ಜನೌಷಧಿ ಕೇಂದ್ರದ ನಾಮಫಲಕ ತೆರವು- ಕೇಂದ್ರ ಸಚಿವ ಸದಾನಂದಗೌಡ ಕೆಂಡಾಮಂಡಲ..!!

ಬೆಂಗಳೂರು: ಕಳೆದ ಭಾನುವಾರವಷ್ಟೇ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಉದ್ಘಾಟಿಸಿದ್ದ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದ ನಾಮಫಲಕವನ್ನು ಬಿಬಿಎಂಪಿ ತೆರವುಗೊಳಿಸಿದೆ. ಇದನ್ನು ಪ್ರಶ್ನಿಸಿರೋ ಕೇಂದ್ರ ಸಚಿವ ಡಿವಿಎಸ್ ಕಿಡಿ ಕಾರಿದ್ದಾರೆ.

ಬೆಂಗಳೂರಿನ ದಾಸರಹಳ್ಳಿಯಲ್ಲಿ ಕಳೆದ ಭಾನುವಾರ ಜನೌಷಧಿ ಕೇಂದ್ರವನ್ನು ಕೇಂದ್ರ ಸಚಿವ ಸದಾನಂದಗೌಡ ಉದ್ಘಾಟಿಸಿದ್ರು. ಆದ್ರೆ ಈಗ ಜನೌಷಧಿ ಕೇಂದ್ರದ ಬೋರ್ಡನ್ನು ಬಿಬಿಎಂಪಿ ತೆರವುಗೊಳಿಸಿರೋದು ಸದಾನಂದಗೌಡರ ಕಣ್ಣುಕೆಂಪಾಗಿಸಿದೆ. ಈ ಕುರಿತು ಟ್ವೀಟ್ ಮಾಡಿರೋ ಕೇಂದ್ರ ಸಚಿವ-‘ ನಾನು ಕಳೆದ ಭಾನುವಾರ ದಾಸರಹಳ್ಳಿ ಯಲ್ಲಿ ಉದ್ಘಾಟಿಸಿದ್ದ ಪ್ರಧಾನ ಮಂತ್ರಿ ಜನ ಔಷದಿ ಕೇಂದ್ರದ ನಾಮ ಫಲಕವನ್ನು ಇಂದು ಬಿಬಿಎಂಪಿಯ ಪ್ರಹರಿ ದಳದವರು ಕಿತ್ತೊಯ್ದದ್ದು ಯಾವ ಕಾರಣಕ್ಕೆ ಎಂದು ತಿಳಿಸಿರಿ . ಬಡ ಜನರಿಗೋಸ್ಕರ ಇರುವ ಈ ಸೌಲಭ್ಯವನ್ನು ತಿಳಿಸುವ ನಾಮ ಫಲಕ ಕೀಳಿಸಿದ ರೋಗ ಗ್ರಸ್ತ ಮನಸ್ಸು ಯಾವುದು ತಿಳಿಸಿರಿ ಅಂತ’ ಬಿಬಿಎಂಪಿ ಮೇಯರ್ ಮತ್ತು ಬಿಬಿಎಂಪಿ ಆಯುಕ್ತರನ್ನು ಸದಾನಂದಗೌಡ ಪ್ರಶ್ನಿಸಿದ್ದಾರೆ.

ಉಪಚುನಾವಣೆಗೆ ಹೆದರಿಕೆ ಇರೋದ್ಯಾರಿಗೆ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=XFYMG-a-bQE

About The Author