Health Tips: ಈಗಾಗಲೇ ಮಳೆಗಾಲ ಶುರುವಾಗಿದೆ. ರೋಗಗಳು ಜನರಿಂದ ಜನರಿಗೆ ಹರಡುತ್ತಿದೆ. ಅದರಲ್ಲೂ ಎಲ್ಲೆಡೆ ಡೆಂಘ್ಯೂ ರೋಗದ್ದೇ ಹಾವಳಿ. ಆದರೆ ಈ ಜ್ವರವನ್ನು ನೀವು ನಿರ್ಲಕ್ಷ್ಯ ಮಾಡಿದ್ದೇ ಆದಲ್ಲಿ, ಇದು ನಿಮ್ಮ ಜೀವಕ್ಕೇ ಕುತ್ತು ತರುತ್ತದೆ. ಹಾಗಾಗಿ ಈ ರೋಗದ ಬಗ್ಗೆ ನಿರ್ಲಕ್ಷ್ಯ ಬೇಡ. ಈ ಬಗ್ಗೆ ವೈದ್ಯರಾದ, ಡಾ.ಆಂಜೀನಪ್ಪ ಮತ್ತಷ್ಟು ಮಾಹಿತಿ ಕೊಟ್ಟಿದ್ದಾರೆ.
ಜಿಟಿ ಜಿಟಿ ಮಳೆ ಬಂದು, ಅದರ ನೀರು ನಿಲ್ಲುತ್ತದೆ. ಅಂಥ ನೀರಿನಲ್ಲೇ ಡೆಂಘ್ಯು ಸೊಳ್ಳೆ ಹುಟ್ಟಿಕೊಳ್ಳುತ್ತದೆ. ಇದು ಹುಲಿಯಂತೆ ದೇಹದ ಮೇಲೆ ಪಟ್ಟೆ ಪಟ್ಟೆ ಹೊಂದಿರುವ ಕಾರಣಕ್ಕೆ, ಇದನ್ನು ಟೈಗರ್ ಸೊಳ್ಳೆ ಎಂದು ಕರೆಯಲಾಗುತ್ತದೆ. ಬೇರೆ ಸೊಳ್ಳೆ ಕಚ್ಚಿದಾಗ ಅಷ್ಟೇನು ತೊಂದರೆಯಾಗುವುದಿಲ್ಲ. ಆದರೆ ಈ ಸೊಳ್ಳೆ ಕಚ್ಚಿದಾಗ ಮಾತ್ರ, ಡೆಂಘ್ಯೂ ಬರುತ್ತದೆ.
ಹಾಗಾಗಿ ಮನೆಯ ಬಳಿ ಹೀಗೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಮನೆ ಅಕ್ಕ ಪಕ್ಕ, ಕ್ಲೀನ್ ಆಗಿ ಇಟ್ಟುಕೊಳ್ಳಬೇಕು. ಮಕ್ಕಳು ಅಂಥ ಜಾಗದಲ್ಲಿ ಹೋಗದಂತೆ ತಡೆಯಬೇಕು. ಇನ್ನು ಮನೆಯಲ್ಲಿ ಒಬ್ಬರಿಗೆ ಈ ಸೊಳ್ಳೆ ಕಚ್ಚಿದಾಗ, ಡೆಂಘ್ಯೂ ಬಂದರೆ, ಮನೆ ಮಂದಿಗೆಲ್ಲ ಡೆಂಘ್ಯು ಬರುತ್ತದೆ. ಡೆಂಘ್ಯೂ ಬಂದಾಗ ನಾರ್ಮಲ್ ಜ್ವರವಿರುವುದಿಲ್ಲ.
ಸಿಕ್ಕಾಪಟ್ಟೆ ತಲೆನೋವು, ತುಂಬಾ ಸುಸ್ತಾಗುತ್ತದೆ. ಎರಡು ದಿನದೊಳಗೆ ಸೀರಿಯಸ್ ಆಗುವ ಸಾಧ್ಯತೆ ಇದೆ. ಹಾಗಾಗಿ ಮೊದಲ ದಿನವೇ ನಿಮಗೆ ಜ್ವರ ಹೆಚ್ಚಾಗಿ, ಇದು ಡೆಂಘ್ಯು ಎಂಬ ಡೌಟ್ ಬಂದರೆ, ತಡಮಾಡದೇ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..