ಎಣ್ಣೆಸ್ನಾನ ಮುಖ್ಯ ಅಂತಾ ಹೇಳೋದ್ಯಾಕೆ ಗೊತ್ತಾ..?

ಹಿಂದೂಗಳಲ್ಲಿ ವರ್ಷಕ್ಕೆ ಒಂದು ಬಾರಿ, ಅದು ದೀಪಾವಳಿಗೆ ಎಣ್ಣೆ ಸ್ನಾನ ಮಾಡಲಾಗತ್ತೆ. ಕೆಲವರು ಯುಗಾದಿಗೂ ಮಾಡುತ್ತಾರೆ. ಆದರೆ ನಾವು ಬರೀ ವರ್ಷಕ್ಕೆ ಒಂದು ಬಾರಿ ಅಲ್ಲ. ಬದಲಾಗಿ ತಿಂಗಳಿಗೆ ಒಂದು ಬಾರಿ ಎಣ್ಣೆ ಸ್ನಾನ ಮಾಡಲೇಬೇಕು. ಇದರಿಂದ ನಮ್ಮ ಆರೋಗ್ಯ ಉತ್ತಮವಾಗುವುದಲ್ಲದೇ, ಸೌಂದರ್ಯ ಕೂಡ ವೃದ್ಧಿಸುತ್ತದೆ. ಹಾಗಾದ್ರೆ ಎಣ್ಣೆ ಸ್ನಾನ ಮಾಡುವುದರಿಂದ ನಮಗಾಗು ಲಾಭವೇನು ಅಂತಾ ತಿಳಿಯೋಣ ಬನ್ನಿ..

ಮುಡಿಯಿಂದ ಹಿಡಿದು ಅಡಿಯವರೆಗೂ ಎಣ್ಣೆ ಹಾಕಿ ಮಸಾಜ್ ಮಾಡಿ, ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಿದ್ರೆ, ಆರಾಮದಾಯಕವಾಗಿರತ್ತೆ. ಅಲ್ಲದೇ ಒಳ್ಳೆ ನಿದ್ದೆಯೂ ಬರತ್ತೆ. ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ. ನೀವು ನಿದ್ದೆಗೆಡುತ್ತಿದ್ದೀರಿ ಎಂದಾದಲ್ಲಿ, ತಿಂಗಳಿಗೊಮ್ಮೆಯಾದರೂ, ನೆತ್ತಿಯಿಂದ, ಪಾದದವರೆಗೆ ತೆಂಗಿನ ಎಣ್ಣೆ, ಬದಾಮ್ ಎಣ್ಣೆ, ಅಥವಾ ಎಳ್ಳೆಣ್ಣೆ ಈ ಮೂರರಲ್ಲಿ ಯಾವುದಾದರೂ ಎಣ್ಣೆ ಬಳಸಿ, ಚೆನ್ನಾಗಿ ದೇಹವನ್ನ ಮಸಾಜ್ ಮಾಡಿ. ಅರ್ಧ ಗಂಟೆ ಸೂರ್ಯನ ತಿಳಿ ಬಿಸಿಲಿಗೆ ನಿಂತು. ಬಳಿಕ, ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಿ. ಇದರಿಂದ ನಿಮ್ಮ ದೇಹದ ಸುಸ್ತೆಲ್ಲಾ ಹೋಗಿ, ನೀವು ಚೈತನ್ಯದಾಯಕವಾಗುವಿರಿ. ಅಲ್ಲದೇ, ಉತ್ತಮ ನಿದ್ದೆ ಕೂಡ ಬರುತ್ತದೆ.

ಇಷ್ಟೇ ಅಲ್ಲದೇ, ಕೈ ಕಾಲು ನೋವು, ಮೂಳೆ ನೋವು ಇದ್ದರೆ, ಅದು ಕೂಡ ಹೋಗುತ್ತದೆ. ಮಾನಸಿಕ ಒತ್ತಡವೆಲ್ಲಾ ದೂರವಾಗಿ, ಹಿತವಾದ ಅನುಭವ ಕೊಡುತ್ತದೆ. ಇಷ್ಟೇ ಅಲ್ಲದೇ, ದೇಹಕ್ಕೆ ಎಣ್ಣೆ ಮಸಾಜ್ ಮಾಡಿ, ಸ್ನಾನ ಮಾಡಿದ್ರೆ, ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ದೇಹದಲ್ಲಿ ರಕ್ತಸಂಚಲನ ಉತ್ತಮವಾಗಿರುವಂತೆ ಮಾಡುತ್ತದೆ.

ಇನ್ನು ಯಾವಾಗ ಎಣ್ಣೆ ಮಸಾಜ್ ಮಾಡಬೇಕು..? ಹೇಗೆ ಮಾಡಬೇಕು ಎಂದರೆ, ಬೆಳಿಗ್ಗೆ 8 ಗಂಟೆಯೊಳಗೆ ಮಸಾಜ್ ಮಾಡಿ ಸ್ನಾನವೂ ಮಾಡಬೇಕು. ಏಕೆಂದರೆ, ಸೂರ್ಯನ ತಿಳಿ ಬಿಸಿಲಿನ ಶಕ್ತಿ ಇರುವುದೇ ಈ ಸಮಯದಲ್ಲಿ. ಇನ್ನು ಮಸಾಜ್ ಮಾಡುವಾಗ, ಶುದ್ಧವಾದ ತೈಲವನ್ನೇ ಉಪಯೋಗಿಸಿ. ಲೈಟ್ ಆಗಿ ಹಣ್ಣಿನ ಸೇವನೆ ಮಾಡಿ. ಖಾಲಿ ಹೊಟ್ಟೆಯಲ್ಲಿ ಬಾಡಿ ಮಸಾಜ್ ಮಾಡಬಾರದು.

ಸಕ್ಕರೆ ಬದಲು ಬೆಲ್ಲವನ್ನು ಬಳಸಿ, ಈ ಆರೋಗ್ಯಕರ ಲಾಭವನ್ನು ಪಡೆಯಿರಿ..

ಬಾಳೆಹಣ್ಣಿನ ಸಿಪ್ಪೆಯಲ್ಲೂ ಇದೆ, ಸೌಂದರ್ಯಕ್ಕೆ ಬೇಕಾದ ಲಾಭ..

ಬೇಸಿಗೆಯಲ್ಲಿ ಹಲಸಿನ ಹಣ್ಣನ್ನು ತಿನ್ನಲೇಬೇಕು ಅಂತಾ ಹೇಳೋದ್ಯಾಕೆ..?

About The Author