ಇಡೀ ಭರತಖಂಡದ ರಾಜನಾಗಿ ಮೆರೆದ ಶ್ರೀರಾಮ, ಶ್ರೀವಿಷ್ಣುವಿನ ಅವತಾರ. ಶ್ರೀರಾಮನನ್ನು ಜಪಿಸಿದವರನ್ನು ಎಂದಿಗೂ ರಾಮ ನಿರಾಸೆ ಮಾಡುವುದಿಲ್ಲವೆಂಬ ಮಾತಿದೆ. ಹಾಗಾಗಿ ಹಲವರು ರಾಮ ನಾಮ ಜಪ ಮಾಡುತ್ತಾರೆ. ಇಂದು ನಾವು ರಾಮ ನಾಮ ಜಪದಿಂದಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ..
ಸ್ವತಃ ಶಿವನೇ ಹೇಳಿದ್ದಾನೆ ರಾಮನಾಮ ಜಪಕ್ಕಿಂತ ಉನ್ನತವಾದ ಜಪ ಇನ್ನೊಂದಿಲ್ಲವೆಂದು. ನೀವು ರಾಮನಾಮ ಜಪಿಸೋದು ಒಂದು ವಿಷ್ಣು ಸಹಸ್ರನಾಮ ಹೇಳುವುದು ಒಂದೇ ಎಂದು. ರಾಮನಾಮ ಜಪ ಮಾಡುವಾಗ ಯಾವುದೇ ಪದ್ಧತಿ ಅನುಸರಿಸಬೇಕಾಗಿಲ್ಲ. ಎಂಥದ್ದೇ ಸಮಯದಲ್ಲಿ ನೀವು ರಾಮನಾಮವನ್ನು ಜಪಿಸಬಹುದು. ಈ ಜಪಕ್ಕೆ ಯಾವುದೇ ದೋಷವಿಲ್ಲ.
ತೀರಿಹೋದವರು ಕನಸ್ಸಿನಲ್ಲಿ ಕಾಣಿಸೋದ್ಯಾಕೆ..?
ಸನಾತನ ಧರ್ಮದಲ್ಲಿ 7 ಕೋಟಿ ಮಂತ್ರವಿದೆ. ಆದ್ರೆ ರಾಮನಾಮ ಜಪ ಅವೆಲ್ಲ ಮಂತ್ರಗಳಿಗಿಂತಲೂ ಶ್ರೇಷ್ಠವಾಗಿದೆ. ಹಾಗಾಗಿ ಸತ್ತಾಗ ಆ ಆತ್ಮಕ್ಕೆ ಮುಕ್ತಿ ಸಿಗಲು ರಾಮನಾಮ ಜಪಿಸಲಾಗತ್ತೆ. ವೃದ್ಧರು ತಮಗೆ ಮೋಕ್ಷ ಸಿಗಲೆಂದು ರಾಮನಾಮ ಜಪಿಸುತ್ತಾರೆ. ಗರ್ಭಿಣಿಯರು, ಮುಟ್ಟಾದ ಹೆಣ್ಣು ಮಕ್ಕಳು ಯಾರು ಬೇಕಾದರೂ ರಾಮನಾಮ ಜಪ ಮಾಡಬಹುದು.
ಶ್ರೀರಾಮ ನಾಮ ಜಪಿಸುವುದರಿಂದ ನಿಮಗೆ ತಾಳ್ಮೆ ಮೈಗೂಡುತ್ತದೆ. ಎಂಥದ್ದೇ ಕಷ್ಟವಿದ್ದರೂ ಶ್ರೀರಾಮನಾಮವನ್ನು ಭಕ್ತಿಯಿಂದ ಜಪಿಸಿದರೆ, ರಾಮ ಆ ಕಷ್ಟದಿಂದ ಪಾರು ಮಾಡುತ್ತಾನೆಂಬ ನಂಬಿಕೆ ಇದೆ. ಹಲವರ ಜೀವನದಲ್ಲಿ ಈ ಪವಾಡವೂ ನಡೆದಿದೆ. ಕಾಳ ಸರ್ಪದೋಷ, ಕುಜದೋಷ, ಸಾಡೆಸಾಥಿ ಎಂಥದ್ದೇ ದೋಷವಿರಲಿ, ರಾಮನಾಮ ಜಪಿಸುವುದರಿಂದ ಅದರ ದೋಷ ಸ್ವಲ್ಪವಾದರೂ ಕಡಿಮೆಯಾಗುತ್ತದೆ.