Friday, October 17, 2025

Latest Posts

ನಿಮ್ಮ ಸ್ಕಿನ್ ಸೂಪರ್ ಆಗಿರಬೇಕು ಅಂದ್ರೆ ಇದರ ಸೇವನೆ ಮಾಡಿ..

- Advertisement -

ಇಂದಿನ ಪೀಳಿಗೆಯ ಯುವಕ ಯುವತಿಯರು, ತಾವು ಮುದ್ದಾಗಿ ಕಾಣಬೇಕು ಅನ್ನೋ ಆಸೆ ಏನೋ ಹೊಂದಿರುತ್ತಾರೆ. ಆದ್ರೆ ಅದಕ್ಕೆ ಬೇಕಾದ ತಯಾರಿಯನ್ನ ಮಾತ್ರ ಮಾಡಿಕೊಳ್ಳಲ್ಲ. ಹುಡುಗರಾದ್ರೆ, ಫೇಸ್‌ ವಾಶ್ ಮಾಡಿ, ತಲೆ ಬಾಚಿಕೊಂಡ್ರೆ, ಹುಡುಗಿಯರು ಮೇಕಪ್ ಮಾಡಿಕೊಳ್ಳುತ್ತಾರೆ. ಆದ್ರೆ ನೀವು ಡೇಲಿ ಮೇಕಪ್ ಮಾಡಿಕೊಂಡ್ರೆ, ನಿಮ್ಮ ಮುಖದ ನ್ಯಾಚುರಲ್ ಬ್ಯೂಟಿ ಕಳೆದು ಹೋಗುತ್ತದೆ. ಆಮೇಲೆ ಮೇಕಪ್ ಬಿಟ್ಟು ಬರಲು ಸಾಧ್ಯವಾಗೋದಿಲ್ಲಾ. ಹಾಗಾಗಿ ಆದಷ್ಟು ಉತ್ತಮ ಆಹಾರದ ಸೇವನೆ ಮಾಡಿ, ನಿಮ್ಮ ಅಂದ ಹೆಚ್ಚಿಸಿಕೊಳ್ಳುವುದನ್ನು ನೋಡಿ.

ಮೇಕಪ್ ಮಾಡಿಕೊಳ್ಳದೇ, ಚೆಂದಗಾಣಿಸಲು ಟಿಪ್ಸ್- ಭಾಗ 1

ಮೊದಲನೇಯದಾಗಿ ಉತ್ತಮ ಆಹಾರ. ನೀವು ಬರೀ ಒಂದು ತಿಂಗಳು ನಾವು ಹೇಳುವ ಟಿಪ್ಸ್ ಬಳಸಿ ನೋಡಿ. ನಿಮ್ಮ ಮುಖದಲ್ಲಾಗುವ ಬದಲಾವಣೆಯನ್ನು  ನೋಡಿ, ನೀವೇ ಆಶ್ಚರ್ಯ ಪಡುತ್ತೀರಾ. ನೀವು ಎಣ್ಣೆ ಪದಾರ್ಥವನ್ನು ಸಂಪೂರ್ಣವಾಗಿ ತ್ಯಜಿಸಿ. ಎಣ್ಣೆ ಹಾಕದೇ, ಬಳಸುವ ಆಹಾರವನ್ನು ತಿನ್ನಿ. ಉದಾಹರಣೆಗೆ, ಅವಲಕ್ಕಿ, ಉಪ್ಪಿಟ್ಟು, ಇಡ್ಲಿ, ದೋಸೆ, ಚಪಾತಿ, ರೊಟ್ಟಿ. ಇವುಗಳಿಗೆಲ್ಲ ಎಣ್ಣೆ ಬಳಸಿದರೂ, ಅದು ಸ್ವಲ್ಪ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಇಂಥ ಆಹಾರ ತಿನ್ನಿ.

ಮೇಕಪ್ ಮಾಡಿಕೊಳ್ಳದೇ, ಚೆಂದಗಾಣಿಸಲು ಟಿಪ್ಸ್- ಭಾಗ 2

ಎರಡನೇಯದಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯಿರಿ. ನಿಮಗೆ ಅಗತ್ಯವಿದ್ದಲ್ಲಿ, ಒಂದು ಚಮಚ ನಿಂಬೆರಸ ಮತ್ತು ಜೇನು ಸೇರಿಸಬಹುದು. ಆದ್ರೆ ನೀವು ಎರಡು ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿದಲ್ಲಿ, ನಿಮ್ಮ ಹೊಟ್ಟೆ ಕ್ಲೀನ್ ಆಗುತ್ತದೆ. ಮತ್ತು ಬೆಳಿಗ್ಗೆ ಹೊಟ್ಟೆ ಕ್ಲೀನ್ ಮಾಡುವುದು ತುಂಬಾ ಇಂಪಾರ್ಟೆಂಟ್. ಯಾಕಂದ್ರೆ ಹೀಗೆ ಹೊಟ್ಟೆ ಕ್ಲೀನ್ ಆಗಿದ್ದಾಗಲೇ, ನಿಮ್ಮ ಆರೋಗ್ಯ ಮತ್ತು ನಿಮ್ಮ ಸ್ಕಿನ್ ಉತ್ತಮವಾಗಿರುತ್ತದೆ.

