ಬೆಳ್ಳುಳ್ಳಿಯನ್ನ ನಾವು ವಿವಿಧ ರೀತಿಯಲ್ಲಿ ಬಳಕೆ ಮಾಡುತ್ತೇವೆ. ಕೆಲವರು ಸಾರಿಗೆ ಬೆಳ್ಳುಳ್ಳಿ ಒಗ್ಗರಣೆ ಹಾಕುತ್ತಾರೆ. ಇನ್ನು ಕೆಲವರು ಪಲ್ಯಕ್ಕೆ, ಚಟ್ನಿ, ಉಪ್ಪಿನಕಾಯಿ, ಹೀಗೆ ಹಲವು ಪದಾರ್ಥ ಮಾಡಲು ಉಪಯೋಗಿಸುತ್ತಾರೆ. ಆದ್ರೆ ಈ ರೀತಿ ತಿನ್ನುವುದರಿಂದ ಬರೀ ನಾಲಿಗೆಗೆ ರುಚಿ ತಾಗುತ್ತದೆ. ಆದ್ರೆ ನಿಮಗೆ ಬೆಳ್ಳುಳ್ಳಿಯಿಂದ ಆರೋಗ್ಯಕರ ಲಾಭ ಸಿಗಬೇಕು ಅಂದ್ರೆ, ನೀವು ಬೆಳ್ಳುಳ್ಳಿನ್ನು ಸರಿಯಾದ ರೀತಿಯಲ್ಲಿ ಸೇವಿಸಬೇಕು.
ಈ ಬಾರಿ ದೀಪಾವಳಿಗೆ ತಯಾರಿಸಿ ಬೇಸನ್ ಲಡ್ಡು..
ಬೆಳ್ಳುಳ್ಳಿಯ ನಾಲ್ಕು ಎಸಳಿನ ಸಿಪ್ಪೆ ತೆಗೆದು, ಅದನ್ನು ಚಪಾತಿ ಮಾಡುವ ತವ್ವಾಗೆ ಹಾಕಿ, ಮಂದ ಉರಿಯಲ್ಲಿ ಹುರಿಯಬೇಕು. ಹೀಗೆ ಹುರಿದ ಬೆಳ್ಳುಳ್ಳಿ ಮತ್ತು ಒಂದು ಗ್ಲಾಸ್ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಹೀಗೆ ಹುರಿದ ಬೆಳ್ಳುಳ್ಳಿ ತಿಂದು ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ರಕ್ತ ಸಂಚಲನ ಸರಿಯಾಗಿ, ಕೂದಲ ಬುಡ ಗಟ್ಟಿಗೊಳ್ಳುತ್ತದೆ.
ಚಪಾತಿ, ದೋಸೆಗೆ ಗುಡ್ ಕಾಂಬಿನೇಷನ್ ಈ ಪಪ್ಪಾಯಿ ಜ್ಯಾಮ್..
ಇಷ್ಟೇ ಅಲ್ಲದೇ, ಹೊಟ್ಟೆಗೆ ಸಂಬಂಧಿಸಿದ ಖಾಯಿಲೆ ಏನಾದರೂ ಇದ್ದರೆ, ಹೀಗೆ ಹುರಿದ ಬೆಳ್ಳುಳ್ಳಿ ಮತ್ತು ಉಗುರು ಬೆಚ್ಚಗಿನ ನೀರನ್ನು ಬೆಳಿಗ್ಗೆ ತೆಗೆದುಕೊಂಡಲ್ಲಿ, ಹೊಟ್ಟೆ ಸಮಸ್ಯೆಗೂ ಕೂಡ ಪರಿಹಾರ ಸಿಗುತ್ತದೆ. ಕಣ್ಣಿನ ಸಮಸ್ಯೆ ಕೂಡ ದೂರವಾಗುತ್ತದೆ. ಇನ್ನು ಇದರೊಂದಿಗೆ ಒಂದು ಸ್ಪೂನ್ ಜೇನುತುಪ್ಪ ಸೇವಿಸಿದ್ರೆ, ದೇಹದಲ್ಲಿರುವ ಕೆಟ್ಟ ಕಾಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಬೊಜ್ಜಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ.