ಎಲ್ಲರಿಗೂ ತಮ್ಮ ಮಕ್ಕಳು ಬುದ್ಧಿವಂತರಾಗಬೇಕು, ಚುರುಕಾಗಿರಬೇಕು ಅನ್ನೋ ಆಸೆ ಇರತ್ತೆ. ಹಾಗಾಗಿ ವಿವಿಧ ತರಹದ ತರಕಾರಿ, ಹಣ್ಣು, ಸೊಪ್ಪು, ಡ್ರೈಫ್ರೂಟ್ಸ್ ಎಲ್ಲವನ್ನೂ ತಿನ್ನಿಸುತ್ತಾರೆ. ಆದ್ರೆ ನೀವು ಇದೆಲ್ಲದರ ಜೊತೆ, ಜಾಯಿಕಾಯಿಯನ್ನ ತೆಯ್ದು ತಿನ್ನಿಸಿದರೆ, ಮಕ್ಕಳು ಚರುಕಾಗುತ್ತಾರಲ್ಲದೇ, ಉಚ್ಛಾರವೂ ಸ್ಪಷ್ಟವಾಗಿರುತ್ತದೆ. ಹಾಗಾದ್ರೆ ಜಾಯಿಕಾಯಿಯನ್ನ ಮಕ್ಕಳಿಗೆ ತಿನ್ನಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ..
ಪಪ್ಪಾಯಿ ಎಲೆಯ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು..?
ಪ್ರತಿದಿನವಲ್ಲದಿದ್ದರೂ ಒಂದು ದಿನ ಬಿಟ್ಟು ಒಂದು ದಿನ ನೀವು ಜಾಯಿಕಾಯಿಯನ್ನು ತೇಯ್ದು ಕೊಂಚ ಮಗುವಿಗೆ ತಿನ್ನಿಸಿದರೆ, ಮಗುವಿಗೆ ಹೊಟ್ಟೆ ನೋವಿನ ಸಮಸ್ಯೆ ಇದ್ದಲ್ಲಿ, ಅದು ನಿವಾರಣೆಯಾಗುತ್ತದೆ. ಪುಟ್ಟ ಮಕ್ಕಳಿಗೆ ಹೆಚ್ಚಾಗಿ ಗ್ಯಾಸ್ ಸಮಸ್ಯೆ ಕಾಡುತ್ತದೆ. ಹಾಗಾಗಿ ನೀವು ಎರಡು ದಿನಕ್ಕೊಮ್ಮೆ ಜಾಯಿಕಾಯಿ ತೇಯ್ದು ತಿನ್ನಿಸುವುದು ಉತ್ತಮ.
ಮಕ್ಕಳಿಗೆ ತಾಯಿಯ ಹಾಲು ಎಷ್ಟು ಮುಖ್ಯವೋ, ನಿದ್ದೆ ಕೂಡ ಅಷ್ಟೇ ಮುಖ್ಯ. ಯಾವ ಮಗು ಚೆನ್ನಾಗಿ ನಿದ್ರೆ ಮಾಡುತ್ತದೆಯೋ, ಆ ಮಗು ಆರೋಗ್ಯವಾಗಿರುತ್ತದೆ. ಅದರ ತೂಕ ಸರಿಯಾಗಿರುತ್ತದೆ. ಹಾಗಾಗಿ ಮಕ್ಕಳು ಸರಿಯಾಗಿ ನಿದ್ದೆ ಮಾಡಬೇಕು. ನಿಮ್ಮ ಮಗು ಸರಿಯಾಗಿ ನಿದ್ದೆ ಮಾಡದಿದ್ದಲ್ಲಿ, ಅದಕ್ಕೆ ಜಾಯಿಕಾಯಿ ತೇಯ್ದು ನಾಲಿಗೆಗೆ ನೆಕ್ಕಿಸಿ. ಇದರಿಂದ ನಿಮ್ಮ ಮಗು ಗಾಢವಾಗಿ ನಿದ್ರೆ ಮಾಡುತ್ತದೆ.
ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?
ಅಲ್ಲದೇ ನಿಮ್ಮ ಮಗುವಿಗೆ ಪದೇ ಪದೇ ಜ್ವರ, ನೆಗಡಿ , ಕೆಮ್ಮು ಬರುತ್ತಿದ್ದರೂ ನೀವು ಜಾಯಿಕಾಯಿ ತೇಯ್ದು ತಿನ್ನಿಸಬಹುದು. ಮಗುವಿನ ಪಚನಕ್ರಿಯೆ ಸರಿಯಾಗಿ ಆಗಲು ಕೂಡ ಇದು ಉಪಯುಕ್ತವಾಗಿದೆ. ಒಟ್ಟಾರೆಯಾಗಿ ನೀವು ಎರಡು ದಿನಕ್ಕೊಮ್ಮೆ ನಿಮ್ಮ ಮಗುವಿಗೆ ಜಾಯಿಕಾಯಿ ತೇಯ್ದು ತಿನ್ನಿಸಿದರೆ, ಹಲವು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಕೊಡಿಸಬಹುದು.