ನಿಮ್ಮ ಆರೋಗ್ಯ ಚೆನ್ನಾಗಿದ್ರೆ, ಅದು ನಿಮ್ಮ ಮುಖದ ಮೇಲೆ ಗೊತ್ತಾಗತ್ತೆ. ಯಾಕಂದ್ರೆ ನಿಮ್ಮ ಮುಖದಲ್ಲಿ ಆ ಹೊಳಪಿರತ್ತೆ. ಅಂಥ ಗ್ಲೋ ಬರಲು ಕಾರಣವೇನೆಂದ್ರೆ, ನಿಮ್ಮ ಆರೋಗ್ಯದ ವಿಷಯದಲ್ಲಿ ನೀವು ತಪ್ಪು ಮಾಡದಿರುವುದು. ನಾವು ಮಾಡುವ ಕೆಲ ತಪ್ಪುಗಳೇ ನಮ್ಮ ಸೌಂದರ್ಯ ಹಾಳು ಮಾಡತ್ತೆ. ಹಾಗಾದ್ರೆ ಆ ತಪ್ಪುಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು ಸ್ಕಿನ್ ಮೇಲೆ ಪ್ರೆಶರ್ ಹಾಕಿ ಮಸಾಜ್ ಮಾಡೋದು. ಯಾವುದಾದರೂ ಕ್ರೀಮ್, ಸೋಪ್, ಅಥವಾ ಸೇರಮ್ ಹಚ್ಚಿ ಮುಖವನ್ನ ಚೆನ್ನಾಗಿ ಮಸಾಜ್ ಮಾಡಬೇಕು ಅನ್ನೋದು ನಿಜ. ಆದ್ರೆ ನೀವು ನಿಮ್ಮ ಸ್ಕಿನ್ ಮೇಲೆ ಸಿಕ್ಕಾಪಟ್ಟೆ ಪ್ರೆಶರ್ ಹಾಕಿ, ಮಸಾಜ್ ಮಾಡಿದ್ರೆ, ನಿಮ್ಮ ಸ್ಕಿನ್ ರಫ್ ಆಗತ್ತೆ, ಹಾಳಾಗತ್ತೆ. ನಿಮ್ಮ ಮುಖದ ಹೊಳಪು ಹೊರಟು ಹೋಗತ್ತೆ. ಹಾಗಾಗಿ ಮುಖಕ್ಕೆ ಮಸಾಜ್ ಮಾಡುವಾಗ, ಮೆಲ್ಲಗೆ ಮಸಾಜ್ ಮಾಡಿ. ಅಥವಾ ಟ್ಯಾಪ್ ಮಾಡಿ.
ಎರಡನೇಯ ತಪ್ಪು ನೀವು ಬಳಸುವ ತಲೆ ದಿಂಬಿನ ಕವರ್ ಕ್ಲೀನ್ ಮಾಡದಿರುವುದು. ಯಾವಾಗಲೂ ಎರಡರಿಂದ ಮೂರು ಪಿಲ್ಲೋ ಕವರ್ ಬಳಸಬೇಕು. ಒಂದು ಕೊಳೆಯಾದಾಗ, ಇನ್ನೊಂದು ಬಳಸೋದು. ಆದ್ರೆ ಹಲವರು ಒಂದೇ ಪಿಲ್ಲೋ ಕವರನ್ನ ತಿಂಗಳುಗಟ್ಟೆಲೆ ಬಳಸುತ್ತಾರೆ. ಇದರಿಂದಲೇ, ಕೂದಲು ಉದುರುವ ಮತ್ತು ಮುಖದ ಮೇಲೆ ಗುಳ್ಳೆಯಾಗುವ ಸಮಸ್ಯೆ ಬರೋದು. ಹಾಗಾಗಿ ಪಿಲ್ಲೋ ಕವರ್ ಕ್ಲೀನ್ ಆಗಿ ಇಡೋದು ತುಂಬಾ ಮುಖ್ಯ.
