ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಅಧ್ಯಕ್ಷರನ್ನು ನೇಮಿಸಲು ಬಿಜೆಪಿ ವರಿಷ್ಠರಿಗೆ ಮಹೂರ್ತವೇ ಕೂಡಿ ಬರುತ್ತಿಲ್ಲ. ಒಂದಲ್ಲ ಒಂದು ಕಾರಣಕ್ಕಾಗಿ, ಮುಂದೆ, ಮುಂದಕ್ಕೆ ಹೋಗುತ್ತಲೇ ಇದೆ. ಉಪರಾಷ್ಟ್ರಪತಿ ಚುನಾವಣೆ ಆಯ್ತು. ಈಗ, ಬಿಹಾರ ವಿಧಾನಸಭಾ ಚುನಾವಣೆಯ ಸರದಿ. ಹಾಗಾಗಿ, ನವೆಂಬರ್ 14ರ ನಂತರ, ಇದಕ್ಕೆ ಪರಿಹಾರ ಸಿಗಬಹುದು ಎನ್ನುವ ಆಶಾವಾದವೇ, ಸದ್ಯ ರಾಜ್ಯ ಬಿಜೆಪಿಯಲ್ಲಿ...
ಬೆಂಗಳೂರಿಗರ ಜೀವನಾಡಿ ನಮ್ಮ ಮೆಟ್ರೋ ದರ ಏರಿಕೆಯ ವಿವಾದ ಇನ್ನೂ ತಣ್ಣಗಾಗಿಲ್ಲ. ಸಂಸದ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಮಧ್ಯೆ ಘರ್ಷಣೆ ಮುಂದುವರೆದಿದೆ. bmrcl ವಿರುದ್ಧ ತೇಜಸ್ವಿ ಸೂರ್ಯ ಟೀಕೆಗಳನ್ನು ಮುಂದುವರಿಸಿದ್ದಾರೆ. ದರ ಏರಿಕೆಯ ಹಿನ್ನೆಲೆ ಫೇರ್ ಫಿಕ್ಸೇಷನ್ ಕಮಿಟಿ ವರದಿಯನ್ನು ಬಿಡುಗಡೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಮೆಟ್ರೋ ದರ...
ಕಾಂಗ್ರೆಸ್ಸಿನ ಹಿರಿಯ ಶಾಸಕ, ಮಾಜಿ ಸಚಿವ ಹೆಚ್.ವೈ. ಮೇಟಿ, ತಮ್ಮ ಬದುಕಿನ ಪಯಣ ಮುಗಿಸಿದ್ದಾರೆ. 1946 ಅಕ್ಟೋಬರ್ 9ರಂದು ಹುಲ್ಲಪ್ಪ ಯಮನಪ್ಪ ಮೇಟಿ ಜನಿಸಿದ್ರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರು ಮತ್ತು 14ನೇ ಕರ್ನಾಟಕ ವಿಧಾನಸಭೆಯ ಸದಸ್ಯರು ಮತ್ತು ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರು.
1989ರಿಂದ 1999ರವರೆಗೆ ಮತ್ತು 2004ರಿಂದ 2007ರವರೆಗೆ ಗುಳೇದಗುಡ್ ವಿಧಾನಸಭಾ...
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳ ಪೈಕಿ, 5 ಗ್ಯಾರಂಟಿ ಯೋಜನೆಗಳು ಪ್ರಮುಖವಾಗಿವೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಸಮೀಕ್ಷೆಗಳು, ಅಧ್ಯಯನ ವರದಿಗಳು ನಡೆದಿವೆ. ಇದೀಗ ಮತ್ತೆ ಗ್ಯಾರಂಟಿ ಯೋಜನೆಗಳ ಸಾಧಕ ಬಾಧಕಗಳು ಹಾಗೂ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ನವೆಂಬರ್ 5ರಂದು ಈ ನಿಟ್ಟಿನಲ್ಲಿ ನಡೆಯಲಿರುವ ಅವಲೋಕನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಪ್ರತಿಷ್ಠಿತ...
ಇಷ್ಟು ದಿನ ಮುಖ್ಯಮಂತ್ರಿ ಸ್ಥಾನಕ್ಕೆ ಬಿಗ್ ಫೈಟ್ ನಡೀತಿತ್ತು. ಇದೀಗ ಡಿಸಿಎಂ ಪಟ್ಟಕ್ಕೂ ಪೈಪೋಟಿ ಶುರುವಾದಂತೆ ಕಾಣಿಸ್ತಿದೆ. ದಿನೇ ದಿನೇ ಆಕಾಂಕ್ಷಿಗಳ ಸಂಖ್ಯೆ ಏರುತ್ತಲೇ ಇದೆ. ಈ ಸಾಲಿಗೆ ಸಚಿವ ಜಮೀರ್ ಅಹಮದ್ ಖಾನ್ ಸೇರ್ಪಡೆಯಾಗಿದ್ದಾರೆ.
ಒಂದು ವೇಳೆ ಹೈಕಮಾಂಡ್ ನಿರ್ಧರಿಸಿದರೆ, ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ನಾನು ಸಿದ್ಧನಿದ್ದೇನೆ. ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧನಾಗಿದ್ದೇನೆ. ಇದ್ಯಾವುದೂ...
