ದೀಪಾವಳಿ ಕೊಡುಗೆ ನೆಪದಲ್ಲಿ ಬೆಂಗಳೂರು ಜನರಿಗೆ, ಕಾಂಗ್ರೆಸ್ ಮಹಾ ದೋಖಾ ಮಾಡ್ತಿದೆ. ನೀವು ಹಬ್ಬವನ್ನು ಸಂತೋಷದಿಂದ ಆಚರಿಸಿ. ಕಾಂಗ್ರೆಸ್ ಲೂಟಿಯ ವಿರುದ್ಧ ಹೋರಾಡುತ್ತೇವೆ. ಹೀಗಂತ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ ಬಿ ಖಾತಾದಿಂದ ಎ ಖಾತಾ ಮಾಡಲು 5% ತೆರಿಗೆಯಿಂದ ಮಧ್ಯಮ ವರ್ಗವನ್ನು ಸುಟ್ಟು ಹಾಕುತ್ತಿದೆ....
ಪತಿ ಮನೆಯವರ ಕಿರುಕುಳದಿಂದ ಬೇಸತ್ತ ಉಪನ್ಯಾಸಕಿ, ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ವಿಶ್ವೇಶ್ವರಯ್ಯ ಪಿಕಪ್ ಡ್ಯಾಮ್‌ನಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಪುಷ್ಪಾವತಿ ಉಪನ್ಯಾಸಕಿಯಾಗಿದ್ರು. 11 ತಿಂಗಳ ಹಿಂದಷ್ಟೇ, ತಪಸ್ಸಿಹಳ್ಳಿಯ ವೇಣು ಜತೆ ಮದುವೆಯಾಗಿತ್ತು.
ಮದುವೆ ನಂತರ ಪತಿ ಮನೆಯಲ್ಲಿ ಪುಷ್ಪಾವತಿಗೆ ನಿರಂತರವಾಗಿ, ವರದಕ್ಷಿಣೆ, ಕಿರುಕುಳ ನೀಡಲಾಗುತ್ತಿತ್ತಂತೆ. ನಿವೇಶನ ಕೊಡಿಸುವಂತೆ ಪೀಡಿಸುತ್ತಿದ್ದರಂತೆ....
ತುಮಕೂರು ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗ್ತಿದ್ದು, ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ತಿಪಟೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು, ಮಳೆ ನೀರಿನಿಂದ ಆವೃತವಾಗಿದೆ. ಮೇಲ್ಸೇತುವೆ ಕೆಳಗಿನ ಅಂಡರ್‌ಪಾಸ್, ರಸ್ತೆಗಳಲ್ಲಿ ನೀರು ನಿಂತಿದ್ದು, ಕೆರೆಯಂತೆ ಭಾಸವಾಗ್ತಿದೆ.
ಅಕ್ಕಪಕ್ಕದ ಜಮೀನುಗಳಿಗೂ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದೆ. ಹೆದ್ದಾರಿಯಲ್ಲಿ ವಾಹನ ಸಂಚಾರ ಭಾರೀ ಕಷ್ಟವಾಗಿದ್ದು, ಅಕ್ಕಪಕ್ಕದ ಗ್ರಾಮಗಳ ಪ್ರಯಾಣಿಕರು ಪರದಾಡುವಂತಾಗಿದೆ.
ಪ್ರಖ್ಯಾತ ಹಾಸನಾಂಬ ಉತ್ಸವ ಆರಂಭವಾಗಿ 11 ದಿನಕ್ಕೆ ಕಾಲಿಟ್ಟರೂ, ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನು, ಕೇವಲ 2 ದಿನ ಮಾತ್ರ ಹಾಸನಾಂಬ ದರ್ಶನ ಸಿಗಲಿದೆ. ಈಗ ಬಿಟ್ರೆ ಮುಂದಿನ ವರ್ಷದವರೆಗೂ ಕಾಯಲೇಬೇಕು. ಹೀಗಾಗಿ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದು, ಪ್ರತಿ ದಿನ ಭಕ್ತರ ಸಂಖ್ಯೆ ಎರಡ್ಮೂರು ಲಕ್ಷ ದಾಟುತ್ತಿದೆ.
ಇಂದು ಕೂಡ ಮುಂಜಾನೆ 5 ಗಂಟೆಯಿಂದಲೇ...
ಯಾದಗಿರಿ ಗುರುಮಠಕಲ್ ಪಟ್ಟಣದ ಹೊರವಲಯದಲ್ಲಿರುವ ನರೆಂದ್ರ ರಾಠೋಡ ಕುಟುಂಬದ ಶ್ರೀ ಲಕ್ಷ್ಮೀ ತಿಮ್ಮಪ್ಪ ಕಾಟನ್ ಮತ್ತು ಜಿನ್ನಿಂಗ್ ಮಿಲ್ ಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿ, ಜೋಳ ಹಾಗೂ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿ ಪ್ಯಾಕೆಟ್‌ಗಳು ಅಕ್ರಮವಾಗಿ ಸಂಗ್ರಹಿಸಲ್ಪಟ್ಟಿರುವುದು ಪತ್ತೆಯಾಗಿದೆ. ಈ ಹಿಂದೆ ಯಾದಗಿರಿಯಿಂದ ಅಮೆರಿಕಾಗೆ ಅಕ್ರಮ ಅಕ್ಕಿ...
