ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ (oil pulling) ಏನು ಲಾಭ..?

ಆಯುರ್ವೇದದಲ್ಲಿ ಆರೋಗ್ಯವನ್ನು ಅಭಿವೃದ್ಧಿಪಡಿಸಲು ಹಲವು ಚಿಕಿತ್ಸೆಗಳಿವೆ. ಅವುಗಳಲ್ಲಿ ಆಯ್ಲ್ ಪುಲ್ಲಿಂಗ್ ಕೂಡ ಒಂದು. ಅಂದ್ರೆ ಬಾಯಿಯಲ್ಲಿ ಎಣ್ಣೆ ಹಾಕಿ, ಬಾಯಿ ಮುಕ್ಕಳಿಸುವುದು. ಅದು ಕೂಡ ನಿಯಮಬದ್ಧವಾಗಿ. ಹಾಗಾದ್ರೆ ಆಯ್ಲ್‌ ಪುಲ್ಲಿಂಗ್ ಮಾಡುವುದರಿಂದ ಆಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..

ಗೋಧಿಕಡಿ ಪಾಯಸ ರೆಸಿಪಿ

ಬಾಯಿಯಲ್ಲಿ ಎಣ್ಣೆ ಹಾಕಿ, ಬಾಯಿ ಮುಕ್ಕಳಿಸುವುದನ್ನು ಆಯುರ್ವೇದದಲ್ಲಿ ಕವಲ ಗೃಹ ಕ್ರಿಯಾ ಎಂದು ಹೇಳಲಾಗತ್ತೆ. ಇದನ್ನು ಮಾಡುವುದರಿಂದ, ಬಾಡಿ ಡೆಟಾಕ್ಸ್ ಆಗತ್ತೆ. ಬಾಯಿ ಹುಣ್ಣು, ಹಲ್ಲಿನ ಸಮಸ್ಯೆ, ಇದ್ಯಾವುದೂ ಬರುವುದಿಲ್ಲ. ಶುಶ್ರೂತ ಸಂಹಿತೆ, ಚರಕ ಸಂಹಿತೆಯಲ್ಲಿಯೂ ಇದನ್ನ ಉಲ್ಲೇಖ ಮಾಡಲಾಗಿದೆ. ಆಯುರ್ವೇದದಲ್ಲಿ ಆಯ್ಲ್ ಪುಲ್ಲಿಂಗ್ ಮಾಡುವುದು ಆರೋಗ್ಯಕಾರಿಯಾಗಿದೆ. ಇದನ್ನ ಹಲವರು ಪ್ರಯೋಗಿಸಿ, ಉತ್ತಮ ರಿಸಲ್ಟ್ ಪಡೆದಿದ್ದಾರೆ.

ಹಾಗಾದ್ರೆ ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನ ಮಾಡಬೇಕು. ಒಂದು ಸ್ಪೂನ್ ತೆಂಗಿನ ಎಣ್ಣೆಯನ್ನ ಬಾಯಿಗೆ ಹಾಕಿ, ಎಲ್ಲ ಹಲ್ಲುಗಳಿಗೂ ತಾಗುವಂತೆ, ಬಾಯಿ ಮುಕ್ಕಳಿಸಿ. 15ರಿಂದ 20 ನಿಮಿಷಗಳ ಕಾಲ, ಬಾಯಿಯಲ್ಲಿ ಎಣ್ಣೆ ಹಾಕಿ, ಬಾಯಿ ಮುಕ್ಕಳಿಸಬೇಕು. ಇದನ್ನು ಇಷ್ಟು ಹೊತ್ತು ಮಾಡಿದಾಗಲೇ, ಒಳ್ಳೆಯ ರಿಸಲ್ಟ್ ಬರುವುದಕ್ಕೆ ಸಾಧ್ಯವಾಗೋದು.

ಟೂತ್ ಪೇಸ್ಟ್ ಬಳಸುವ ಬದಲು ಇದನ್ನು ಬಳಸಿ..

20 ನಿಮಿಷದ ಬಳಿಕ ಆ ಎಣ್ಣೆಯನ್ನು ಚೆಲ್ಲಿಬಿಡಿ. ನಂತರ ನೀರಿನಿಂದ ಬಾಯಿ ಮುಕ್ಕಳಿಸಬೇಕು. ಕೊಂಚ ಉಗುರು ಬೆಚ್ಚಗಿನ ನೀರಿಗೆ ಕೊಂಚ ಉಪ್ಪು ಹಾಕಿ, ಆ ನೀರಿನಿಂದ ಚೆನ್ನಾಗಿ ಬಾಯಿ ಮುಕ್ಕಳಿಸಬೇಕು. ನಂತರ ಬೆರಳಿನಿಂದ ಹಲ್ಲುಜ್ಜಿ, ಮತ್ತೆ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ. ನೀವು ಇದನ್ನ ಒಂದು ವಾರ ಅಥವಾ 10 ದಿನ ಮಾಡಿದ್ರೆ ಸಾಕು. ಮತ್ತೆ 6 ತಿಂಗಳ ನಂತರ ಮತ್ತೆ ಹೀಗೆ ಒಂದು ವಾರ ಮಾಡಿ. ವರ್ಷಕ್ಕೆ ಎರಡು ಬಾರಿ ಈ ರೀತಿ ಮಾಡಿದ್ರೆ ನಿಮ್ಮ ಬಾಯಿಯ ಆರೋಗ್ಯ ಉತ್ತಮವಾಗಿರತ್ತೆ.

ಸಿಂಪಲ್ ಮ್ಯಾಂಗೋ ಕುಲ್ಫಿ ರೆಸಿಪಿ..

About The Author