Friday, December 5, 2025

ರಾಜ್ಯ

ಸರ್ಕಾರಿ ನೌಕರರಿಗೆ 4ನೇ ಶನಿವಾರ ರಜೆ ಘೋಷಣೆಗೆ ಶಿಫಾರಸು

ಬೆಂಗಳೂರು: ಪ್ರತಿ ತಿಂಗಳ 4ನೇ ಶನಿವಾರವನ್ನು ಸರ್ಕಾರಿ ರಜೆ ಅಂತ ಘೋಷಿಸೋದಕ್ಕೆ ಸಚಿವ ಸಂಪುಟ ಉಪ ಸಮಿತಿಯು ಸಚಿವ ಸಂಪುಟಕ್ಕೆ ಶಿಫಾರಸು ಮಾಡಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ನೇತೃತ್ವದ ಸಚಿವ ಸಂಪುಟ ಸಮಿತಿ ಶಿಫಾರಸು ಮಾಡಿದ್ದು, ಸರ್ಕಾರಿ ನೌಕರರ ಕೆಲಸದ ದಿನಗಳು ಮತ್ತು ರಜಾ ದಿನಗಳನ್ನ ಪರಿಷ್ಕರಿಸುವಂತೆ 6ನೇ ವೇತನ ಆಯೋಗ ಮಾಡಿದ್ದ ಶಿಫಾರಸಿನ...

‘ಸುಮಲತಾರನ್ನು ದೇವೇಗೌಡ್ರಿಗೆ ಹೋಲಿಸೋಕ್ಕಾಗುತ್ತಾ?’- ಶಾಸಕ ಅನ್ನದಾನಿ ಲೇವಡಿ

ಮಂಡ್ಯ: ದೇವೇಗೌಡ ಅಂದರೆ ದೇಶದ ದೊಡ್ಡ ಶಕ್ತಿ. ಅಂತಹವರನ್ನ ಸುಮಲತಾಗೆ ಯಾವ ವಿಷಯದಲ್ಲೂ ಹೋಲಿಸಲು ಆಗಲ್ಲ ಅಂತ ಸಂಸದೆ ಸುಮಲತಾ ಅಂಬರೀಶ್ ರನ್ನ ಮಳವಳ್ಳಿ ಶಾಸಕ ಅನ್ನದಾನಿ ಜರಿದಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಅನ್ನದಾನಿ, ಕಾವೇರಿ ನೀರು ಹಂಚಿಕೆ ವಿಚಾರವಾಗಿ ದೇವೇಗೌಡರು ಹೋರಾಟಕ್ಕೆ ಶಕ್ತಿ ತುಂಬಿದ್ದರು. ದೇವೇಗೌಡ್ರು ಅಂದ್ರೇನೇ ದೇಶದ ಒಂದು ದೊಡ್ಡ ಶಕ್ತಿ. ಅವರು...

ನಾಳೆ ಮಂಡ್ಯದಲ್ಲಿ ದಚ್ಚು,ಯಶ್ ಕಮಾಲ್-ಸಂಸದೆ ಸುಮಲತಾ ಭರ್ಜರಿ ವಿಜಯೋತ್ಸವ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರೋ ಸಂಸದೆ ಸುಮಲತಾ ನಾಳೆ ಮಂಡ್ಯದ ಜನತೆಗೆ ಅಭಿನಂದನೆ ಹೇಳೋ ಸಲುವಾಗಿ ಸ್ವಾಭಿಮಾನಿ ವಿಜಯೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಚುನಾವಣೆ ಮುಗಿದ ಬಳಿಕ ಮಂಡ್ಯದತ್ತ ಸುಳಿಯದ ಸಂಸದೆ ಸುಮಲತಾ ನಾಳೆ ವಿಜಯೋತ್ಸವ ಆಚರಿಸೋ ಸಲುವಾಗಿ ತಮ್ಮ ಕ್ಷೇತ್ರ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಮಂಡ್ಯ ನಗರದಲ್ಲಿರೋ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ವಿಜಯೋತ್ಸವಕ್ಕಾಗಿ ಭರ್ಜರಿ ವೇದಿಕೆ ಸಿದ್ದವಾಗ್ತಿದೆ....

SKDRDPಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೇಲ್ವಿಚಾರಕ ಹುದ್ದೆ, ನಗದು ಸಹಾಯಕ ಮತ್ತು ಕಚೇರಿ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಸ್ವಸಹಾಯ ಸಂಘದ ಮೂಲಕ ತನ್ನ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. 101 ಮೇಲ್ವಚಾರಕ ಹುದ್ದೆ, 251 ನಗದು ಸಹಾಯಕ ಹುದ್ದೆ ಮತ್ತು...

