ನಾವು ಪ್ರತಿದಿನ ನಿಮಗೆ ಹಲವು ಆರೋಗ್ಯ, ಸೌಂದರ್ಯ ಸಲಹೆಯನ್ನು ನೀಡುತ್ತಿದ್ದೇವೆ. ಅರಿಶಿನ ಬಳಸಿ ಯಾವ ರೀತಿ ಮುಖದ ಸೌಂದರ್ಯ ಹೆಚ್ಚಿಸಬಹುದು. ಆ್ಯಲೋವೆರಾ ಬಳಸೋದು ಹೇಗೆ ಇತ್ಯಾದಿ ವಿಷಯಗಳ ಬಗ್ಗೆ ನಿಮಗೆ ಹೇಳಿದ್ದೇವೆ. ಅದೇ ರೀತಿ ಇಂದು ಜೇನುತುಪ್ಪ ಬಳಸಿ, ಮುಖದ ಗ್ಲೋ ಹೆಚ್ಚಿಸುವುದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಈರುಳ್ಳಿ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ತಯಾರಿಸುವುದು ಹೀಗೆ ನೋಡಿ..
ಮೊದಲನೇಯ ಟಿಪ್ಸ್. 2 ಟೇಬಲ್ ಸ್ಪೂನ್ ಜೇನುತುಪ್ಪ,ಅರ್ಧ ಸ್ಪೂನ್ ಅರಿಶಿನ, ಇವೆರಡನ್ನು ಸರಿಯಾಗಿ ಬೆರೆಸಿ, ಒಂದು ಡಬ್ಬದಲ್ಲಿ ಹಾಕಿಡಿ. ಒಂದು ವಾರಕ್ಕೆ ಆಗುವಷ್ಟು ತಯಾರಿಸಿದರೆ, ಸಾಕು. ಇದನ್ನು ಪ್ರತಿದಿನ ಬಳಸಬೇಕು ಎಂದಿಲ್ಲ. ಒಂದು ದಿನ ಬಿಟ್ಟು ಒಂದು ದಿನ ಬಳಸಿ. ತೆಳ್ಳಗಿನ ಲೇಯರ್ ರೀತಿ, ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಕೇವಲ 3 ವಸ್ತುವನ್ನು ಬಳಸಿ, ಈ ಎಫೆಕ್ಟಿವ್ ಹೇರ್ ಆಯ್ಲ್ ತಯಾರಿಸಿ..
ಎರಡನೇಯ ಟಿಪ್ಸ್. 2 ಟೇಬಲ್ ಸ್ಪೂನ್ ಯೋಗರ್ಟ್, 1 ಟೇಬಲ್ ಸ್ಪೂನ್ ಜೇನುತುಪ್ಪ, ಇವೆರಡನ್ನು ಟೆನ್ನಾಗಿ ಮಿಕ್ಸ್ ಮಾಡಿ. ಮುಖಕ್ಕೆ ಹಚ್ಚಿ, 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದನ್ನು ಹಚ್ಚುವುದರಿಂದ ನಿಮ್ಮ ಮುಖ ಕಾಂತಿಯುತವಾಗಿರುತ್ತದೆ.
ಮೂರನೇಯ ಟಿಪ್ಸ್. 4 ಟೇಬಲ್ ಸ್ಪೂನ್ ಜೋಜೋಬಾ ಎಣ್ಣೆ, 1 ಟೇಬಲ್ ಸ್ಪೂನ್ ಜೇನುತುಪ್ಪ, ಇವೆರಡನ್ನೂ ಮಿಕ್ಸ್ ಮಾಡಿ, ಒಂದು ಬಾಟಲಿಗೆ ಹಾಕಿಡಿ. ಪ್ರತಿದಿನ ರಾತ್ರಿ ಮಲಗುವಾಗ ಎರಡೇ ಎರಡು ಡ್ರಾಪ್ಸ್ ಈ ಎಣ್ಣೆಯನ್ನು ಮುಖಕ್ಕೆ ಹಚ್ಚಿ, ಚೆನ್ನಾಗಿ ಮಸಾಜ್ ಮಾಡಿ, ಮರುದಿನ ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ಚೆನ್ನಾಗಿ ಫೇಸ್‌ವಾಶ್ ಮಾಡಿ.
ಇದೊಂದು ವಸ್ತುವನ್ನು ಬಳಸಿ, 5 ಕ್ರೀಮ್ ತಯಾರಿಸಿ, ಚೆಂದ ಕಾಣಿಸಬಹುದು..
ಇನ್ನು ಎಲ್ಲಾಕ್ಕಿಂತ ಮುಖ್ಯವಾದ ವಿಷಯ ಅಂದ್ರೆ, ಇದನ್ನೆಲ್ಲ ಅಪ್ಲೈ ಮಾಡೋಕ್ಕೂ ಮುನ್ನ ಇದನ್ನು ನಿಮ್ಮ ಕೈಗೆ ಹಚ್ಚಿ ಕೊಂಚ ಹೊತ್ತು ಬಿಟ್ಟು ಪರಿಕ್ಷಿಸಿ ನೋಡಿ. ಇದನ್ನು ಹಚ್ಚಿಕೊಂಡ ಬಳಿಕ, ನಿಮ್ಮ ಚರ್ಮಕ್ಕೆ ಯಾವುದೇ ಹಾನಿಯಾಗಿಲ್ಲವೆಂದಾದಲ್ಲಿ ಮಾತ್ರ ಇದನ್ನು ಮುಖಕ್ಕೆ ಅಪ್ಲೈ ಮಾಡಿ. ಮತ್ತು ಮುಖಕ್ಕೆ ಅಪ್ಲೈ ಮಾಡೋಕ್ಕೂ ಮುನ್ನ, ಮುಖವನ್ನು ಕ್ಲೀನ್ ಆಗಿ ತೊಳೆದುಕೊಳ್ಳಿ.