Sunday, June 1, 2025

Latest Posts

ಊಟ ಮಾಡುವಾಗ ನೀರು ಕುಡಿಯಬಹುದಾ..? ಇಲ್ಲವಾ..?

- Advertisement -

ಊಟ ಮಾಡುವಾಗ ನೀರು ಕುಡಿದರೆ ಆರೋಗ್ಯಕ್ಕೆ ಉತ್ತಮವಲ್ಲ ಅಂತಾ ಹೇಳಲಾಗತ್ತೆ. ಊಟ ಮುಗಿದು ಒಂದು ಗಂಟೆ ಬಳಿಕ ನೀರು ಕುಡಿದರೆ, ನಾವು ಆರೋಗ್ಯವಂತರಾಗಿರ್ತೇವೆ ಎಂದು ಹೇಳಲಾಗಿದೆ. ಆದ್ರೆ ಕಲವರಿಗೆ ಊಟ ಮಾಡುವಾಗಲೇ ಮಧ್ಯ ಮಧ್ಯ ನೀರು ಕುಡಿಯಲೇಬೇಕು. ಇಲ್ಲದಿದ್ದರೆ, ಸರಿಯಾಗಿ ಊಟ ಮಾಡಲಾಗುವುದಿಲ್ಲ. ಹಾಗಾದ್ರೆ ನಾವು ಊಟದ ಮಧ್ಯೆ ನೀರು ಕುಡಿಯಬಹುದಾ..? ಯಾವ ಸಮಯದಲ್ಲಿ ಕುಡಿಯಬಹುದು..? ಈ ಎಲ್ಲದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..

ಗಂಟಲ ಕಿರಿ ಕಿರಿಯನ್ನು ಹೋಗಲಾಡಿಸುವುದು ಹೇಗೆ..?

ಆಯುರ್ವೇದದ ಪ್ರಕಾರ, ಊಟಕ್ಕೂ 40 ನಿಮಿಷ ಮುಂಚೆ, ಮತ್ತು ಊಟವಾದ ಒಂದು ಗಂಟೆ ಬಳಿಕ ನೀರು ಕುಡಿಯಬೇಕು. ಅದರಲ್ಲೂ ಕುಳಿತುಕೊಂಡೇ ನೀರು ಕುಡಿಯಬೇಕು. ನಿಂತು ನೀರು ಕುಡಿದಲ್ಲಿ, ವೃದ್ಧಾಪ್ಯದಲ್ಲಿ ಸಂಧಿವಾತ ಶುರುವಾಗುತ್ತದೆ. ಇನ್ನು ಬೆಳಿಗ್ಗೆ ಏಳುತ್ತಿದ್ದಂತೆ ಬಾಯಿ ಮುಕ್ಕಳಿಸದೇ, 2 ರಿಂದ 3 ಲೋಟ ನೀರನ್ನು ಗುಟಕರಿಸುತ್ತ ಕುಡಿಯಬೇಕು. ಸುಮಾರು ಹದಿನೈದು ನಿಮಿಷವಾದ್ರೂ ತೆಗೆದುಕೊಂಡು ನೀವು ನೀರು ಕುಡಿಯಬೇಕು. ಇದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಊಟದ ಮಧ್ಯದಲ್ಲಿ ಯಾರು ನೀರು ಕುಡಿಯಬಹುದು ಅಂದ್ರೆ, ಯಾರಿಗೆ ಊಟ ಮಾಡುವಾಗ, ಅನ್ನ ಗಂಟಲಲ್ಲಿ ಸಿಕ್ಕು ಹಾಕಿಕೊಂಡಿರತ್ತೋ. ಅಥವಾ ಕೆಮ್ಮು ಶುರುವಾದವರು ಒಂದೆರಡು ಗುಟುಕು ನೀರು ಕುಡಿಯಬಹುದು. ಅದನ್ನು ಬಿಟ್ಟು ಒಂದೆರಡು ಗ್ಲಾಸ್ ನೀರು ಕುಡಿಯುವಂತಿಲ್ಲ. ಒಂದೆರಡು ಗುಟುಕಷ್ಟೇ ನೀರು ಕುಡಿಯಬಹುದು. ಅಲ್ಲದೇ ನೀವು ರೊಟ್ಟಿ ಅಥವಾ ಚಪಾತಿಯೊಂದಿಗೆ ಅನ್ನ ತಿನ್ನುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಆಗ ಬೇಕಾದರೂ ನೀವು ಮಧ್ಯದಲ್ಲಿ ಒಮ್ಮೆ ಕೊಂಚ ನೀರು ಕುಡಿಯಬಹುದು.

ಕಿಡ್ನಿ ಸ್ಟೋನ್ ಆಗಬಾರದೆಂದರೆ ಏನು ಮಾಡಬೇಕು..?

ಅಂದ್ರೆ ಮೊದಲು ಚಪಾತಿ ತಿಂದು ನೀರು ಕುಡಿದು ನಂತರ ಅನ್ನ ತಿನ್ನಬೇಕು. ಇದನ್ನು ಆಯುರ್ವೇದದಲ್ಲಿ ಎರಡನ್ನದ ಊಟ ಎಂದು ಕರೆಯಲಾಗತ್ತೆ. ಹೀಗೆ ಎರಡು ಧಾನ್ಯಗಳ ಆಹಾರ ಸೇವಿಸುವಾಗ ಮಧ್ಯದಲವ್ಲಿ ಕೊಂಚ ನೀರು ಕುಡಿಯುವುದು ಅನಿವಾರ್ಯವಾಗಿದೆ. ಆದ್ರೆ ನೀವು ಈ ಎರಡು ಆಹಾರ ಸೇವನೆ ಮಧ್ಯೆ ನೀರು ಕುಡಿಯದಿದ್ದಲ್ಲಿ ಯಾವುದೇ ನಷ್ಟವಾಗುವುದಿಲ್ಲ. ಆದ್ರೆ ನೀರು ಕುಡಿದರೆ ನಿಮ್ಮ ಜೀರ್ಣಕ್ರಿಯೆ ಅತ್ಯುತ್ತಮವಾಗಿರುತ್ತದೆ.

- Advertisement -

Latest Posts

Don't Miss