Recipe: ಮಳೆಗಾಲ ಅಂದ್ರೆ ಸಾಮಾನ್ಯವಾಗಿ ಎಲ್ಲ ಮನೆಯಲ್ಲಿ ಮಾಡುವ ಸ್ನ್ಯಾಕ್ಸ್ ಅಂದ್ರೆ ಬಜ್ಜಿ. ಸಾಮಾನ್ಯವಾಗಿ ಬಜ್ಜಿ ಮಾಡುವಾಗ, ಕಡಲೆ ಹಿಟ್ಟಿನಿಂದ ಬಜ್ಜಿ ತಯಾರಿಸಲಾಗುತ್ತದೆ. ಆದರೆ ಬೇರುಹಲಸಿನ ಬಜ್ಜಿಯನ್ನ ಡಿಫ್ರೆಂಟ್ ಆಗಿ ಮಾಡ್ತಾರೆ. ಹಾಗಾದ್ರೆ ಜೀಗುಜ್ಜೆ ಬಜ್ಜಿ ಮಾಡೋದು ಹೇಗೆ..? ಅದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ..
ಈ ಬಜ್ಜಿ ಮಾಡುವಾಗ ಬೇರುಹಲಸಿನಕಾಯಿಯ ಸಿಪ್ಪೆ ತೆಗೆದು, ಚಿಪ್ಸ್ ಮಾಡುವ ಮಣೆಯಲ್ಲಿ, ಚಿಪ್ಸ್‌ಗೆ ಕತ್ತರಿಸಿದ ಹಾಗೆ ಕತ್ತರಿಸಬೇಕು. ಕತ್ತರಿಸಿದ ಬೇರುಹಲಸನ್ನು ನೀರಿನಲ್ಲಿ ಹಾಕಿಡಿ. ಬಳಿಕ ಕಾಟನ್ ಬಟ್ಟೆಗೆ ಹಾಕಿ ನೀರು ಪೂರ್ತಿ ಹೋದ ಮೇಲೆ ಬಜ್ಜಿ ಹಿಟ್ಟಿಗೆ ಹಾಕಬೇಕು.
ಬಜ್ಜಿ ಹಿಟ್ಟು ಮಾಡಿಕೊಳ್ಳಲು, ಕಾಲು ಕಪ್ ಅಕ್ಕಿಯನ್ನು 3ರಿಂದ 4 ಗಂಟೆ ನೆನೆಸಿಡಬೇಕು. ಇದಕ್ಕೆ ಚಿಕ್ಕ ತುಂಡು ಹುಣಸೆಹಣ್ಣು, 4ರಿಂದ 5 ಒಣಮೆಣಸಿನಕಾಯಿ, ಚಿಟಿಕೆ ಹಿಂಗು, ಅರ್ಧ ಚಮಚ ಜೀರಿಗೆ ಮತ್ತು ಕೊತ್ತೊಂಬರಿ ಕಾಳು, ಚಿಟಿಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈಗ ಬಜ್ಜಿ ಹಿಟ್ಟು ರೆಡಿ. ಇದಕ್ಕೆ ಕತ್ತರಿಸಿಟ್ಟ ಜೀಗುಜ್ಜೆಯನ್ನು ಅದ್ದಿ, ಕಾದ ಎಣ್ಣೆಯಲ್ಲಿ ಕರಿದರೆ, ಬಜ್ಜಿ ರೆಡಿ.
ನೀವು ಆಹಾರದ ವಿಷಯದಲ್ಲಿ ಇಂಥ ತಪ್ಪು ಮಾಡುವುದರಿಂದಲೇ ಸಂತಾನ ಸಮಸ್ಯೆಯಾಗುತ್ತದೆ..