ಮನುಷ್ಯ ಬದುಕೋಕ್ಕೆ ಅಂತಾನೇ ಆಹಾರವನ್ನ ತಿನ್ನುತ್ತಾನೆ. ಆದ್ರೆ ನಾವು ಆಹಾರ ಸೇವಿಸುವಾಗ, ಎಷ್ಟು ತಿನ್ನಬೇಕು..? ಯಾವ ಸಮಯದಲ್ಲಿ ತಿನ್ನಬೇಕು..? ಯಾವ ರೀತಿ ತಿನ್ನಬೇಕು ಅನ್ನೋದು ಕೆಲವರಿಗೆ ಗೊತ್ತಿರುವುದಿಲ್ಲ. ಅದನ್ನು ಅರಿತು ನಾವು ಆಹಾರ ಸೇವಿಸಿದರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಯಾವಾಗ ಆಹಾರ ಸೇವಿಸಬೇಕು..?- ಆಯುರ್ವೇದದ ಪ್ರಕಾರ, ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತದ ಒಳಗೆ ಆಹಾರ ಸೇವಿಸಬೇಕು ಎಂಬ ನಿಯಮವಿದೆ. ವಾಗ್ಭಟರು ಹೇಳಿದ ಪ್ರಕಾರ, ಸೂರ್ಯನ ಕಿರಣವಿರುವ ಆಹಾರ ಸೇವಿಸಿದರೆ, ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಸೂರ್ಯಾಸ್ತದ ಬಳಿಕ ಬೆಳಿಗ್ಗೆ ಬೇಗ ಆಹಾರ ಸೇವಿಸಿದರೆ, ಸಂಜೆ 7 ಗಂಟೆಯೊಳಗೆ ನಿಮ್ಮ ಕೊನೆಯ ಆಹಾರವನ್ನ ಸೇವಿಸಬೇಕಂತೆ. ಈ ಕ್ರಮವನ್ನ ಯಾರು ಅನುಸರಿಸುತ್ತಾರೋ, ಅವರ ಆರೋಗ್ಯ ಅತ್ಯುತ್ತಮವಾಗಿರುತ್ತದೆ.
ಎಷ್ಟು ತಿನ್ನಬೇಕು ಅಂದ್ರೆ, ದಿನಕ್ಕೆ ಮೂರು ಬಾರಿ ತಿನ್ನಬೇಕು. ಕೆಲವರು ಪದೇ ಪದೇ ಬಾಯಾಡಿಸುತ್ತಾ ಇರುತ್ತಾರೆ. ಅಂಥವರ ಆರೋಗ್ಯ ಸರಿಯಾಗಿ ಇರುವುದಿಲ್ಲ. ಅವರ ದೇಹದಲ್ಲಿ ಬೊಜ್ಜು ಬೆಳೆದಿರುತ್ತದೆ. ಅಥವಾ ಅವರಿಗೆ ಗ್ಯಾಸ್ಟಿಕ್ ಸಮಸ್ಯೆ ಸೇರಿ ಇತರ ಹೊಟ್ಟೆ ಸಮಸ್ಯೆ ಇರುತ್ತದೆ. ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಬರಬಾರದು, ನೀವು ಆರೋಗ್ಯವಂತರಾಗಿರಬೇಕು ಅಂದ್ರೆ, ದಿನಕ್ಕೆ ಮೂರು ಬಾರಿ ಆಹಾರ ಸೇವಿಸಬೇಕು. ಬೆಳಿಗ್ಗಿನ ತಿಂಡಿ, ಮಧ್ಯಾಹ್ನದ ಊಟ, ಸಂಜೆ ವೇಳೆ ಲೈಟ್ ಆಗಿ ಏನಾದರೂ ಸೇವಿಸಿ. ಮತ್ತೆ ನಿಮಗೆ ಮಧ್ಯ ಮಧ್ಯೆ ಹಸಿವಾದಾಗ, ನೀವು ನೀರು ಅಥವಾ ದ್ರವ ಪದಾರ್ಥ ಸೇವನೆ ಮಾಡಬಹುದು.
ಯಾವ ರೀತಿ ಆಹಾರ ಸೇವಿಸಬೇಕು ಎಂದು ಹೇಳುವುದಾದರೆ, ನೀವು ಊಟ ಮಾಡುವ ಒಂದು ಗಂಟೆ ಮುಂಚೆ ಚೆನ್ನಾಗಿ ನೀರು ಕುಡಿಯಿರಿ. ಆ ಒಂದು ಗಂಟೆಯಲ್ಲಿ ಏನನ್ನೂ ತಿನ್ನಬೇಡಿ. ನಂತರ ಊಟ ಮಾಡಿ, ಒಂದು ಗಂಟೆ ಬಳಿಕ ನೀರು ಕುಡಿಯಿರಿ. ನೀವು ಯಾವಾಗ ಆಹಾರ ಸೇವಿಸಿದರೂ ಇದೇ ಕ್ರಮವನ್ನು ಅನುಸರಿಸಿ. ಇದರಿಂದ ನಿಮಗೆ ಹೊಟ್ಟೆ ನೋವಿನ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ ಬರುವುದಿಲ್ಲ. ನಿಮಗೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತಿದ್ದರೆ, ನಿಮ್ಮ ಆರೋಗ್ಯ ಸರಿಯಾಗಿ ಇದೆ ಎಂದರ್ಥ.