ಬೀಟ್ರೂಟ್ ಬರೀ ತರಕಾರಿಯಲ್ಲ. ಬದಲಾಗಿ ಇದು ಸೌಂದರ್ಯ ಮತ್ತು ಆರೋಗ್ಯ ಇಮ್ಮಡಿಗೊಳಿಸುವ ಔಷಧಿಯಾಗಿದೆ. ಬಿಪಿ, ಶುಗರ್, ಕೂದಲು ಉದುರುವ ಸಮಸ್ಯೆ, ತುಟಿಯ ಅಂದ ಹೆಚ್ಚಿಸುವುದು, ಮುಖದಲ್ಲಿ ಗ್ಲೋ ಬರಲು, ಹೀಗೆ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಬೀಟ್‌ರೂಟ್ ಬಳಸಲಾಗುತ್ತದೆ. ಹಾಗಾದ್ರೆ ಬೀಟ್‌ರೂಟ್ ಬಳಸಿ ಹೇಗೆ ನಾವು ನಮ್ಮ ಆರೋಗ್ಯ ಮತ್ತು ಸೌಂದರ್ಯ ಹೆಚ್ಚಿಸಬಹುದು ಅಂತಾ ತಿಳಿಯೋಣ ಬನ್ನಿ..
ಮುಖದಲ್ಲಿ ಗ್ಲೋ ಬರಲು, ಬಿಪಿ ಶುಗರ್ ಕಡಿಮೆ ಮಾಡಲು, ವಾರದಲ್ಲಿ ಮೂರು ಬಾರಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೀಟ್‌ರೂಟ್ ಜ್ಯೂಸ್ ಕುಡಿಯಿರಿ. ಬೀಟ್‌ರೂಟ್, ಕ್ಯಾರೆಟ್ ಮಿಕ್ಸ್ ಮಾಡಿ, ಜ್ಯೂಸ್ ತಯಾರಿಸಿ ಕುಡಿಯಿರಿ. ಇದರಿಂದ ನಿಮ್ಮ ಮುಖದಲ್ಲಿ ಗ್ಲೋ ಬರುತ್ತದೆ. ಬಿಪಿ-ಶುಗರ್ ಇದ್ದವರಿಗೆ, ರೋಗ ಕಂಟ್ರೋಲಿಗೆ ಬರುತ್ತದೆ. ನಿಮಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೀಟ್‌ರೂಟ್ ಸೇವಿಸಲು ಸಾಧ್ಯವಾಗದಿದ್ದಲ್ಲಿ, ಊಟಕ್ಕೂ ಮುನ್ನ ಬೀಟ್‌ರೂಟ್ ಸಲಾಡ್ ಮಾಡಿ ಸೇವಿಸಿ. ಪಲ್ಯ, ಸಾಂಬಾರ್ ಮಾಡಿ ಸೇವಿಸಿ.
ಬೀಟ್‌ರೂಟ್ ಸಿಪ್ಪೆ ತೆಗೆದು, ನೀರಿನಲ್ಲಿ ತೊಳೆದು, ಆ ನೀರಿನಿಂದ ಮುಖ ತೊಳೆದರೂ, ನಿಮ್ಮ ಮುಖ ಗ್ಲೋ ಆಗುತ್ತದೆ. ಇನ್ನು ನಿಮ್ಮ ತುಟಿ ಕೆಂಪಗೆ, ಚೆಂದವಾಗಿ ಕಾಣಬೇಕು ಅಂದ್ರೆ, ಬೀಟ್‌ರೂಟ್ ರಸದ ಜೊತೆಗೆ ಕೊಂಚ ನಿಂಬೆರಸ ಸೇರಿಸಿ, ತುಟಿ ಮಸಾಜ್ ಮಾಡಿ. ಕೆಲ ಹೊತ್ತಿನ ಬಳಿಕ ತುಟಿ ಕ್ಲೀನ್ ಮಾಡಿ. ಬೀಟ್ರೂಟ್ ರಸ, ಕೆನೆ ಮತ್ತು ರೋಸ್‌ವಾಟರ್ ಸೇರಿಸಿ ಪೇಸ್ಟ್ ತಯಾರಿಸಿ, ತುಟಿಗೆ ಹಚ್ಚಿ, ಅರ್ಧಗಂಟೆ ಬಳಿಕ ತಣ್ಣೀರಿನಿಂದ ಕ್ಲೀನ್ ಮಾಡಿದರೂ, ನಿಮ್ಮ ತುಟಿ ಗುಲಾಬಿಯಾಗುತ್ತದೆ.
ಚಿಕ್ಕ ತುಂಡು ಬೀಟ್ರೂಟ್ ತೆಗೆದುಕೊಂಡು ಅದಕ್ಕೆ ಸಕ್ಕರೆ ಮತ್ತು ಆಲಿವ್ ಎಣ್ಣೆ ಹಚ್ಚಿ, ತುಟಿಗೆ ಕೋಮಲವಾಗಿ ರಬ್ ಮಾಡಿ. ತುಟಿಯನ್ನ ಹೀಗೆ ಸ್ಕ್ರಬ್ ಮಾಡಿ, ಬಳಿಕ ಬೀಟ್ರೂಟ್ ಲಿಪ್‌ಬಾಮ್ ಬಳಸಿ. ನೆನಪಿರಲಿ ಪ್ರತಿದಿನ ಬೀಟ್‌ರೂಟ್ ಸೇವನೆ ಮಾಡಬೇಡಿ. ವಾರದಲ್ಲಿ ಎರಡರಿಂದ ಮೂರು ಬಾರಿ ಬೀಟ್ರೂಟ್ ಸೇವನೆ ಮಾಡಿದರೆ ಸಾಕು. ಏಕೆಂದರೆ, ಪ್ರತಿದಿನ ಬೀಟ್‌ರೂಟ್ ತಿಂದರೂ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಎರಡು ದಿನಕ್ಕೊಮ್ಮೆ ಬೀಟ್‌ರೂಟ್ ಮಿತಿಯಲ್ಲಿ ತಿಂದರೆ ಸಾಕು.