ಯೋಗ, ವ್ಯಾಯಮ ಮಾಡುವುದು ತುಂಬಾ ಒಳ್ಳೆಯದು ಅಂತಾ ನಾವು ಕೇಳಿದ್ದೇವೆ. ಅಂತೆಯೇ ಯೋಗ, ವ್ಯಾಯಾಮ ಮಾಡಿದವರು ಕೂಡ ಫಿಟ್ ಆ್ಯಂಡ್ ಫೈನ್ ಆಗಿರುವುದನ್ನ ನಾವು ನೋಡಿದ್ದೇವೆ. ಮಕ್ಕಳು ಕೂಡ ಯೋಗ , ವ್ಯಾಯಮ ಮಾಡಿದ್ರೆ, ಆರೋಗ್ಯವಾಗಿ ಇರ್ತಾರೆ. ಆದ್ರೆ ಮಮಕ್ಕಳು ತಾವಾಗಿಯೇ ವ್ಯಾಯಮ ಮಾಡಬಾರದು ಅಂತಾ ಹೇಳಲಾಗಿದೆ. ಆದ್ರೆ ಯಾಕೆ ಮಕ್ಕಳು ಯೋಗ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಯಾರಿಗೆ ಕಫದ ಸಮಸ್ಯೆ ಇರುತ್ತದೆಯೋ, ಅವರು ಪ್ರಾಣಾಯಾಮ, ಯೋಗಾಸನ ಮಾಡಬಾರದು ಅಂತಾ ವಾಗ್ಭಟರು ಹೇಳಿದ್ದಾರೆ. ವಾತದ ಸಮಸ್ಯೆ ಇದ್ದವರು ಕೊಂಚ ಯೋಗಾಸನ ಮಾಡಬಹುದು. ಪಿತ್ತದ ಸಮಸ್ಯೆ ಇದ್ದವರು ಹೆಚ್ಚು ಯೋಗಾಸನ ಮಾಡಬೇಕು. ಆದ್‌ರೆ ಕಫದ ಸಮಸ್ಯೆ ಇದ್ದವರು ಯೋಗಾಸನ ಮಾಡಲೇಬಾರದು. ಅದರಲ್ಲೂ ತುಂಬಾ ವಯಸ್ಸಾದವರಿಗೆ ಮತ್ತು ಮಕ್ಕಳಿಗೆ ಹೆಚ್ಚಾಗಿ ಕಫದ ಸಮಸ್ಯೆ ಇರುತ್ತದೆ. ಹಾಗಾಗಿ ಅಂಥವರು ಯೋಗಾಸನ ಮಾಡಬಾರದು.
ಅಲ್ಲದೇ, ಯೋಗಾಸನ ಮಾಡುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ, ಹೇಗೆ ಬೇಕೋ ಹಾಗೆ ಮಾಡಿದಾಗ, ದೇಹಕ್ಕೆ ತೊಂದರೆಯಾಗುತ್ತದೆ. ಕೆಲವೊಮ್ಮೆ ಕೈ ಕಾಲುಗಳಿಗೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಕ್ಕಳಿಗೆ ಯೋಗ ಮಾಡಲು, ಹೆಚ್ಚು ಪೋರ್ಸ್ ಮಾಡಬೇಡಿ. ಅದರ ಬದಲು ಮಕ್ಕಳಿಗೆ ದೇಹಕ್ಕೆ ಎಣ್ಣೆಯಿಂದ ಮಸಾಜ್ ಮಾಡಿದರೆ ಒಳ್ಳೆಯದು. ವಾರಕ್ಕೊಮ್ಮೆ ಇಡೀ ದೇಹಕ್ಕೆ, ಎಣ್ಣೆಯಿಂದ ಚೆನ್ನಾಗಿ ಮಸಾಜ್ ಮಾಡಿ, ಬಿಸಿ ನೀರಿನಿಂದ ಸ್ನಾನ ಮಾಡಿದರೆ, ಮಕ್ಕಳು ಹೆಚ್ಚು ಆರೋಗ್ಯವಾಗಿರುತ್ತಾರೆ.
ಇನ್ನು ಯೋಗ, ವ್ಯಾಯಾಮವನ್ನೆಲ್ಲ ಯ್ಯೂಟ್ಯೂಬ್, ಟಿವಿ ನೋಡಿಕೊಂಡೆಲ್ಲ ಮಾಡಲು ಹೋಗಬೇಡಿ. ಯೋಗಾ ಕ್ಲಾಸಿಗೆ ಹೋಗಿ, ಅಥವಾ ಉತ್ತಮವಾಗಿ ಯೋಗ ಬಲ್ಲವರ ಬಳಿಯೇ ಯೋಗ ಕಲಿತು ಯೋಗ ಮಾಡಬೇಕು. ಯೋಗವನ್ನು ಸರಿಯಾಗಿ ಮಾಡಿದಾಗಲೇ, ಅದರಿಂದ ನಮ್ಮ ಆರೋಗ್ಯ ಸರಿಯಾಗಿರುತ್ತದೆ. ಮತ್ತು ದೇಹ ರಚನೆ ಚೆಂದಗೊಳ್ಳುತ್ತದೆ. ಆದರೆ ನೀವು ನಿಯಮಮದ ಪ್ರಕಾರ ಯೋಗ ಮಾಡದಿದ್ದಲ್ಲಿ, ಇದು ಆರೋಗ್ಯ ಸರಿ ಮಾಡುವ ಜಾಗದಲ್ಲಿ, ಆರೋಗ್ಯ ಹಾಳಾಗಬಹುದು.
ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?