ ಆ್ಯಲೋವೆರಾ ಪೇಸ್ಟ್ ಸೇರಿಸಿ, ಮಂದ ಉರಿಯಲ್ಲಿ ಅಡನ್ನ ಕರಿಡಿಸುತ್ತಿರಿ. ಮಂದ ಉರಿಯಲ್ಲೇ ಇದನ್ನು ತಯಾರು ಮಾಡಬೇಕು. ಹಾಗಾಗಿ ಮಂದ ಉರಿಯಲ್ಲಿಟ್ಟು, ಕುದಿ ಬಂದ ಬಳಿಕ, ಗ್ಯಾಸ್ ಆಫ್ ಮಾಡಿ.

ಈಗ ಈ ಎಣ್ಣೆ ತಣ್ಣಗಾದ ಬಳಿಕ, ಗಾಳಿಸಿ, ಒಂದು ಬಾಟಲಿಗೆ ತುಂಬಿಸಿಡಿ. ಈ ಎಣ್ಣೆಯನ್ನ ಬರೀ ತಲೆಗಷ್ಟೇ ಅಲ್ಲದೇ, ಕೈ ಕಾಲು, ಪಾದಕ್ಕೆಲ್ಲ ಬಳಸಬಹುದು. ನಿಮ್ಮ ಹಿಮ್ಮಡಿ ಒಡೆದಿದ್ದರೆ, ಕೈ, ಕಾಲಿನ ಚರ್ಮ ರಫ್ ಆಗಿದ್ದರೆ, ಅಲ್ಲಿ ಈ ಎಣ್ಣೆಯಿಂದ ಮಸಾಜ್ ಮಾಡಿ. ಇದರಿಂದ ಹಿಮ್ಮಡಿ, ಕೈ, ಕಾಲು ಸಾಫ್ಟ್ ಆಗುತ್ತದೆ.

ಇನ್ನು ವಾರದಲ್ಲಿ ಎರಡು ಬಾರಿ ನೀವು ತಲೆ ಸ್ನಾನ ಮಾಡುವುದಿದ್ದಲ್ಲಿ, ಅದಕ್ಕೂ ಮೊದಲ ದಿನ ಮಲಗುವ ವೇಳೆ ಈ ಎಣ್ಣೆಯಿಂದ ಮಸಾಜ್ ಮಾಡಿ, ಕಾಟನ್ ಬಟ್ಟೆಯನ್ನ ಉಗುರು ಬೆಚ್ಚಗಿನ ನೀರಿನಲ್ಲಿ ಅದ್ದಿ, ಹಿಂಡಿ, ಅದನ್ನ ನಿಮ್ಮ ತಲೆಗೆ ಕಟ್ಟಿಕೊಂಡು ಮಲಗಿ. ಮರುದಿನ ಎದ್ದು, ಉಗುರು ಬೆಚ್ಚಗಿನ ನೀರು ಮತ್ತು ಆಯುರ್ವೇದಿಕ್ ಶ್ಯಾಂಪೂ ಬಳಸ, ತಲೆ ಸ್ನಾನ ಮಾಡಿ.

ಇಲ್ಲವಾದಲ್ಲಿ ಶೀಗೆಕಾಯಿ ಪುಡಿ ಬಳಸಿ, ತಲೆ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ. ಅಲ್ಲದೇ ತಲೆ ತುಂಬಾ ತುರಿಕೆಯಾಗುತ್ತಿದ್ದರೆ, ಚಿಕ್ಕ ಚಿಕ್ಕ ಗುಳ್ಳೆಗಳಾಗಿದ್ದರೆ, ತಲೆಕೂದಲು ಬೆಳ್ಳಗಾಗುತ್ತಿದ್ದರೆ, ಈ ಎಲ್ಲ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತದೆ.

- Advertisement -

Latest Posts

Don't Miss