ದರ್ಶನ್ ಅವರು ಜೈಲಿನಲ್ಲಿ ಹೇಗಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲೂ, ಜನಸಾಮಾನ್ಯರಲ್ಲೂ ಹೆಚ್ಚಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳು ನವೆಂಬರ್ 3ರಂದು ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್‌ಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಪವಿತ್ರಾ ಗೌಡ ತುಂಬಾ ಟೆನ್ಷನ್‌ನಲ್ಲಿದ್ದರೆಂದು ಮೂಲಗಳು ಹೇಳುತ್ತಿವೆ.
ವಿಚಾರಣೆ ಮುಗಿದ ಬಳಿಕ...
Mandya:ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಗ್ರಾಮದ ಸ್ಮಶಾನ ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ ಗ್ರಾಮಸ್ಥರು ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಶ್ರೀರಂಗಪಟ್ಟಣದ ತಾಲೂಕು ಕಚೇರಿ ಮುಂದೆ ಮುಂಡುಗ ದೊರೆ ದಲಿತ ಸಮುದಾಯದವರು ಧರಣಿ ನಡೆಸಿದ್ದಾರೆ. ಈ ಧರಣಿಯಲ್ಲಿ ಗ್ರಾಮದ ಮಹಿಳೆಯರು, ಯುವಕರು, ಮುಖಂಡರೆಲ್ಲರೂ ಭಾಗಿಯಾಗಿದ್ದು, ಇಡೀ ರಾತ್ರಿ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ.
ಕಚೇರಿ ಮುಂದೆಯೇ ಧರಣಿ ಮಾಡುವವರು ಅಡುಗೆ...
Mandya: ಮಂಡ್ಯ: ನಿಯತ್ತಾಗಿ ದುಡಿದು ತಿನ್ನುವವರನ್ನೂ ಜನ ಬಿಡೋದಿಲ್ಲ ಅನ್ನೋದಕ್ಕೆ ಮಂಡ್ಯದಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ.
ಜೀವನಕ್ಕಾಗಿ ಜಯಮ್ಮ ಎಂಬ ಬಡ ಮಹಿಳೆ ಪೆಟ್ಟಿಗೆ ಅಂಗಡಿ ಇರಿಸಿದ್ದಳು. ಆದರೆ ದುಷ್ಕರ್ಮಿಗಳು ಅಂಗಡಿಗೆ ಬೀಗ ಹಾಕಿದ ವೇಳೆ ಬಂದು, ಬೀಗ ಮುರಿದು, ಅಲ್ಲಿದ್ದ ಬೀಡಿ ಸಿಗರೇಟ್, ಚಿಲ್ಲರೆಕಾಸು ಎಲ್ಲವೂ ಕಳ್ಳತನ ಮಾಡಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ...
ಕಲಬುರಗಿ ಜಿಲ್ಲೆಯ ಚಿತ್ತಾಪುರ ಬಳಿಕ, ಈಗ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸರದಿ. ಆರ್‌ಎಸ್‌ಎಸ್ ಪಥಸಂಚಲನ ನಡೆಯಲಿದ್ದು, ಕೆಂಭಾವಿ ಪಟ್ಟಣ ಸಂಪೂರ್ಣ ಕೇಸರಿಮಯವಾಗಿದೆ. RSS ಪಥ ಸಂಚಲನ ಹಿನ್ನೆಲೆ ಭಗವಾಧ್ವಜ, ಹನುಮಂತ ಧ್ವಜ, ಶ್ರೀರಾಮನ ಧ್ವಜಗಳು ರಾರಾಜಿಸುತ್ತಿವೆ. ದೇಶಭಕ್ತರ ಹೆಸರಿನಲ್ಲಿ ನಿರ್ಮಿತ ಮಹಾಧ್ವಾರಗಳು ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಸೇರಿದಂತೆ, ಹಲವು ಮಹಾನ್...
Bengaluru: ಬೆಂಗಳೂರು, ನ.4: ಸುದಯ ಫೌಂಡೇಶನ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು, ಬಿಸ್ಕೆಟ್ ವಿತರಣೆ ಮಾಡಲಾಯಿತು.
ನಗರದ ಆಶಾ ಕಿರಣ್ ಡಯಾಲಿಸಿಸ್ ಸೆಂಟರ್ ನಲ್ಲಿ ಸುದಯ ಫೌಂಡೇಶನ್ ಅಧ್ಯಕ್ಷರಾದ ಸುಶೀಲ. ಸಿ ಅವರು ರೋಗಿಗಳಿಗೆ ಹಣ್ಣು, ಬಿಸ್ಕೆಟ್ ವಿತರಿಸಿ ರೋಗಿಗಳೊಂದಿಗೆ ಕೆಲವು ಸಮಯ ಕಳೆದು ಯೋಗ ಕ್ಷೇಮ ವಿಚಾರಿಸಿದರು.
ಈ ವೇಳೆ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ...
ತುಮಕೂರಿನಲ್ಲಿ ಪ್ರೇಮ ವಿವಾಹದ ನಂತರ ಗರ್ಭಿಣಿಯಾಗಿರುವ ಪತ್ನಿಯನ್ನು ಬಿಟ್ಟು ಪತಿ ಮತ್ತೊಬ್ಬರೊಂದಿಗೆ ಮದುವೆಯಾಗಲು ಮುಂದಾದ ಆರೋಪ ಕೇಳಿಬಂದಿದೆ. ಪೀಡಿತೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪಾವಗಡ...