Recipe: ನಾವು ನಿಮಗೆ ಹಲವು ರೆಸಿಪಿಗಳನ್ನು ತಿಳಿಸಿದ್ದೇವೆ. ಅದೇ ರೀತಿ ಇಂದು ರವೆ ಉಂಡೆ ಹೇಗೆ ಮಾಡುವುದು ಅನ್ನೋದನ್ನ, ವೀಡಿಯೋ ಸಮೇತವಾಗಿ ಹೇಳಲಿದ್ದೇವೆ.
ಮೊದಲು ಗೋಡಂಬಿ, ಒಣದ್ರಾಕ್ಷಿ ಮತ್ತು ಬಾದಾಮಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ಅದೇ ಬಾಣಲಿಯಲ್ಲಿ ಮತ್ತಷ್ಟು ತುಪ್ಪ ಹಾಕಿ, ರವೆಯನ್ನು ಹುರಿದುಕೊಳ್ಳಿ. ರವೆಯ ಘಮ ಬಂದ ಬಳಿಕ ತುರಿದಿಟ್ಟುಕೊಂಡ ಒಣಕೊಬ್ಬರಿಯನ್ನು ಕೂಡ ಮಿಕ್ಸ್ ಮಾಡಿ ಹುರಿಯಿರಿ. ಇದು ಚೆನ್ನಾಗಿ ಹುರಿದ ಬಳಿಕ ಪುಡಿ ಮಾಡಿದ ಏಲಕ್ಕಿ, ಮತ್ತು ಅಗತ್ಯವಿದ್ದಷ್ಟು ಸಕ್ಕರೆಯನ್ನು ಪುಡಿ ಮಾಡಿ, ಸೇರಿಸಿ. ಸಕ್ಕರೆ ಸೇರಿಸಿದ ಬಳಿಕ ಮಿಶ್ರಣದಲ್ಲಿ ಪಾಕ ಬರುತ್ತದೆ.
ಈ ಮಿಶ್ರಣಕ್ಕೆ ಹುರಿದಿಟ್ಟುಕೊಂಡ ಗೋಡಂಬಿ, ಬಾದಾಮಿ, ದ್ರಾಕ್ಷಿ ಮಿಕ್ಸ್ ಮಾಡಿ, ಉಂಡೆ ಕಟ್ಟಬೇಕು. ಈ ಲಾಡುವನ್ನು ಹೇಗೆ ತಯಾರಿಸಬೇಕು ಎಂದು ತಿಳಿಯಲು ಈ ವೀಡಿಯೋ ನೋಡಿ..
ಹೋಲ್‌ಸೇಲ್ ಬೆಲೆಗೆ ಉತ್ತಮ ಕ್ವಾಲಿಟಿಯ ಬಟ್ಟೆ ಬೇಕಾಗಿದ್ದಲ್ಲಿ ಈ ಅಂಗಡಿಗೆ ಬನ್ನಿ..