ನಗರದ ವಿವಿಧೆಡೆ ಸರಣಿ ಕಳವು ಪ್ರಕರಣಗಳು ವರದಿಯಾಗಿವೆ. ದಿವಾನ್ಸ್ ರಸ್ತೆಯ ಮೆಡಿಕಲ್ ಸ್ಟೋರ್‌ಗಳಲ್ಲಿ ಕಳ್ಳರು ಸರಣಿ ದಾಳಿ ನಡೆಸಿ, ₹9 ಲಕ್ಷ ಮೌಲ್ಯದ ಚಿನ್ನದ ಬಿಸ್ಕೆಟ್, ನಾಣ್ಯಗಳು ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.
ದಾಸೇಗೌಡ ಅವರ ಗೌಡ್ರು ವೆಟರ್ನರಿ ಮತ್ತು ಪೆಟ್ ಮೆಡಿಕಲ್ಸ್ ಹಾಗೂ ಶ್ರೀನಿವಾಸ ಮೆಡಿಕಲ್ಸ್ ಅಂಗಡಿಗಳಲ್ಲಿ ಈ ಕಳವು ನಡೆದಿದ್ದು, ಗೌಡ್ರು ಮೆಡಿಕಲ್ಸ್‌ನಿಂದ...
ಆನ್‌ಲೈನ್ ಫುಡ್ ಡೆಲಿವರಿ ಹಾಗೂ ಇ-ಕಾಮರ್ಸ್ ಸೇವೆಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ವಿಗ್ಗಿ, ಫ್ಲಿಪ್‌ಕಾರ್ಟ್, ಜೊಮ್ಯಾಟೋ, ಜೆಪ್ಟೋ ಸೇರಿದಂತೆ ಹೆಸರಾಂತ ಇ ಕಾಮರ್ಸ್ ಅಪ್ಲಿಕೇಶನ್ ಮೂಲಕ ಹೆಚ್ಚಿನವರು ಫುಡ್ ಸೇರಿದಂತೆ ಪ್ರಾಡಕ್ಟ್‌ಗಳನ್ನು ಖರೀದಿ ಮಾಡ್ತಾರೆ. ಈ ಪೈಕಿ ಗ್ರಾಹಕರ ಮನೆಬಾಗಿಲಿಗೆ ತಲುಪುವ ಆರ್ಡರ್‌ಗಳ ಹಿಂದೆ ಅಡಗಿರುವ ಮಹತ್ವದ ಶ್ರಮ ಇರೋದೇ ಡೆಲಿವರಿ ಬಾಯ್‌ಗಳದ್ದು.
ಇತ್ತೀಚೆಗೆ,...
ನವೆಂಬರ್ 19ರಿಂದ 3 ದಿನಗಳ ಕಾಲ ತಿಪಟೂರಿನಲ್ಲಿ ಕಲ್ಪೋತ್ಸವ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಬೆಳಗ್ಗೆಯಿಂದ ಸಂಜೆಯವರಿಗೆ ಶಾಲಾ ಮಕ್ಕಳಿಗೆ, ಹಿರಿಯ ನಾಗರೀಕರಿಗೆ, ಮಹಿಳೆಯರಿಗೆ, ನೌಕರರಿಗಾಗಿ ಹಲವು ಸ್ಪರ್ಧೆಗಳು, ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ಎರಡು ದಿನಗಳ ಕಾಲ ಹೆಲಿಕ್ಯಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿಯ ಕಲ್ಪತರು ರತ್ನ ಪ್ರಶಸ್ತಿಯನ್ನು, ಹಿರಿಯ ನಟಿ, ಮಾಜಿ...
Tumakuru News: ಚಿಕ್ಕನಾಯಕನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಮುದ್ದೇನಹಳ್ಳಿ ಪೋಸ್‌ಟ್ ಮುನಿಯಮ್ಮನ ಪಾಳ್ಯ ಗ್ರಾಮದಲ್ಲಿ 2 ಕಳ್ಳತನ ಪ್ರಕರಣಗಳು ವರದಿಯಾಗಿದೆ.
ಗ್ರಾಮದಲ್ಲಿರುವ ಶ್ರೀ ಮುನಿಯಮ್ಮದೇವಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ದೇವಾಲಯದ ಹುಂಡಿ ಒಡೆದು ಹಣ ಹಾಗೂ ಪೂಜಾ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಶ್ರೀ ಮುನಿಯಮ್ಮದೇವಿ ಸೇವಾ ಚಾರಿಟಬಲ್ಸ್ ಟ್ರಸ್ಟ್...
Turuvekere News: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಶತಮಾನೋತ್ಸವದ ಸಂಭ್ರಮ ಜೋರಾಗಿದೆ. ನೂರು ವರ್ಷ ಪೂರೈಕೆ ಹಿನ್ನೆಲೆ ತುರುವೇಕೆರೆಯಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಗಣವೇಷಧಾರಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು. ನಗರದ ಉಡಸಲಮ್ಮ ದೇವಸ್ಥಾನದ ಮುಂಭಾಗದಿಂದ ಪ್ರಾರಂಭವಾದ ಪಥಸಂಚಲನವು ಸಂತೆಬೀದಿ, ಮತ್ತು ತುರುವೇಕೆರೆ ನಗರದ ಆನೇಕ ಬೀದಿಗಳಲ್ಲಿ ಪಥಸಂಚಲನ ನಡೆಯಿತು.
ಯುವಕರು, ಹಿರಿಯರು, ಚಿಕ್ಕ ಮಕ್ಕಳು...