Saturday, July 27, 2024

Latest Posts

ಚಾಟ್ಸ್‌ಗೆ ಬೇಕಾಗಿರುವ 3 ಬೇಸಿಕ್ ಚಟ್ನಿ ರೆಸಿಪಿ..

- Advertisement -

ಚಾಟ್ಸ್ ಅಂದ್ರೆ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ..? ಚಿಕ್ಕ ಮಕ್ಕಳಿಂದ ಹಿಡಿದು, ಹಿರಿಯರ ತನಕ ಬಾಯಿ ಚಪ್ಪರಿಸಿಕೊಂಡು ತಿನ್ನುವ ಚಾಟ್‌ ಪರಿಪೂರ್ಣವಾಗೋದೇ, ಹಸಿರು ಮತ್ತು ಕೆಂಪು ಚಟ್ನಿಯೊಂದಿಗೆ. ಹಾಗಾಗಿ ನಾವಿಂದು ಚಾಟ್ಸ್‌ಗೆ ಬೇಕಾಗಿರುವ 3 ಬೇಸಿಕ್ ಚಟ್ನಿ ರೆಸಿಪಿಯನ್ನ ಹೇಳಲಿದ್ದೇವೆ..

ಮೊದಲನೇಯ ಚಟ್ನಿ ರೆಸಿಪಿ: ಒಂದು ಕಪ್ ಬೆಲ್ಲ, ಒಂದು ಸ್ಪೂನ್ ಧನಿಯಾಪುಡಿ, ಅರ್ಧ ಸ್ಪೂನ್ ಚಾಟ್ ಮಸಾಲೆ ಪುಡಿ, ಅರ್ಧ ಸ್ಪೂನ್ ಕಪ್ಪು ಉಪ್ಪು, ಚಿಟಿಕೆ ಹಿಂಗು, ಒಂದು ಸ್ಪೂನ್ ಹುರಿದ ಜೀರಿಗೆ ಪುಡಿ, ಒಂದು ಸ್ಪೂನ್ ಖಾರದ ಪುಡಿ, ಅರ್ಧ ಸ್ಪೂನ್ ಆಮ್ಚುರ್‌ ಪೌಡರ್‌, ಕಾಲು ಕಪ್ ಹುಣಸೆಹಣ್ಣಿನ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು.

ಮೊದಲು ಪ್ಯಾನ್ ಬಿಸಿ ಮಾಡಿ, ಬೆಲ್ಲ, ಧನಿಯಾಪುಡಿ, ಜೀರಿಗೆಪುಡಿ, ಚಾಟ್ ಮಸಾಲೆ ಪುಡಿ, ಖಾರದ ಪುಡಿ, ಆಮ್ಚುರ್ ಪುಡಿ,  ಕಪ್ಪು ಉಪ್ಪು, ಜೀರಿಗೆ ಪುಡಿ, ಖಾರದ ಪುಡಿ, ಹಿಂಗು ಇವಿಷ್ಟನ್ನು ಹಾಕಿ, ಬೆಲ್ಲವನ್ನು ಕರಗಿಸಿ, ನಂತರ ಹುಣಸೆಹಣ್ಣಿನ ಪೇಸ್ಟ್ , ಉಪ್ಪು ಸೇರಿಸಿ, ಚೆನ್ನಾಗಿ ಕುದಿಸಿದರೆ, ಹುಳಿ ಚಟ್ನಿ ರೆಡಿ.

ಎರಡನೇಯ ಚಟ್ನಿ ರೆಸಿಪಿ: ಎರಡು ಸ್ಪೂನ್ ಶೇಂಗಾಕಾಳು, 5 ಹಸಿಮೆಣಸಿನಕಾಯಿ, ಒಂದು ಕಪ್ ಕೊತ್ತೊಂಬರಿ ಸೊಪ್ಪು, ಅರ್ಧ ಕಪ್ ಪುದೀನಾ, ಚಿಟಿಕೆ ಚಕ್ಕೆ ಪುಡಿ, ಅರ್ಧ ಚಮಚ ಚಾಟ್ ಮಸಾಲೆ ಪುಡಿ, ಅರ್ಧ ಸ್ಪೂನ್ ಜೀರಿಗೆ ಪುಡಿ, ಅರ್ಧ ನಿಂಬೆರಸ, ಉಪ್ಪು, ಇವಿಷ್ಟನ್ನೂ ಮಿಕ್ಸಿ ಜಾರ್‌ಗೆ ಹಾಕಿ, ಪೇಸ್ಟ್ ಮಾಡಿದ್ರೆ, ಚಟ್ನಿ ರೆಡಿ.

ಮೂರನೇಯ ಚಟ್ನಿ ರೆಸಿಪಿ: ಬೇಯಿಸಿದ 10 ಕಾಶ್ಮೀರಿ ಮೆಣಸಿನಕಾಯಿ, 12ರಿಂದ 13 ಬೆಳ್ಳುಳ್ಳಿ ಎಸಳು, ಅರ್ಧ ಸ್ಪೂನ್ ಚಾಟ್ ಮಸಾಲೆ ಪುಡಿ, ಚಿಟಿಕೆ ಉಪ್ಪು, ಇವಿಷ್ಟನ್ನು ಹಾಕಿ, ಪೇಸ್ಟ್ ಮಾಡಿದ್ರೆ ಚಟ್ನಿ ರೆಡಿ.

ನೈಟ್ ಶಿಫ್ಟ್ ಮಾಡುವಾಗ ತಿನ್ನಬಹುದಾದ ಆಹಾರಗಳು ಯಾವುದು..?

ನಿಮ್ಮ ಮುಖ ಹೊಳಪಿನಿಂದ ಕೂಡಿರಬೇಕು ಅಂದ್ರೆ ಏನು ತಿನ್ನಬೇಕು..? ಏನು ತಿನ್ನಬಾರದು..?

ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ..? ಕೆಟ್ಟದ್ದಾ..?

- Advertisement -

Latest Posts

Don't Miss