Sunday, September 8, 2024

Latest Posts

ವೆಜ್ ಕಬಾಬ್, ಬೀಟ್‌ರೂಟ್ ಕಟ್ಲೇಟ್ ರೆಸಿಪಿ..

- Advertisement -

ನಾನ್‌ವೆಜ್ ತಿನ್ನುವವರಿಗೆ ಕಬಾಬ್ ಇದೆ. ಹಂಗೆ ವೆಜಿಟೇರಿಯನ್‌ಗಳಿಗೆ ಕಟ್ಲೇಟ್ ಇದೆ. ಹಾಗಾಗಿ ಇಂದು ನಾವು ಬೀಟ್‌ರೂಟ್ ಕಟ್ಲೇಟ್ ಮಾಡೋದು ಹೇಗೆ..? ಇದನ್ನ ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..

ಏಕದಿನ, ಟೆಸ್ಟ್ ಆವೃತ್ತಿಗಳನ್ನು ಐಸಿಸಿ ರಕ್ಷಿಸಲಿ: ಕಪಿಲ್ ದೇವ್

ಬೇಕಾಗುವ ಸಾಮಗ್ರಿ: ಒಂದು ಕಪ್ ಬೀಟ್‌ರೂಟ್ ತುರಿ, ಮೂರು ಬೇಯಿಸಿದ ಆಲೂಗಡ್ಡೆ, ಅರ್ಧ ಕಪ್ ಕ್ಯಾರೆಟ್‌ ತುರಿ, ಅರ್ಧ ಕಪ್ ಬೇಯಿಸಿದ ಬಟಾಣಿ, ಒಂದು ಸ್ಪೂನ್ ಖಾರದ ಪುಡಿ, ಚಿಟಿಕೆ ಅರಶಿನ ಪುಡಿ, ಅರ್ಧ ಸ್ಪೂನ್ ಗರಂ ಮಸಾಲೆ ಪುಡಿ, ಮೂರು ಸ್ಪೂನ್ ರವಾ, ನಾಲ್ಕು ಸ್ಪೂನ್ ಎಣ್ಣೆ, ಕೊಂಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು.

ಕಾಂತಾರ ಸಿನಿಮಾದ ಹೊಸ ಸಾಂಗ್ ರಿಲೀಸ್: ‘ಸಿಂಗಾರ ಸಿರಿಯೆ’ ಹಾಡಿಗೆ ತಲೆದೂಗಿದ ಪ್ರೇಕ್ಷಕರು

ಮಾಡುವ ವಿಧಾನ: ಮೊದಲು ಬೀಟ್‌ರೂಟ್ ತುರಿ, ಕ್ಯಾರೆಟ್ ತುರಿ, ಬೇಯಿಸಿದ ಬಟಾಟೆ ಮತ್ತು ಬಟಾಣಿ ಸೇರಿಸಿ, ಸ್ಮ್ಯಾಶ್ ಮಾಡಿ, ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಉಪ್ಪು, ಅರಿಶಿನ, ಸಕ್ಕರೆ, ಖಾರದ ಪುಡಿ, ಗರಂ ಮಸಾಲೆ ಪುಡಿ ಸೇರಿಸಿ. ನಂತರ ಇದರಿಂದ ಚಿಕ್ಕ ಚಿಕ್ಕ ಉಂಡೆ ತಯಾರಿಸಿ. ಈಗ ಒಂದು ದೋಸೆ ಪ್ಯಾನ್‌ ಬಿಸಿ ಮಾಡಿ, ಅದಕ್ಕೆ ಎಣ್ಣೆ ಸವರಿ. ಈಗ ಉಂಡೆ ಮಾಡಿಟ್ಟುಕೊಂಡ ಪಲ್ಯವನ್ನ ಕಟ್ಲೇಟ್ ಶೇಪ್ ಮಾಡಿಕೊಂಡು, ರವೆಯಿಂದ ಅದನ್ನು ಕವರ್ ಮಾಡಿ, ತವ್ವಾ ಫ್ರೈ ಮಾಡಿದ್ರೆ, ಕಟ್ಲೇಟ್ ರೆಡಿ. ಇದನ್ನು ಸಾಸ್ ಜೊತೆ ಸರ್ವ್ ಮಾಡಿ.

- Advertisement -

Latest Posts

Don't Miss