ಮೂರನೇಯ ತಪ್ಪು ಬೇರೆಯವರ ಟವೆಲ್ ಬಳಸೋದು. ನಿಮ್ಮ ಬಳಿ ಯಾವಾಗಲೂ ಎರಡರಿಂದ ಮೂರು ಟಾವೆಲ್ ಇರಬೇಕು. ನೀವು ಬೇರೆಯವರ ಟವೆಲ್ ಬಳಸಬಾರದು. ಯಾಕಂದ್ರೆ ಅವರು ಬಳಸಿದ ಟವೆಲ್‌ನಲ್ಲಿ ಅವರ ದೇಹದ ಬೆವರು ತಾಕಿರತ್ತೆ. ಅದು ನಿಮ್ಮ ದೇಹಕ್ಕೆ ತಾಕಿದರೆ, ನಿಮ್ಮ ದೇಹಕ್ಕೆ ಇನ್‌ಫೆಕ್ಷನ್ ಆಗಬಹುದು. ಅಥವಾ ಗುಳ್ಳೆಯಾಗಬಹುದು. ಅಥವಾ ಯಾವುದಾದರೂ ಚರ್ಮ ಸಮಸ್ಯೆ ಬರಬಹುದು. ಹಾಗಾಗಿ ಯಾರ ಟವೆಲನ್ನೂ ನೀವು ಬಳಸಬೇಡಿ.
ನಾಲ್ಕನೇಯ ತಪ್ಪು ಪದೇ ಪದೇ ನಿಮ್ಮ ಮುಖವನ್ನು ಮುಟ್ಟಿಕೊಳ್ಳುವುದು. ಹಲವರಿಗೆ ಈ ಅಭ್ಯಾಸ ಇರತ್ತೆ. ಅದರಲ್ಲೂ ಮೊಡವೆಯಾದವರಿಗೆ ಈ ಅಭ್ಯಾಸ ಹೆಚ್ಚಿರತ್ತೆ. ಆದ್ರೆ ಹೀಗೆ ಮಾಡಬಾರದು. ಯಾಕಂದ್ರೆ ನಮ್ಮ ಕೈಯಲ್ಲಿ ಧೂಳು, ಕೊಳೆ ಇರತ್ತೆ. ಇದರಿಂದಲೇ ನಾವು ನಮ್ಮ ಮುಖವನ್ನು ಮುಟ್ಟಿಕೊಂಡ್ರೆ, ಆ ಕೊಳೆ ಮುಖಕ್ಕೆ ತಾಕಿ. ನಮ್ಮ ಮುಖದ ಮೇಲೆ ಗುಳ್ಳೆಯಾಗತ್ತೆ. ಅಲರ್ಜಿಯಾಗತ್ತೆ. ಹಾಗಾಗಿ ಈ ತಪ್ಪು ಮಾಡಬೇಡಿ.
ಐದನೇಯ ತಪ್ಪು ದಿನಕ್ಕೆ ಎರಡೇ ಎರಡು ಬಾರಿ ಮುಖ ತೊಳೆಯುವುದು. ನಾವು ದಿನಕ್ಕೆ 10ರಿಂದ 11 ಬಾರಿಯಾದ್ರೂ ಮುಖ ತೊಳೆಯಬೇಕು. ಜೊತೆಗೆ ಅದಕ್ಕಿರುವ ನಿಯಮವನ್ನ ಅನುಸರಿಸಬೇಕು. ಅದೇನೆಂದರೆ, ನೀವು ದಿನಕ್ಕೆ ಎರಡು ಬಾರಿ ಮುಲ್ತಾನಿ ಮಿಟ್ಟಿ, ಅಥವಾ ಹೆಸರು ಕಾಳಿನ ಹಿಟ್ಟನ್ನು ಬಳಸಿ ಮುಖ ತೊಳೆಯಿರಿ. ಉಳಿದ ಬಾರಿ, ಬರೀ ಸ್ವಚ್ಛವಾದ ನೀರಿನಿಂದ ಮುಖ ತೊಳೆಯಬೇಕು. ಮತ್ತು ಹಾಗೆ ಮುಖ ತೊಳೆದಾಗ, ನೀರನ್ನು ಚರ್ಮ ಹೀರಿಕೊಳ್ಳಲು ಬಿಡಬೇಕು. ಯಾವುದೇ ಕಾರಣಕ್ಕೂ ಟವೆಲ್ ಬಳಸಿ, ಮುಖವನ್ನು ಒರೆಸಿಕೊಳ್ಳಬಾರದು. ಸೋಪ್ ಬಳಸದಿದ್ದರೆ ಇನ್ನೂ ಒಳ್ಳೆಯದು.