ಪಪ್ಪಾಯಿ ಹಣ್ಣಿನ ಪ್ರಯೋಜನಗಳೇನು..? ಪಪ್ಪಾಯಿ ಸೇವನೆಯಿಂದ ನಮಗಾಗುವ ಲಾಭಗಳೇನು ಅಂತಾ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಆದರೆ ಇಂದುನ ನಾವು ಪಪ್ಪಾಯಿ ಎಲೆಯ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ಹೇಳಲಿದ್ದೇವೆ..
ಡೆಂಘ್ಯೂ, ಚಿಕನ್ ಗುನ್ಯಾ ಆದಾಗ, ಪಪ್ಪಾಯಿ ಹಣ್ಮಿನ ಎಲೆಯ ಜ್ಯೂಸ್ ಸೇವಿಸಲು ಹೇಳಲಾಗುತ್ತದೆ. ಯಾಕಂದ್ರೆ ಇವೆರಡೂ ರೋಗಗಳು ಅಷ್ಟು ಸುಲಭವಾಗಿ ಹೋಗುವಂಥದ್ದಲ್ಲ. ಹಾಗಾಗಿ ಆಸ್ಪತ್ರೆ ಔಷಧಿಯೊಂದಿಗೆ, ಮನೆ ಮದ್ದಾಗಿ ಪಪ್ಪಾಯಿ ಎಲೆ ಜ್ಯೂಸ್ ಕುಡಿಯಲು ಹೇಳುತ್ತಾರೆ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗಾಗಿ ಮಾರಕ ಖಾಯಿಲೆಗಳನ್ನ ಕೂಡ ಗುಣ ಪಡಿಸುವ ತಾಕತ್ತು ಪಪ್ಪಾಯಿ ಎಲೆಯಲ್ಲಿದೆ.
ಇವು ಕಿಡ್ನಿಯಲ್ಲಿ ಕಲ್ಲುಗಳನ್ನು ಉಂಟುಮಾಡುವ ಆಹಾರಗಳು ಇವುಗಳಿಂದ ದೂರವಿರುವುದು ಉತ್ತಮ..!
ಕ್ಯಾನ್ಸರ್ ರೋಗವನ್ನು ಕೂಡ ತೊಡದು ಹಾಕುವ ಶಕ್ತಿ ಪಪ್ಪಾಯಿ ಎಲೆಯಲ್ಲಿದ್ದು, ಇದರ ಜ್ಯೂಸ್ ಸೇವಿಸಿದ್ದಲ್ಲಿ, ಬ್ರೀಸ್ಟ್ ಕ್ಯಾನ್ಸರ್ ಸೇರಿ ಇತರೆ ಕ್ಯಾನ್ಸರ್ ಕಣಗಳು ದೇಹದಲ್ಲಿ ಉತ್ಪತ್ತಿಯಾಗದಂತೆ ಇದು ತಡೆಯುತ್ತದೆ. ಅಲ್ಲದೇ, ದೇಹದಲ್ಲಿ ಕೆಟ್ಟ ಕೀಟಾಣುಗಳು ಹೆಚ್ಚಾಗದಂತೆ ಇದು ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಇದರ ಸೇವನೆಯಿಂದ ಪದೇ ಪದೇ ಜ್ವರ ಬರುವುದು, ಕೆಮ್ಮು ನೆಗಡಿಯುಂಟಾಗುವುದೆಲ್ಲ ತಡೆಯಬಹುದು.
ಇನ್ನು ಮುಟ್ಟಿನ ಸಮಯದಲ್ಲಾಗುವ ಹೊಟ್ಟೆ ನೋವು, ಕೈ ಕಾಲು ನೋವುಗಳನ್ನೆಲ್ಲ ತಡೆಗಟ್ಟುವ ಶಕ್ತಿ ಪಪ್ಪಾಯಿ ಎಲೆಯಲ್ಲಿದೆ. ಪಪ್ಪಾಯಿ ಎಲೆ , ಹುಣಸೆ ಹಣ್ಣು ಮತ್ತು ಉಪ್ಪನ್ನು ಸೇರಿಸಿ, ಕಶಾಯ ಮಾಡಿ ಸೇವಿಸಿದ್ರೆ, ಮುಟ್ಟಿನ ಹೊಟ್ಟೆ ನೋವಿನಿಂದ ಮುಕ್ತಿ ಸಿಗುತ್ತದೆ.
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿದರೆ ಎಷ್ಟು ಲಾಭ ಉಂಟು ಗೊತ್ತಾ..?
ಪಪ್ಪಾಯಿ ಎಲೆಯ ಜ್ಯೂಸ್ ಸೇವನೆಯಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ. ಇದರಿಂದ ನೀವು ಆರೋಗ್ಯವಂತರಾಗಿರುತ್ತೀರಿ. ಆದ್ರೆ ನೀವು ಈ ಜ್ಯೂಸನ್ನು ಪ್ರತಿದಿನ ಅಥವಾ ವಾರಕ್ಕೆರಡು ಬಾರಿ ಬರೀ ಎರಡೇ ಎರಡೇ ಚಮಚ ಸೇವಿಸಬೇಕು. ಇದನ್ನು ಪ್ರತಿದಿನ ಸೇವಿಸಿದ್ದಲ್ಲಿ ನಿಮ್‌ಮ ದೇಹದಲ್ಲಿ ಉಷ್ಣ ಹೆಚ್ಚಾಗಿ, ನಿಮಗೆ ತೊಂದರೆಯಾಗಿದ್ದಲ್ಲಿ. ವಾರಕ್ಕೆರಡು ಬಾರಿ ಮಾತ್ರ ಈ ಜ್ಯೂಸ್ ಸೇವಿಸಿ.
ಇನ್ನು ಮುಖ್ಯವಾದ ವಿಚಾರ ಅಂದ್ರೆ ನಿಮಗೆ ಪಪ್ಪಾಯಿ ಎಲೆಯ ಜ್ಯೂಸ್ ಕುಡಿದರೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.