ಹಲವು ರೋಗಗಳು ಹರಡುತ್ತಿರುವ ಈ ಕಾಲದಲ್ಲಿ ಹಲವರು ಸ್ಟ್ರೀಟ್ ಫುಡ್ ತಿನ್ನುವುದನ್ನ ಕಡಿಮೆ ಮಾಡುತ್ತಿದ್ದಾರೆ. ಮನೆಯಲ್ಲೇ ಹಲವು ರೆಸಿಪಿಗಳನ್ನು ಕಲಿತು, ಟ್ರೈ ಮಾಡುತ್ತಿದ್ದಾರೆ. ಹಾಗಾಗಿ ನಾವಿಂದು ಮನೆಯಲ್ಲೇ ರುಚಿಕರ ಕ್ಯಾಬೇಜ್ ವಡೆ ಮಾಡುವುದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ನೇರಳೆ ಹಣ್ಣಿನ ಬೀಜದ ಪುಡಿಯ ಸೇವನೆಯಿಂದಾಗಲಿದೆ ಉತ್ತಮ ಲಾಭ..
ಬೇಕಾಗುವ ಸಾಮಗ್ರಿ: ಒಂದು ಬೌಲ್ ಕಡಲೆ ಹಿಟ್ಟು ಅರ್ಧ ಬೌಲ್ ಅಕ್ಕಿ ಹಿಟ್ಟು, ನಾಲ್ಕು ಸ್ಪೂನ್ ಕಾರ್ನ್ ಫ್ಲೋರ್, ಒಂದು ಕಪ್ ಕ್ಯಾಬೇಜ್, ಚಿಟಿಕೆ ವೋಮ, ಜೀರಿಗೆ, ಹಿಂಗು, 2 ಪುಡಿ ಅಥವಾ ಹಸಿ ಮೆಣಸು, ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಕ್ಯಾನ್ಸರ್ ಬಂದಾಗ ತಲೆ ಕೂದಲು ಉದುರಲು ಕಾರಣವೇನು..?
ಒಂದು ದೊಡ್ಡ ಬೌಲ್‌ಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಸಣ್ಣಗೆ ಕತ್ತರಿಸಿದ ಕ್ಯಾಬೇಜ್, ಹಸಿ ಮೆಣಸು, ವೋಮ, ಜೀರಿಗೆ, ಹಿಂಗು, ಮತ್ತು ಉಪ್ಪು, ನೀರು ಹಾಕಿ, ಬಜ್ಜಿ ಹಿಟ್ಟಿಗಿಂತಲೂ ಕೊಂಚ ಗಟ್ಟಿಯಾಗಿ ಹಿಟ್ಟು ಕಲೆಸಿ. ಮಸಾಲೆ ವಡೆ ಹದಕ್ಕೆ ಹಿಟ್ಟಿರಲಿ. 20 ನಿಮಿಷದ ಬಳಿಕ, ಎಣ್ಣೆ ಕಾಯಿಸಿ, ವಡೆ ಮಾಡಿ ಕರೆಯಿರಿ. ಈ ಕ್ಯಾಬೇಜ್ ವಡೆಯನ್ನು ಟೊಮೆಟೋ ಸಾಸ್, ಚಟ್ನಿ ಜೊತೆ ಸವಿಯಿರಿ.