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಆದೇಶ

ದೆಹಲಿ: ಜೂನ್ ತಿಂಗಳಲ್ಲಿ ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಈ ಕುರಿತು ದೆಹಲಿಯಲ್ಲಿ ಉಭಯ ರಾಜ್ಯಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ ಪ್ರಾಧಿಕಾರ, ರಾಜ್ಯದ ಜಲಾಶಯದಲ್ಲಿ  ಒಳಹರಿವು ಹೆಚ್ಚಾದರೆ ಜೂನ್ ತಿಂಗಳಲ್ಲಿ ತಮಿಳುನಾಡಿಗೆ 9.19ಟಿಎಂಸಿ ನೀರು ಬಿಡುವಂತೆ ಆದೇಶಿಸಿದೆ. ಈ ಮೂಲಕ ರಾಜ್ಯಕ್ಕೆ ಸದ್ಯದ ಮಟ್ಟಿಗೆ...

ಖಾಕಿಗೆ ಗುಡ್ ಬೈ ಹೇಳಿದ ರಿಯಲ್ ಸಿಂಗಂ- ಅಣ್ಣಾಮಲೈ ರಾಜೀನಾಮೆಗೆ ಕಾರಣವೇನು…?

ಬೆಂಗಳೂರು: ರಾಜ್ಯದಲ್ಲಿ ಅದೆಷ್ಟೋ ಪೊಲೀಸ್ ಅಧಿಕಾರಿಗಳು ಪುಂಡರ ಹುಟ್ಟಡಗಿಸಿ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅಂಥವರಲ್ಲಿ ಎಚ್.ಟಿ ಸಾಂಗ್ಲಿಯಾನ ಸೇರಿದಂತೆ ಸಾಕಷ್ಟು ಮಂದಿ ಕ್ರಿಮಿನಲ್ ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಇವರ ಸಾಲಿನಲ್ಲಿ ಕರ್ನಾಟಕದ ರಿಯಲ್ ಸಿಂಗಂ ಅಂತಾನೇ ಕರೆಸಿಕೊಳ್ಳೋ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೂಡ ಒಬ್ಬರು. ಆದ್ರೆ  ಇಂಥಾ ಒಬ್ಬ ದಕ್ಷ ಅಧಿಕಾರಿ...

ಹೆಚ್ಚಾಗ್ತಿದೆ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ- ಈಗ ಶುರು ದೋಸ್ತಿಗಳಿಗೆ ತಲೆನೋವು..!

ಕಲಬುರಗಿ: ಅತೃಪ್ತರ ಶಾಸಕರನ್ನ ಸಮಾಧಾನ ಮಾಡೋಕೆ ದೋಸ್ತಿಗಳೇನೋ ಅವರಿಗೆ ಸಚಿವ ಸ್ಥಾನದ ಆಫರ್ ನೀಡೋ ಯೋಜನೆಯಲ್ಲಿದ್ದಾರೆ. ಆದ್ರೆ ಈ ಮಧ್ಯೆ ಇತರೆ ಶಾಸಕರೂ ಕೂಡ ನನಗೂ ಮಂತ್ರಿಯಾಗೋ ಆಸೆ ಇದೆ ಅನ್ನೋದಕ್ಕೆ ಶುರು ಮಾಡಿದ್ದಾರೆ. ಇದೀಗ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಸಚಿವರಾಗೋ ಇಂಗಿತ ವ್ಯಕ್ತಪಡಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್,...

ಕುಮಾರಸ್ವಾಮಿಗೆ ಸಿದ್ದು 5 ಸೂತ್ರ- ಇನ್ಮುಂದೆ ಬದಲಾಗ್ತಾರಂತೆ ಸಿಎಂ…!