ಈ 3 ಗುಣಗಳಿಂದಲೇ ಕೆಲವರು ಯಶಸ್ವಿಯಾಗದೇ ಇರೋದು..

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದ ಬಳಿಕ, ನೆನೆಸಿದ ಬಾದಾಮಿ, ಅಖ್ರೂಟ್, ಶೇಂಗಾ, ಕಡಲೆ, ಅಂಜೂರ, ದ್ರಾಕ್ಷಿಯನ್ನು ತಿನ್ನಿ. ಆದ್ರೆ ಇವೆಲ್ಲ ಲಿಮಿಟ್‌ನಲ್ಲಿರಲಿ. 4 ಬಾದಾಮಿ, 5 ಶೇಂಗಾ ಮತ್ತು 5 ಕಡಲೆ, ಒಂದು ಅಂಜೂರ, ಒಂದು ಅಖ್ರೂಟ್, 10 ದ್ರಾಕ್ಷಿ ಇಷ್ಟು ತಿಂದರೆ ಸಾಕು. ಇದನ್ನು ತಿಂದು ಒಂದು ಗಂಟೆ ಬಳಿಕ, ತಿಂಡಿ ತಿಂದರೆ ಸಾಕು.

ಪ್ರತಿದಿನ ಊಟಕ್ಕೂ ಅರ್ಧಗಂಟೆ ಮುನ್ನ, ತರಕಾರಿ ಸಲಾಡ್ ತಿನ್ನಿ. ತಿಂಡಿ ಮತ್ತು ಊಟಕ್ಕೂ ಮಧ್ಯೆ ಒಮ್ಮೆ ಒಂದು ಬೌಲ್ ಹಣ್ಣು ತಿನ್ನಿ. ಆದ್ರೆ ಮಧ್ಯಾಹ್ನ ಊಟವಾದ ಬಳಿಕ, ಹಣ್ಣು- ತರಕಾರಿ ತಿನ್ನಬೇಡಿ. ತರಕಾರಿ ಸಲಾಡ್‌ನಲ್ಲಿ ಒಂದಿನ, ಸೌತೇಕಾಯಿ, ಈರುಳ್ಳಿ ಟೊಮೆಟೋ ಇದ್ರೆ, ಇನ್ನೊಂದು ದಿನ ಮೊಳಕೆ ಹಾಳು, ಕ್ಯಾರೆಟ್ ಇರಲಿ. ಮತ್ತೊಂದು ದಿನ ಬೀಟ್‌ರೂಟ್, ಈರುಳ್ಳಿ ಇರಲಿ. ಆದ್ರೆ ಟೊಮೆಟೋ ವಾರಕ್ಕೊಮ್ಮೆ ತಿಂದ್ರೆ ಸಾಕು. ಪ್ರತಿದಿನ ತಿನ್ನಬೇಡಿ.

ಇನ್ನು ಹಣ್ಣಿನ ಬೌಲ್‌ನಲ್ಲಿ ಒಂದು ದಿನ ಬಾಳೆ ಹಣ್ಣು- ಸೇಬು- ಚಿಕ್ಕು ಇದ್ರೆ, ಇನ್ನೊಂದು ದಿನ ಕಲ್ಲಂಗಡಿ ಇರಲಿ, ಮತ್ತೊಂದು ದಿನ ಪಪ್ಪಾಯಿ, ಆಮೇಲೆ ಮಸ್ಕ್‌ ಮೆಲನ್. ಹೀಗೆ ಪ್ರತಿದಿನ ವೆರೈಟಿ ಹಣ್ಣು ತಿನ್ನಿ. ಎಲ್ಲಕ್ಕಿಂತ ಮುಖ್ಯವಾದ ಟಿಪ್ಸ್ ಅಂದ್ರೆ ಚೆನ್ನಾಗಿ ನೀರು ಕುಡಿಯಿರಿ. ಆದ್ರೆ ಕುಡಿಯುವ ನೀರು ಶುದ್ಧವಾಗಿರಲಿ. ಬಿಸಿ ಮಾಡಿ, ತಣಿಸಿದ್ದಾಗಿರಲಿ. ನಿಮಗೆ ಜೀರ್ಣ ಮಾಡಿಕೊಳ್ಳುವಷ್ಟು ನೀರು ಕುಡಿದರೆ ಸಾಕು.

 

- Advertisement -

Latest Posts

Don't Miss