Tuesday, October 14, 2025

Latest Posts

ಅತೀ ಕಡಿಮೆ ಬೆಲೆಯಲ್ಲಿ ಆಕರ್ಷಕ ಆಭರಣಗಳು ಬಾಡಿಗೆಗೆ

- Advertisement -

Shopping Tips: ಮನೆಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಹೆಣ್ಣು ಮಕ್ಕಳು ಮೊದಲ ಆದ್ಯತೆ ಕೊಡೋದು ತಮ್ಮ ಅಲಂಕಾರಕ್ಕೆ. ಪ್ರತೀ ಹಬ್ಬಕ್ಕೂ, ಪ್ರತೀ ಸಲ ನಡೆಯುವ ಶುಭಕಾರ್ಯಕ್ಕೂ, ಅಥವಾ ಮದುವೆ-ಮುಂಜಿ ಸಮಾರಂಭಗಳಲ್ಲಿ ಸಾವಿರ ಸಾವಿರ ರೂಪಾಯಿ ಕೊಟ್ಟು, ಆಭರಣ ತೆಗೆದುಕೊಳ್ಳೋಕ್ಕೆ ಸಾಧ್ಯವಿಲ್ಲ. ಅದೇ ರೀತಿ ಹಾಕಿದ್ದೆ ಆಭರಣವನ್ನು ಹಾಕಲು, ಕೆಲ ಹೆಣ್ಣು ಮಕ್ಕಳ ಮನಸ್ಸು ಒಪ್ಪುವುದಿಲ್ಲ. ಅದಕ್ಕಾಗಿ ನಾವಿಂದು ಬೆಂಗಳೂರಿನ ಅಂಗಡಿಯೊಂದರಲ್ಲಿ, ಕಡಿಮೆ ಬೆಲೆಗೆ ಬಾಡಿಗೆಗೆ ಸಿಗುವ ಆಭರಣಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಬೆಂಗಳೂರಿನ ಆರ್‌ಟಿನಗರದಲ್ಲಿರುವ ಮಹಿಳಾ ಪಸಂದ್ ರೆಂಟಲ್ ಜ್ಯೂವೆಲ್ಲರಿ ಶಾಪ್ ನಲ್ಲಿ ಹೆಣ್ಣು ಮಕ್ಕಳಿಗೆ ಬೇಕಾಗಿರುವ ವಿವಿಧ ರೀತಿಯ ಆಭರಣಗಳು ಬಾಡಿಗೆಗೆ ಸಿಗುತ್ತದೆ. ಸ್ಟೋನ್, ಮುತ್ತಿನ ಆಭರಣ ಸೇರಿ ತರಹೇವಾರಿ ಆಭರಣಗಳು ಇಲ್ಲಿ ಸಿಗುತ್ತದೆ. ಎಲ್ಲಾ ರೀತಿಯ ಬಟ್ಟೆಗಳು ಅಂದ್ರೆ ಲೆಹೆಂಗಾ, ಘಾಗ್ರಾ, ಸಾರಿ, ಗೌನ್ ಸೇರಿ ಎಲ್ಲ ರೀತಿಯ ಬಟ್ಟೆಗೆ ಮ್ಯಾಚ್ ಆಗುವ ಆಭರಣಗಳು ಇಲ್ಲಿ ಸಿಗುತ್ತದೆ.

ಮದುವೆ, ರಿಸೆಪ್ಶನ್, ನಿಶ್ಚಿತಾರ್ಥ ಸೇರಿ ಹಲವು ಕಾರ್ಯಕ್ರಮಗಳಿಗೆ ಹಾಕುವಂಥ ಜ್ಯೂವೆಲರಿಗಳನ್ನು ನೀವು ಇಲ್ಲಿಂದ ಬಾಡಿಗೆಗೆ ಪಡೆದು ತೆಗೆದುಕೊಂಡು ಹೋಗಬಹುದು. ಟೆಂಪಲ್ ಜ್ಯೂವೆಲ್ಲರಿ, ಜರ್ದೋಸಿ ಜ್ಯೂವೆಲ್ಲರಿ, ಸ್ಟೋನ್ ಜ್ಯುವೆಲ್ಲರಿ ಸೆಟ್, ಮುತ್ತಿನ ಹಾರ, ಕಿವಿಯೋಲೆ, ಡಾಬು ಹೀಗೆ ಎಲ್ಲ ಆಭರಣಗಳು ನಿಮಗೆ ಇಲ್ಲಿ ಸಿಗುತ್ತದೆ.

ಇಲ್ಲಿ ನೀವು ಆಭರಣಗಳನ್ನು ಖರೀದಿಸಲಾಗುವುದಿಲ್ಲ. ಬರೀ ಬಾಡಿಗೆಗೆ ಪಡೆಯಬಹುದಷ್ಟೇ. 500ರಿಂದ ಶುರುವಾಗು ಬಾಡಿಗೆ ದರ ಮೂರು ಸಾವಿರದ ತನಕವೂ ಹೋಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ.

Tomato ತಿನ್ನೋದ್ರಿಂದ Kidney Stone ಬರುತ್ತಾ?

Tandoor Chai ಮಾಡೋದು ಹೇಗೆ ಗೊತ್ತಾ? ಇಲ್ಲೊಮ್ಮೆ Taste ಮಾಡಿ

ಅಡುಗೆಯನ್ನು ಫ್ರಿಜ್ನಲ್ಲಿರಿಸಿ, ಮತ್ತೆ ಬಿಸಿ ಮಾಡಿ ಸೇವಿಸುವುದು ಒಳ್ಳೆದಾ..? ಕೆಟ್ಟದ್ದಾ..?

- Advertisement -

Latest Posts

Don't Miss