ಬೆಂಗಳೂರು:  ದೋಸ್ತಿ ಸರ್ಕಾರ ಉಳಿಸಿಕೊಳ್ಳೋದಕ್ಕೆ ಮೈತ್ರಿ ನಾಯಕರು ರಾಜಕೀಯ ರಣತಂತ್ರದ ಮೊರೆ ಹೋಗ್ತಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ಸಿಎಂ ಕುಮಾರಸ್ವಾಮಿಗೆ ಕೆಲ ಸಲಹೆ ನೀಡೋ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳೋ ಪ್ರಯತ್ನ ಮಾಡ್ತಿದ್ದಾರೆ. ಕಾಂಗ್ರೆಸ್ ಶಾಸಕರು ಮೈತ್ರಿ ವಿಚಾರವಾಗಿ ಅಷ್ಟೇನು ವಿರೋಧ ಮಾಡದಿದ್ರೂ ಕೆಲ ವಿಚಾರಗಳಿಂದಾಗಿ ಸಿಎಂ ಕುಮಾರಸ್ವಾಮಿ ಮತ್ತು ಜೆಡಿಎಸ್ ಮೇಲೆ ಮುನಿಸಿಕೊಂಡಿದ್ದಾರೆ.  ಹೀಗಾಗಿ ಎಲ್ಲಾ ಶಾಸಕರನ್ನು...

ಕಡೆಗೂ ಶಾಸಕ ಕುಮಟಳ್ಳಿ ಮನವೊಲಿಸಿದ ಸಿಎಂ- ಸಾಹುಕಾರ್ ಗೆ ಭರ್ಜರಿ ಆಫರ್..!?

ಬೆಂಗಳೂರು: ಅತೃಪ್ತ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಜೊತೆ ಗುರುತಿಸಿಕೊಂಡಿದ್ದ ಮಹೇಶ್ ಕುಮಟಳ್ಳಿ ಮನವೊಲಿಲು ಸಿಎಂ ಕುಮಾರಸ್ವಾಮಿ ಸಫಲರಾಗಿದ್ದಾರೆ. ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಜೊತೆ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಿದ್ರು. ಸುಮಾರು ಒಂದೂವರೆ ಗಂಟೆ ಕಾಲ ಚರ್ಚೆ ನಡೆಸಿದ ಕುಮಾರಸ್ವಾಮಿ ಕೊನೆಗೂ ಮಹೇಶ್ ಕುಮಟಳ್ಳಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಸಂಪುಟದಿಂದ ಕೈಬಿಟ್ಟ...

ಆನೆ ಕಂಡು 1 ಕಿ.ಮೀ ರಿವರ್ಸ್ ಗೇರ್ ನಲ್ಲಿ ಚಲಿಸಿದ ಸರ್ಕಾರಿ ಬಸ್…!

ಚಿಕ್ಕಮಗಳೂರು: ಆನೆ ಪ್ರತ್ಯಕ್ಷವಾಗಿದ್ದನ್ನು ಕಂಡು ಸರ್ಕಾರಿ ಬಸ್ ಸುಮಾರು 1 ಕಿಲೋ ಮೀಟರ್ ವರೆಗೂ ಹಿಮ್ಮುವಾಗಿ ಚಲಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಶಾಂತವೇರಿ ಗ್ರಾಮದಲ್ಲಿ ಒಂಟಿ ಸಲಗ ಪದೇ ಪದೇ ಇಲ್ಲಿನ ನಿವಾಸಿಗಳು ಮತ್ತು ಪ್ರಯಾಣಿಕರಿಗೆ ಉಪಟಳ ನೀಡುತ್ತಿದೆ. ಕಳೆದೆರಡು ದಿನಗಳ ಹಿಂದೆ ಕಿರಿದಾದ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದನ್ನು ಕಂಡು ಹೌಹಾರಿದ...
- Advertisement -spot_img

Latest News

ಅಂದು ಭಗವದ್ಗೀತೆ ನಿಷೇಧಿಸಿದ್ದ ರಷ್ಯಾ – ಇಂದು ಅದನ್ನೇ ಗೌರವಿಸಿದ ಪುಟಿನ್!

ಕಾಲ ಬದಲಾಗುತ್ತಾ ಹೋಗುತ್ತಲೆ, ಸಂಬಂಧಗಳ ಸಮೀಕರಣವೂ ಹೇಗೆ ತಲೆಕೆಳಗಾಗುತ್ತದೆ ಎಂಬುದಕ್ಕೆ ಭಾರತ–ರಷ್ಯಾ ಸಂಬಂಧಗಳು ಹೊಸ ಉದಾಹರಣೆ. ಯಾವಾಗಲೊ ರಷ್ಯಾ ಭಗವದ್ಗೀತೆಯನ್ನು “ಉಗ್ರಗಾಮಿ ಸಾಹಿತ್ಯ” ಎಂದು ಲೇಬಲ್...
- Advertisement -spot_img