Spiritual News: ಚಾಣಕ್ಯರು ಮನುಷ್ಯನ ಜೀವನದ ಬಗ್ಗೆ ಹಲವಾರು ವಿಷಯಗಳನ್ನು ಹೇಳಿದ್ದಾರೆ. ಮನುಷ್ಯ ನೆಮ್ಮದಿಯಾಗಿರಬೇಕು ಅಂದ್ರೆ ಏನು ಮಾಡಬೇಕು..? ವೈವಾಹಿಕ ಜೀವನ ಉತ್ತಮವಾಗಿರಬೇಕು ಅಂದ್ರೆ ಏನು ಮಾಡಬೇಕು. ಆರ್ಥಿಕ ಪರಿಸ್ಥಿತಿ ಸರಿಯಾಗಿ ಇರಬೇಕು ಅಂದ್ರೆ ಏನು ಮಾಡಬೇಕು..? ಈ ರೀತಿ ಹಲವು ವಿಷಯಗಳ ಬಗ್ಗೆ ಚಾಣಕ್ಯರು ವಿವರಿಸಿದ್ದಾರೆ. ಇದರ ಜೊತೆಗೆ ಕೆಲವು ವಿಚಾರಗಳ ಬಗ್ಗೆ ನಾವು ಎಷ್ಟು ಎಚ್ಚರಿಕೆಯಿಂದ ಇರುತ್ತೇವೋ, ಅಷ್ಟು ಉತ್ತಮ ಅಂತಾ ಚಾಣಕ್ಯರು ಹೇಳಿದ್ದಾರೆ. ಹಾಗಾದ್ರೆ ಯಾವುದು ಆ ವಿಷಯ ಅಂತಾ ತಿಳಿಯೋಣ ಬನ್ನಿ..
ಮೊದಲ ವಿಷಯ ನಾವಿರುವ ಸ್ಥಳ. ಮನುಷ್ಯ ನೆಮ್ಮದಿಯಾಗಿರಬೇಕು ಅಂದ್ರೆ, ಅವನು ಎಂಥ ಸ್ಥಳದಲ್ಲಿ ವಾಸಿಸುತ್ತಿದ್ದಾನೆಂದು ಅರಿತಿರಬೇಕು. ಆ ಸ್ಥಳದಲ್ಲಿ ನಾನು ವಾಸವಿದ್ದರೆ, ಅಲ್ಲಿ ನನಗೆ ಸುಲಭವಾಗಿ ಕೆಲಸ ಸಿಗುವುದೇ..? ಸುತ್ತಮುತ್ತಲಿನ ಜನರು ಯಾವ ರೀತಿ ಇದ್ದಾರೆ..? ಮನೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ತಾನೇ..? ಹೀಗೆ ನಾವಿರುವ ಸ್ಥಳ ನಮಗೆ ಸೇಫ್ ಹೌದೋ, ಅಲ್ಲವೋ ಅನ್ನುವುದರ ಅರಿವು ನಮಗಿರಬೇಕು.
ಎರಡನೇಯ ವಿಷಯ ಎಲ್ಲರನ್ನೂ ನಂಬಬಾರದು. ನಿಮಗೆ ಸಿಗುವ ಎಲ್ಲರ ಬಳಿಯೂ ನೀವು ಸ್ನೇಹ ಬೆಳೆಸಬೇಕು ಅಂತಿಲ್ಲ. ಏಕೆಂದರೆ, ನಿಮಗೆ ಸಿಗುವ ಕೆಲವೇ ಕೆಲವರು ನಂಬಿಕಸ್ಥರಾಗಿರುತ್ತಾರೆ. ಹಲವರು ನಂಬಿಕೆಗೆ ಅರ್ಹರಲ್ಲದವರಾಗಿರುತ್ತಾರೆ. ಆದರೆ ಅಂಥ ಅನರ್ಹರ ಮಾತೇ ಸಿಹಿಯಾಗಿರುತ್ತದೆ. ಅವರು ತಮ್ಮ ಸಿಹಿ ಮಾತಿನಿಂದಲೇ, ನಿಮಗೆ ಮೋಸ ಮಾಡಬಲ್ಲರು. ಹಾಗಾಗಿ ಯಾರನ್ನಾದರೂ ನಂಬಿ ಮೋಸ ಹೋಗುವ ಮುನ್ನ, ಅವರ ಗುಣವನ್ನು ತಿಳಿದುಕೊಳ್ಳಿ.
ಮೂರನೇಯ ವಿಷಯ ಸಮಯವನ್ನು ಹಾಳು ಮಾಡದಿರುವುದು. ಸಮಯ ವ್ಯರ್ಥ ಮಾಡುವುದರಿಂದ ನೀವು ಯಶಸ್ವಿಯಾಗಲು ಸಾಧ್ಯವೇ ಇಲ್ಲ. ಲೇಟಾಗಿ ಏಳುವುದು. ಹರಟೆ ಹೊಡೆಯುವುದು, ತಿರುಗಾಡುವುದೆಲ್ಲ ಸಮಯ ವ್ಯರ್ಥ ಮಾಡಿದಂತೆ. ಇಂದಿನ ಕಾಲದಲ್ಲಿ ಆ ಸ್ಥಳಕ್ಕೆ ಮೊಬೈಲ್ ಬಂದಿದೆ ಅಷ್ಟೇ. ಆದರೆ ಸಮಯ ಹಾಳು ಮಾಡುವುದಕ್ಕಿಂತ ದೊಡ್ಡ ಶತ್ರು ಮತ್ತೊಂದಿಲ್ಲ ಅಂತಾರೆ ಚಾಣಕ್ಯರು.
ನಾಲ್ಕನೇಯ ವಿಷಯ ಖರ್ಚು ವೆಚ್ಚದ ಬಗ್ಗೆ ಗಮನವಿರಲಿ. ಇನ್ನು ನೀವು ಜೀವನದಲ್ಲಿ ನೆಮ್ಮದಿಯಾಗಿರಬೇಕು ಅಂದ್ರೆ, ದುಡಿದ ದುಡ್ಡನ್ನು ಅವಶ್ಯಕತೆ ಇರುವ ವಸ್ತುವಿಗಷ್ಟೇ ಖರ್ಚು ಮಾಡಿ. ಕಂಡಕಂಡದ್ದನ್ನೆಲ್ಲ ತೆಗೆದುಕೊಂಡರೆ, ಕಷ್ಟ ಕಾಲಕ್ಕೆ ಬೇಕೆಂದರೂ ದುಡ್ಡು ಸಿಗುವುದಿಲ್ಲ. ಆ ಸಮಯ ನಿಮ್ಮ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ಹಣ ಖರ್ಚು ಮಾಡುವ ಮುನ್ನ ಸರಿಯಾಗಿ ಯೋಚಿಸಿ, ಅವಶ್ಯಕತೆ ಇದ್ದಲ್ಲಿ ಮಾತ್ರ ಹಣ ಖರ್ಚು ಮಾಡಿ..
ಇಷ್ಟಾರ್ಥಸಿದ್ಧಿಯ ಚಾಂಗದೇವನ ಯಮನೂರು ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರೋ ಪುಣ್ಯ ಭೂಮಿ! ಸ್ಥಳ ಮಹಾತ್ಮೆ ಏನು?
ಮಲಗುವ ಮುನ್ನ ಈ ಕೆಲಸಗಳನ್ನು ತಪ್ಪದೇ ಮಾಡಿ, ಜೀವನದಲ್ಲಿ ಉದ್ಧಾರವಾಗುತ್ತೀರಿ..