Tuesday, April 15, 2025

Latest Posts

ಜನವರಿ 8ಕ್ಕೆ ಬರಲಿದ್ಯಾ ‘ಕೆ.ಜಿ.ಎಫ್ ಚಾಪ್ಟರ್-2’ ಮತ್ತೊಂದು ಟೀಸರ್..?

- Advertisement -

www.karnatakatv.net:ಇಡೀ ವಿಶ್ವವೇ ಬಹು ನಿರೀಕ್ಷೇಯಿಂದ ಕಾಯುತ್ತಿರುವ ಸಿನಿಮಾ ‘ಕೆ.ಜಿ.ಎಫ್ ಚಾಪ್ಟರ್-2’. ಈ ಸಿನಿಮಾ ಯಾವ ಮಟ್ಟಿಗೆ ಕ್ರೇಜ್ ಸೃಷ್ಟಿಸಿದೆ ಎಂದರೇ, ಸಿನಿಮಾ ರಿಲೀಸ್ ಡೇಟ್ ಘೋಷಿಸಿದ್ದರು, ಸಿನಿಮಾ ಬೇಗ ತೆರೆಗೆ ಬರಲಿ ಎಂದು ಕಾದು ಕೂತಿದ್ದಾರೆ. ಆದರೆ ಸಿನಿಮಾ ರಿಲೀಸ್‌ಗೆ ಇನ್ನೂ ನಾಲ್ಕು ತಿಂಗಳು ಬಾಕಿ ಉಳಿದಿದೆ. ಹೀಗಾಗಿ ಯಶ್ ಅಭಿಮಾನಿಗಳು ‘ಕೆ.ಜಿ.ಎಫ್ ಚಾಪ್ಟರ್-2’ ನೋಡಲು ಇನ್ನೂ ಸಾಕಷ್ಟು ಸಮಯ ಕಾಯಲೇ ಬೇಕಾಗಿದೆ.

ಕಳೆದ ವರ್ಷ ಯಶ್ ಅವರ ಹುಟ್ಟಿದ ದಿನದಂದು ಕೆ.ಜಿ.ಎಫ್ ಚಾಪ್ಟರ್-2 ಚಿತ್ರದ ಟೀಸರ್ ಬಿಡುಗಡೆ ಮಾಡಿತ್ತು, ಬರೋಬ್ಬರಿ 225 ಮಿಲಿಯನ್ ವೀಕ್ಷಣೆ ಪಡೆದು ಇಡೀ ಜಗತ್ತೇ ಬೆರಗಾಗುವಂತೆ ಮಾಡಿತ್ತು. ಇದೀಗ ದೊಡ್ಡ ಸುದ್ದಿಗಳು ಹರಿದಾಡುತ್ತಿದ್ದು, ಯಶ್ ಅವರ ಅಭಿಮಾನಿಗಳು ಪದೇ ಪದೇ ಕೆ.ಜಿ.ಎಫ್ ಚಾಪ್ಟರ್-2 ಬಗ್ಗೆ ಕೇಳುತ್ತಿದ್ದು, ಮತ್ತೇ ಯಶ್ ಹುಟ್ಟಿದ ದಿನ ಜನವರಿ 8ಕ್ಕೆ 2022ಕ್ಕೆ ಮತ್ತೊಂದು ಟೀಸರ್ ಬಿಡುಗಡೆ ಮಾಡಿ ಎಂಬ ಬೇಡಿಕೆಯನ್ನು ಪ್ರಶಾಂತ್‌ನೀಲ್ ಮುಂದೆ ಇಟ್ಟಿದ್ದಾರೆ. ಹಾಗಾಗಿ ಕೆ.ಜಿ.ಎಫ್ ಚಿತ್ರತಂಡ ಮತ್ತೊಂದು ಟೀಸರ್ ರಿಲೀಸ್ ಮಾಡಲು ಪ್ಲಾನ್ ಮಾಡುತ್ತಿದೆ.

