Recipe: ಹೊಟೇಲ್‌ಗೆ ಹೋಗಿ ಅಲ್ಲಿ ತಯಾರಿಸುವ ಖಾದ್ಯ ತಿನ್ನುವುದಕ್ಕಿಂತ, ಅದನ್ನು ಮನೆಯಲ್ಲೇ ಮಾಡಿ ತಿನ್ನುವುದರಿಂದ, ಅದರ ಟೇಸ್ಟ್ ಇನ್ನೂ ಚೆನ್ನಾಗಿರುತ್ತದೆ. ಮತ್ತು ಅದು ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಹಾಗಾಗಿ ನಾವಿಂದು ಬೀದಿ ಬದಿ ಸಿಗುವ ಭೇಲ್‌ಪುರಿ ರೀತಿ ಟೇಸ್ಟಿಯಾಗಿ, ಮನೆಯಲ್ಲೇ ಇದನ್ನು ತಯಾರಿಸುವುದು ಹೇಗೆ ಎಂದು ತಿಳಿಸಲಿದ್ದೇವೆ.
ಮೊದಲು ನಿಮಗೆ ಎಷ್ಟು ಬೇಕೋ ಅಷ್ಟು ಚುರುಮುರಿಯನ್ನು ಕೊಂಚ ಹುರಿದುಕೊಳ್ಳಿ. ಸ್ವಲ್ಪ ಕ್ರಂಚಿಯಾಗಿದ್ದರೆ, ಟೇಸ್ಟ್ ಸಖತ್ ಆಗಿರುತ್ತದೆ. ಇದನ್ನು ದೊಡ್ಡ ಬೌಲ್‌ಗೆ ಹಾಕಿ, ಇದಕ್ಕೆ ಅರ್ಧ ಕಪ್ ಸೇವ್, 10 ಬೇಲ್ ಪುರಿಗೆ ಬಳಸುವ ಪುರಿ, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, 1 ಬೇಯಿಸಿ ಕತ್ತರಿಸಿದ ಬಟಾಟೆ, ಕೊಂಚ ಕೊತ್ತೊಂಬರಿ ಸೊಪ್ಪು, ಚಿಟಿಕೆ ಉಪ್ಪು, ಕಾರದ ಪುಡಿ, ಚಾಟ್ ಮಸಾಲೆ ಪುಡಿ, ಒಂದು ಸ್ಪೂನ್ ನಿಂಬೆ ರಸ, ಒಂದೊಂದು ಸ್ಪೂನ್ ಹುಣೆ ಚಟ್ನಿ ಮತ್ತು ಪುದೀನಾ ಚಟ್ನಿ, ನಿಮಗೆ ಹೆಚ್ಚು ಬೇಕಾದಲ್ಲಿ, ಹೆಚ್ಚು ಚಟ್ನಿ ಬಳಸಿ. ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿದ್ರೆ, ಭೇಲ್ ಪುರಿ ರೆಡಿ.
ಈಗ ಇದನ್ನು ಸರ್ವ್ ಮಾಡುವಾಗ, ಮೇಲಿನಿಂದ ಸೇವ್, ಈರುಳ್ಳಿ, ಟೊಮೆಟೋ, ಕೊತ್ತೊಂಬರಿ ಸೊಪ್ಪನ್ನು ಹಾಕಿ, ಗಾರ್ನಿಷ್ ಮಾಡಿ ಕೊಡಿ.