ವೋಮವನ್ನು ಹೇಗೆ ತಿನ್ನಬೇಕು..? ಯಾಕೆ ತಿನ್ನಬೇಕು..? ಯಾವಾಗ ತಿನ್ನಬೇಕು..?

ವಾತ, ಪಿತ್ತ, ಕಫ ಈ ಮೂರು ಸಮ ಪ್ರಮಾಣದಲ್ಲಿದ್ದರೆ, ಆ ಮನುಷ್ಯ ಸಂಪೂರ್ಣ ಆರೋಗ್ಯವಂತನೆಂದು ಅರ್ಥ. ಈ ಮೂರನ್ನೂ ಸಮ ಪ್ರಮಾಣದಲ್ಲಿ ಇರಬೇಕು ಅಂದ್ರೆ, ನೀವು ವೋಮದ ಸೇವನೆ ಮಾಡಬೇಕು. ಹಾಗಾಗಿ ನಾವಿಂದು ವೋಮವನ್ನು ಹೇಗೆ ಸೇವಿಸಬೇಕು..? ಯಾಕೆ ತಿನ್ನಬೇಕು..? ಮತ್ತು ಯಾವಾಗ ತಿನ್ನಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ..

ಮೊದಲನೇಯದಾಗಿ ವೋಮವನ್ನು ಯಾಕೆ ತಿನ್ನಬೇಕು ಅನ್ನೋ ಬಗ್ಗೆ ತಿಳಿಯೋಣ. ವಾತ ಹೆಚ್ಚಾದಾಗ, ಅದನ್ನ ಕಡಿಮೆ ಮಾಡೋಕ್ಕೆ ವೋಮವನ್ನ ತಿನ್ನಲಾಗತ್ತೆ. ವೋಮವನ್ನ ಅಜ್ವೈನ್ ಅಂತಲೂ ಕರೆಯುತ್ತಾರೆ. ದೇಹದಲ್ಲಿ ವಾತ ಹೆಚ್ಚಾದಾಗ, ಕೈ ಕಾಲು ನೋವಾಗತ್ತೆ, ಗ್ಯಾಸ್ಟ್ರಿಕ್ ಸಮಸ್ಯೆ ಬರತ್ತೆ. ಹಾಗಾಗಿ ವೋಮದ ಸೇವನೆ ಮಾಡಲಾಗತ್ತೆ. ಹಾಗಾಗಿಯೇ ಕಾಳಿನ ಪದಾರ್ಥ ಮಾಡುವಾಗ, ಕಡಲೆ ಹಿಟ್ಟಿನ ಪದಾರ್ಥ ಮಾಡುವಾಗ, ವೋಮ ಬಳಕೆ ಮಾಡಲಾಗತ್ತೆ. ಯಾಕಂದ್ರೆ ಕಾಳು ಮತ್ತು ಕಡಲೆ ಹಿಟ್ಟು ಹೆಚ್ಚು ವಾತವನ್ನು ತರುವ ಪದಾರ್ಥ. ಇದರ ಸೇವನೆ ಮಾಡುವಾಗ, ವಾತ ಹೆಚ್ಚಾಗಬಾರದು ಅಂತಲೇ, ವೋಮವನ್ನು ಬಳಸುತ್ತಾರೆ.

ಇನ್ನು ವೋಮವನ್ನು ಹೇಗೆ ತಿನ್ನಬೇಕು ಅಂತಾ ಹೇಳಿದ್ರೆ, ನೀವು ಚಿಟಿಕೆ ವೋಮವನ್ನು ತಿನ್ನಬಹುದು. ಪ್ರತಿದಿನ ಇದರ ಸೇವನೆ ಮಾಡಬಹುದು. ಅಥವಾ ವೋಮದ ನೀರು ಮಾಡಿಟ್ಟುಕೊಂಡು ಕುಡಿಯಬಹುದು. ಬಾಣಂತಿಯರಿಗೆ ಈ ನೀರನ್ನ ಕುಡಿಸಲಾಗತ್ತೆ. ಇದರಿಂದ ಗ್ಯಾಸ್ಟಿಕ್ ಸಮಸ್ಯೆ ಕಡಿಮೆಯಾಗತ್ತೆ. ನೀರು ಕುದಿಸಿ, ಅದು ಕುದಿಯಬೇಕಾದ್ರೆ ವೋಮವನ್ನು ಸೇರಿಸಬೇಕು. ಈಗ ವೋಮದ ನೀರು ರೆಡಿ.

ವೋಮವನ್ನ ಯಾವಾಗ ಸೇವಿಸಬೇಕು ಅಂತಾ ಹೇಳಿದ್ರೆ, ಮಧ್ಯಾಹ್ನದ ಹೊತ್ತು ಸೇವಿಸಬೇಕು. ಬೆಳಿಗ್ಗೆ ದೇಹದಲ್ಲಿ ಪಿತ್ತದ ಪ್ರಮಾಣ ಹೆಚ್ಚಾಗಿರತ್ತೆ, ರಾತ್ರಿ ದೇಹದಲ್ಲಿ ಕಫದ ಪ್ರಮಾಣ ಹೆಚ್ಚಾಗತ್ತೆ. ಮಧ್ಯಾಹ್ನ ದೇಹದಲ್ಲಿ ವಾತದ ಪ್ರಮಾಣ ಹೆಚ್ಚಾಗತ್ತೆ. ಹಾಗಾಗಿ ವೋಮದ ಕಾಳು ಅಥವಾ ಅದರ ನೀರನ್ನು ಮಧ್ಯಾಹ್ನದ ಹೊತ್ತು ತಿನ್ನಬೇಕು.

ನೀವು ಯೋಗ ಮಾಡುವವರಾಗಿದ್ದಲ್ಲಿ ಈ ಆಹಾರವನ್ನು ಸೇವಿಸಬೇಡಿ..

ನಿಮ್ಮ ಕಿಚನ್ನಲ್ಲಿ ಇರುವ ಈ 3 ವಸ್ತುಗಳನ್ನು ಈಗಲೇ ಹೊರಹಾಕಿ..

ಈ ತಪ್ಪು ಮಾಡದಿದ್ರೆ ನಿಮ್ಮ ಸೌಂದರ್ಯ ಇನ್ನೂ ಚೆಂದವಾಗತ್ತೆ..

About The Author