ಕ್ಯಾನ್ಸರ್‌ನಂಥ ಮಹಾಮಾರಿ ರೋಗ ಮತ್ತೊಂದಿಲ್ಲ ಎನ್ನಬಹುದು. ಕ್ಯಾನ್ಸರ್ ಬಂದಿದ್ದು ಅಷ್ಟು ಸುಲಭವಾಗಿ ಯಾರಿಗೂ ಗೊತ್ತಾಗುವುದಿಲ್ಲ. ಮೊದ ಮೊದಲು ನಿರ್ಲಕ್ಷ್ಯ ಮಾಡಿ, ನಂತರ ಫೈನಲ್ ಸ್ಟೇಜ್‌ಗೆ ಬಂದಾಗ ಚಿಕಿತ್ಸೆಗೆ ಹೋಗುತ್ತಾರೆ. ಅಂಥ ಲಕ್ಷಣಗಳಲ್ಲಿ ಕೂದಲು ಉದುರುವ ಲಕ್ಷಣವೂ ಒಂದು. ಹಾಗಾದ್ರೆ ಕ್ಯಾನ್ಸರ್ ಬಂದಾಗ, ಕೂದಲು ಉದುರುವುದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..
ಕ್ಯಾನ್ಸರ್ ಬಂದಾಗ ಕಿಮೋ ಥೆರಪಿ ಎನ್ನುವ ಚಿಕಿತ್ಸೆ ನೀಡಲಾಗುತ್ತದೆ. ಈ ವೇಳೆ ಅದರ ಶಕ್ತಿ ಎಷ್ಟಿರುತ್ತದೆ ಎಂದರೆ, ದೇಹದಲ್ಲಿರುವ ಕೂದಲೆಲ್ಲ ಉದುರಿ ಹೋಗುವಷ್ಟು ಅದರ ಶಕ್ತಿ ಇರುತ್ತದೆ. ಹಾಗಾಗಿ ಕಿಮೋ ಥೆರಪಿ ಮಾಡುವಾಗ ಕೂದಲೆಲ್ಲ ಉದುರಿ ವಿಕಾರವಾಗಿ ಕಾಣಬಾರದು ಎಂದು, ಕೆಲವರು ತಲೆಗೂದಲನ್ನು ಬೋಳಿಸಿಕೊಳ್ಳುತ್ತಾರೆ.
ಕ್ಯಾನ್ಸರ್ ಇರುವ ಸಮಯದಲ್ಲಿ ಸೇವಿಸುವ ಗುಳಿಗೆ ನಮ್ಮ ಹೊಟ್ಟೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಕೂದಲೆಲ್ಲ ಉದುರಿ ಹೋಗುತ್ತದೆ. ಅಲ್ಲದೇ, ತನಗೆ ಕ್ಯಾನ್ಸರ್ ಇರುವ ಕಾರಣಕ್ಕೆ ಕೆಲವರು ಡಿಪ್ರೆಶನ್‌ಗೆ ಹೋಗುತ್ತಾರೆ. ಈ ಬಗ್ಗೆ ಕೊರಗುತ್ತಾರೆ. ಈ ಕಾರಣಕ್ಕೆ ಮುಖ ಮತ್ತಷ್ಟು ಕಳೆಗುಂದುತ್ತದೆ.
ಸ್ನಾನ ಮಾಡಿ ಊಟ ಮಾಡಬೇಕು ಅಂತಾ ಹೇಳೋದ್ಯಾಕೆ..? ಇದರ ಹಿಂದಿನ ವೈಜ್ಞಾನಿಕ ಸತ್ಯವೇನು..?