ಇದಕ್ಕೆ ತಕ್ಕಂತೆ ‘ಕೆ.ಜಿ.ಎಫ್ ಚಾಪ್ಟರ್-2’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಅದರಲ್ಲೂ ಬಾಲಿವುಡ್ ದಿಗ್ಗಜ ಸಂಜಯ್ ದತ್ ಕೆಜಿಎಫ್ ಅಖಾಡಕ್ಕೆ ಮತ್ತೆ ಎಂಟ್ರಿಕೊಟ್ಟಿದ್ದಾರೆ. ಇದೇ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.. ಸಂಜಯ್ ದತ್ ಈಗ ಅವರ ಪಾತ್ರದ ಡಬ್ಬಿಂಗ್ ಪೂರ್ಣ ಗೊಳಿಸಿದ್ದಾರೆ. ಈ ವಿಷಯವನ್ನು ಸ್ವತಃ ಪ್ರಶಾಂತ್ ನೀಲ್ ಹಾಗೇ ಸಂಜಯ್ ದತ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊOಡಿದ್ದಾರೆ.

ಸOಜಯ್ ದತ್ ಡಬ್ ಮಾಡಿರುವ ಫೋಟೊಗಳು ಹರಿದಾಡುತ್ತಿದೆ. ಸ್ವತಃ ಸಂಜಯ್ ದತ್ ಡಬ್ಬಿಂಗ್ ಫೋಟೊಗಳನ್ನು ಶೇರ್ ಮಾಡಿದ್ದು, ” ಅಧೀರ ಬ್ಯಾಕ್ ಇನ್ ಆಕ್ಷನ್.. ಡಬ್ಬಿಂಗ್ ಕೆಲಸ ಮುಗಿದಿದೆ. ಕೆ.ಜಿ.ಎಫ್ ಚಾಪ್ಟರ್-2 ಏಪ್ರಿಲ್ 14ರಂದು 2022ಗೆ ಥಿಯೇಟರ್‌ಗೆ ಬರುತ್ತಿದೆ.” ಎಂದು ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಸಿನಿಮಾ ಬಿಡುಗಡೆಗೆ ಕೆಲವು ಸಮಯ ಬಾಕಿ ಉಳಿದಿದೆ ಅನ್ನುವಾಗಲೇ ಪ್ರಶಾಂತ್ ನೀಲ್ ಮತ್ತೆ ಆಕ್ಟೀವ್ ಆಗಿದ್ದಾರೆ. ಡಬ್ಬಿಂಗ್ ಸ್ಟುಡಿಯೋದಲ್ಲಿ ಸಂಜಯ್ ದತ್ ಜೊತೆ ಪ್ರಶಾಂತ್ ನೀಲ್ ಕೂಡ ಕಾಣಿಸಿಕೊಂಡಿದ್ದು, ಯಶ್ ಅಭಿಮಾನಿಗಳಲ್ಲಿ ಹೊಸ ಹುರುಪು ಮೂಡಿದೆ. ಇವರು ಕೂಡ ಸಂಜಯ್ ದತ್ ಫೋಟೊಗಳನ್ನು ಶೇರ್ ಮಾಡಿದ್ದು, ” ಅಧೀರ ಇಸ್ ಬ್ಯಾಕ್” 2022 ಏಪ್ರಿಲ್ 14ರಂದು ಬೆಳ್ಳೆತೆರೆಯಲ್ಲಿ ಸಿಗೋಣ.” ಎಂದು ಸಂಜಯ್ ದತ್‌ಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಇದೀಗ ಈ ವಿಷಯಗಳು ಕೂಡ ಗಾಳಿ ಸುದ್ದಿಯಾಗಿವೇ. ಈ ಬಾರಿ ಅಧೀರ ಅವರ ಧ್ವನಿಯಲ್ಲಿ ಟೀಸರ್ ಬರಬಹುದೇ, ಇಲ್ಲ ಯಶ್ ಹಾಗೂ ಅಧೀರ ಕಾದಾಡುವ ತುಣುಕುಗಳೇನಾದರು ಬರಲಿದ್ಯ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಸಂಜಯ್ ದತ್ ಇವರಿಬ್ಬರ ಕಾದಾಟವನ್ನು ತೆರೆಮೇಲೆ ನೋಡುವುದಕ್ಕೆ ಪ್ರೇಕ್ಷಕರು ಕಾದು ಕೂತಿದ್ದಾರೆ.

ರೂಪೇಶ್, ಫಿಲಂ ಬ್ಯೂರೋ, ಕರ್ನಾಟಕ ಟಿವಿ.

- Advertisement -

Latest Posts

Don't Miss