ನಾವು ಈಗಾಗಲೇ ನಿಮಗೆ ಕಾಕ ಶಕುನ, ಹಲ್ಲಿ ಬಗೆಗಿನ ಶಕುನಗಳ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಬೆಕ್ಕು ದಾರಿಗೆ ಅಡ್ಡಲಾಗಿ ಹೋದ್ರೆ ಅಪಶಕುನ ಅಂತಾ ಹೇಳಲಾಗತ್ತೆ. ಅದಕ್ಕಾಗಿ ಕೆಲವರು ದೇವರನ್ನು ನೆನೆದರೆ, ಇನ್ನು ಕೆಲವರು ಮೂರು ಕಲ್ಲನ್ನು ಬಿಸಾಕಿ, ಮುಂದಕ್ಕೆ ಹೋಗ್ತಾರೆ. ಯಾಕಂದ್ರೆ ಬೆಕ್ಕು ದಾರಿಗೆ ಅಡ್ಡವಾಗಿ ಹೋದ್ರೆ, ಆಗುವ ಕೆಲಸ ಆಗೋದಿಲ್ಲಾ ಅಂತಾ ನಂಬಿಕೆ ಇದೆ. ಹಾಗಾದ್ರೆ ಯಾವ ಸಮಯದಲ್ಲಿ ಬೆಕ್ಕು ರಸ್ತೆಗೆ ಅಡ್ಡವಾಗಿ ಹೋದ್ರೆ ಶುಭ ಅಂತಾ ತಿಳಿಯೋಣ ಬನ್ನಿ..
ಅಯ್ಯಪ್ಪ ಸ್ವಾಮಿ ಭಕ್ತರು ಕಪ್ಪು ಬಟ್ಟೆ ಧರಿಸೋದ್ಯಾಕೆ..?!ಏನಿದರ ಮಹತ್ವ
ಯಾರಿಂದ ತಪ್ಪಿಸಿಕೊಂಡರೂ ಮನುಷ್ಯ ಗ್ರಹಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವನ ಮೇಲೆ ಒಂದಲ್ಲ ಒಂದು ಗ್ರಹ ಶುಭ ಮತ್ತು ಅಶುಭ ಪ್ರಯೋಗಗಳನ್ನ ಮಾಡುತ್ತಲೇ ಇರುತ್ತದೆ. ಹಾಗಾಗಿಯೇ ಮನುಷ್ಯ ಯಾವಾಗಲೂ ಸುಖವಾಗಿರಲು ಸಾಧ್ಯವಿಲ್ಲ. ಮತ್ತು ಯಾವಾಗಲೂ ದುಃಖದಿಂದೇ ಇರುವುದಿಲ್ಲ. ಅದರಲ್ಲೂ ರಾಹುವಿನ ಪ್ರಭಾವ ನಮ್ಮ ಮೇಲಿದ್ದರೆ, ದುಃಖವೇ ನಮ್ಮ ಪಾಲಾಗುತ್ತದೆ. ಇನ್ನು ರಾಹುವಿನ ವಾಹನ ಅಂದ್ರೆ ಬೆಕ್ಕು. ಹಾಗಾಗಿಯೇ ಬೆಕ್ಕನ್ನ ಅಪಶಕುನ ಅಂತಾ ಕರಿಯುತ್ತಾರೆ.
ಬೆಕ್ಕು ಅಡ್ಡ ಹೋದ್ರೆ, ಇನ್ನು ತಮ್ಮ ಕೆಲಸ ಆಗಲ್ಲ ಅಂತಾ ಡಿಸೈಡ್ ಮಾಡುವವರು ಕೆಲವರಾದ್ರೆ, ನಮಗೇನೋ ಆಪತ್ತು ಸಂಭವಿಸಲಿದೆ ಅಂತಾ ತಿಳಿಯುವವರು ಕೆಲವರು. ಹಾಗಾಗಿ ಕೆಲವರು ಬೆಕ್ಕು ಅಡ್ಡ ಹೋದ್ರೆ ಅಲ್ಲೇ ಉಗಿದು, ಕೆಲ ಕಾಲ ನಿಂತು, ಮತ್ತೆ ಮುಂದೆ ಸಾಗುತ್ತಾರೆ. ಆದ್ರೆ ಬೆಕ್ಕು ಬರೀ ಅಪಶಕುನವಲ್ಲ. ಬದಲಾಗಿ ಶುಭ ಶಕುನ ಕೂಡ ತರಬಲ್ಲದು.
ಭಯಾನಕ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು..?!
ಕೆಲ ಶಕುನದ ಪ್ರಕಾರ ದೀಪಾವಳಿ ದಿನ ಬೆಕ್ಕು ಮನೆಗೆ ಬಂದ್ರೆ ಶುಭ ಶಕುನ ಅಂತಾ ನಂಬಲಾಗಿದೆ. ಈ ದಿನ ಬೆಕ್ಕು ಮನೆಗೆ ಬಂದ್ರೆ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಅಲ್ಲದೇ ದರಿದ್ರ ಲಕ್ಷಿಯೂ ಕೂಡ ಈ ದಿನ ಮನೆಗೆ ಬೆಕ್ಕು ಬಂದಾಗ, ಅದರೊಂದಿಗೆ ಹೊರ ಹೋಗುತ್ತಾಳೆ ಅನ್ನೋ ನಂಬಿಕೆ ಇದೆ. ಅಲ್ಲದೇ, ಬೆಕ್ಕು ಮಾಂಸ ಹಿಡಿದು ನಿಮಗೆ ಅಡ್ಡಲಾಗಿ ಹೋದರೆ, ಅದು ಕೂಡ ಉತ್ತಮ ಸಂಕೇತ. ಬೆಕ್ಕು ತನ್ನಮರಿಯೊಂದಿಗೆ ರಸ್ತೆ ದಾಟಿದ್ದನ್ನ ನೀವು ಕಂಡರೆ, ಅದು ಕೂಡ ಒಳ್ಳೆಯ ಸೂಚನೆ ಅಂತಾ ಹೇಳಲಾಗಿದೆ.