ಕುಂಬಳಕಾಯಿ ಎಷ್ಟು ರುಚಿಯಾದ ತರಕಾರಿಯೋ, ಅದರ ಬೀಜ ಅಷ್ಟೇ ಆರೋಗ್ಯಕರವಾಗಿದೆ. ಇತ್ತೀಚಿನ ದಿನಗಳಲ್ಲಿ ಹೊಟೇಲ್ನಲ್ಲೂ ಕುಂಬಳಕಾಯಿ ಬೀಜವನ್ನ ಬಳಸಲಾಗುತ್ತಿದೆ. ಐಸ್ಕ್ರೀಮ್, ಸ್ಮೂದೀಸ್, ಸೂಪ್ ಹೀಗೆ ಹಲವು ಆಹಾರಗಳಲ್ಲಿ ಒಣಗಿಸಿದ ಕುಂಬಳಕಾಯಿ ಬೀಜವನ್ನು ಬಳಸುತ್ತಾರೆ. ಕೆಲವರು ಸಿಹಿ ತಿಂಡಿ ತಯಾರಿಸುವಾಗಲೂ ಬಳಸುತ್ತಾರೆ. ಹಾಗಾದ್ರೆ ಕುಂಬಳಕಾಯಿ ಬೀಜದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಒಣಗಿದ ಕುಂಬಳಕಾಯಿ ಬೀಜಗಳಲ್ಲಿ ಹಲವು ಪೋಷಕಾಂಶಗಳಿದೆ. ಮೆಗ್ನಿಷಿಯಂ, ಪ್ರೋಟೀನ್, ಜಿಂಕ್, ಸತು ಇವೆಲ್ಲವೂ ಇದರಲ್ಲಿದೆ. ಹಾಗಾಗಿ ನೀವು ಪ್ರತಿದಿನ ಕೊಂಚ ಕೊಂಚ ಕುಂಬಳಕಾಯಿ ಬೀಜ ತಿಂದರೆ, ನಿಮ್ಮ ದೇಹದ ಮೂಳೆ ಗಟ್ಟಿಯಾಗುತ್ತದೆ. ಪುರುಷರಲ್ಲಿ ವೀರ್ಯ ಹೆಚ್ಚಾಗಲು ಇದು ಅನುಕೂಲವಾಗಿದೆ. ಹೃದಯದ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ, ಕುಂಬಳಕಾಯಿ ಬೀಜವನ್ನು ಸೇವಿಸಬೇಕು. ಇಷ್ಟೇ ಅಲ್ಲದೇ, ತೂಕ ಇಳಿಸಲು ಕೂಡ ಇದು ಸಹಕಾರಿಯಾಗಿದೆ.
ಕುಂಬಳಕಾಯ ಬೀಜದ ಸೇವನೆ ಹೇಗೆ ಮಾಡಬೇಕು ಎಂದರೆ, ಒಣಗಿದ ಕುಂಬಳಕಾಯಿ ಬೀಜವನ್ನ ನೀವು ಸೇವಿಸುವ ಸೂಪ್, ಸ್ಮೂದಿ, ಮಿಲ್ಕ್ಶೇಕ್ ಜೊತೆ ಸೇರಿಸಿ ತಿನ್ನಬಹುದು. ಅಥವಾ ಪ್ರತಿದಿನ ಡ್ರೈಫ್ರೂಟ್ಸ್ ಲಾಡು ಮಾಡಿಕೊಂಡು ತಿನ್ನಿ. ಈ ವೇಳೆ ಕುಂಬಳಕಾಯಿ ಬೀಜವನ್ನ ಅದರೊಂದಿಗೆ ಸೇರಿಸಿ, ತಿನ್ನಿ.