Health tips: ಗರ್ಭಿಣಿಯಾದ ಸಂದರ್ಭದಲ್ಲಿ ಓರ್ವ ಹೆಣ್ಣು ಎಷ್ಟೇ ಆರೋಗ್ಯ ಕಾಳಜಿ ಮಾಡಿದರೂ ಅದು ಕಡಿಮೆಯೇ. ಏಕೆಂದರೆ, ಆ ಸಮಯದಲ್ಲಿ ಆಕೆಯಲ್ಲಿ ಎರಡು ಜೀವವಿರುತ್ತದೆ. ಗರ್ಭಾವಸ್ಥೆಯಲ್ಲಿ ಎಷ್ಟು ಚೆಂದವಾಗಿ ಆಕೆ ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತಾಳೋ, ಅಷ್ಟೇ ಆರೋಗ್ಯವಾಗಿ ಆಕೆ ಮತ್ತು ಆಕೆಯ ಮಗುವಿನ ಭವಿಷ್ಯವಿರುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವುದು ಮುಖ್ಯವಾಗಿದೆ. ಇದಕ್ಕೆ ಕಾರಣ ಕೊರೋನಾ. ಈ ಮಹಾಮಾರಿ ಬಂದಾಗಿನಿಂದ, ಜನ ಮಾಸ್ಕ್ ಧರಿಸಿ ಓಡಾಡುವ ಪರಿಸ್ಥಿತಿ ಇದೆ.
ಇದೀಗ ಮತ್ತೆ ಕೊರೋನಾ ಬರುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ. ಅದರಲ್ಲೂ 60 ವರ್ಷ ಮೇಲ್ಪಟ್ಟವರು. ಗರ್ಭಿಣಿಯರು, ಬಾಣಂತಿಯರು, ಜ್ವರ ಬಂದವರು, ಉಸಿರಾಟದ ಸಮಸ್ಯೆ ಇರುವ ಎಲ್ಲರೂ ಮಾಸ್ಕ್ ಧರಿಸಲೇಬೇಕು ಎಂಬ ನಿಯಮವಿದೆ. ಹಾಗಾಗಿ ಗರ್ಭಿಣಿ ಕೂಡ ಮಾಸ್ಕ್ ಧರಿಸಲೇಬೇಕು. ಹಾಗಾದ್ರೆ ಗರ್ಭಿಣಿಯರು ಮಾಸ್ಕ್ ಧರಿಸಬಹುದಾ..? ಇದರಿಂದ ಆಕೆಯ ಮತ್ತು ಮಗುವಿನ ಆರೋಗ್ಯಕ್ಕೆ ಏನಾದರೂ ಸಮಸ್ಯೆ ಇದೆಯಾ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಡಾ.ಆಂಜೀನಪ್ಪಾ ಅವರು ಈ ಬಗ್ಗೆ ವಿವರಿಸಿದ್ದು, ಗರ್ಭಿಣಿಯರು ಆರಾಮವಾಗಿ ಮಾಸ್ಕ್ ಧರಿಸಬಹುದು. ಇದರಿಂದ ಅವರ ಆರೋಗ್ಯಕ್ಕೇನು ನಷ್ಟವಿಲ್ಲ. ಮಾಸ್ಕ್ ಹಾಕುವುದರಿಂದ ಆಕ್ಸಿಜನ್ ಕಡಿಮೆಯಾಗುತ್ತದೆ. ಮಗುವಿಗೆ ತೊಂದರೆಯಾಗುತ್ತದೆ ಅನ್ನೋದು ತಪ್ಪು ಕಲ್ಪನೆ. ಏಕೆಂದರೆ ಮಾಸ್ಕ್ ಹಾಕುವ ಉದ್ದೇಶವೇನೆಂದರೆ, ವೈರಲ್ ನಿಮ್ಮ ದೇಹ ಸೇರಬಾರದು. ಬೇರೆಯವರಿಗೆ ಇರುವ ಶೀತ, ನೆಗಡಿ, ಕೆಮ್ಮು ನಿಮಗೆ ಬಂದು, ಅದರಿಂದ ನಿಮಗೆ ನಿಮ್ಮ ಮಗುವಿಗೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಮಾಸ್ಕ್ ಧರಿಸಬೇಕು.
ಇನ್ನು ಮಾಸ್ಕ್ ಧರಿಸುವಾಗ, ಅದನ್ನು ಚೆನ್ನಾಗಿ ತೊಳೆದು, ಒಣಗಿಸಿ, ಸ್ವಚ್ಛವಾಗಿ ಬಳಸಬೇಕು. ಸಾಧ್ಯವಾದರೆ ಐರನ್ ಮಾಡಿ ಮಾಸ್ಕ್ ಬಳಸಬೇಕು. ಏಕೆಂದರೆ, ಕೊಳಕಾದ ಮಾಸ್ಕ್ ಧರಿಸಿ, ಕೆಲವರಿಗೆ ಆರೋಗ್ಯ ಸಮಸ್ಯೆ ಬಂದಿದ್ದು ಇದೆ. ಹಾಗಾಗಿ ಬಳಸುವ ಮಾಸ್ಕ್ ಸ್ವಚ್ಛವಾಗಿ, ಒಣಗಿರಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..