Thursday, July 24, 2025

Latest Posts

ಇಂಥ ಆಹಾರಗಳ ಸೇವನೆ ಮಾಡುವುದರಿಂದ ಮಕ್ಕಳ ಹಲ್ಲು ಬೇಗ ಹಾಳಾಗುತ್ತದೆ..

- Advertisement -

Health Tips: ಮಕ್ಕಳು ಯಾವಾಗಲೂ ಆರೋಗ್ಯಕರ ತಿಂಡಿಯನ್ನೇ ಹೆಚ್ಚು ತಿನ್ನಬೇಕು ಅಂತಾ ಹೇಳುವುದು ಯಾಕಂದ್ರೆ, ಮನೆಗೆ ಫೌಂಡೇಶನ್ ಹೇಗೋ, ಬಾಲ್ಯವೂ ಹಾಗೆ. ಬಾಲ್ಯ ಆರೋಗ್ಯಕರವಾಗಿದ್ದರೆ, ಮಗುವಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಭವಿಷ್ಯದಲ್ಲಿ ಅದಕ್ಕೆ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. ಹಾಗಾಗಿ ಪ್ರತೀ ಮಗುವಿಗೂ ತಾಯಿಯ ಹಾಲಿನ ಜೊತೆ, ಪೌಷ್ಠಿಕಾಂಶ ಭರಿತ ಆಹಾರ ನೀಡುವುದು ತುಂಬಾ ಮುಖ್ಯ. ಅದರಲ್ಲೂ, ಮಗುವಿನ ಹಲ್ಲಿನ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕು. ಹಾಗಾಗಿ ನಾವಿಂದು ಮಕ್ಕಳು ಯಾವ ಆಹಾರ ತಿನ್ನುವುದರಿಂದ ಹಲ್ಲಿನ ಸಮಸ್ಯೆ ಉದ್ಭವಿಸುತ್ತದೆ ಅಂತಾ ಹೇಳಲಿದ್ದೇವೆ.

ಮೊದಲನೇಯ ತಿಂಡಿ ಸಿಹಿ ತಿಂಡಿ. ಸಿಹಿ ತಿಂಡಿ ಎಂದರೆ, ಸಕ್ಕರೆ-ಬೆಲ್ಲ ಬಳಸಿ ಮಾಡಿದ ತಿಂಡಿಗಳು. ಚಾಕೋಲೇಟ್ಸ್, ಪಾಯಸ, ಬರ್ಫಿ, ಹಲ್ವಾ ಹೀಗೆ ಇಂಥ ಸಿಹಿ ತಿಂಡಿಗಳು ಮಕ್ಕಳ ಹಲ್ಲುಗಳನ್ನು ಬೇಗ ಹಾಳು ಮಾಡುತ್ತದೆ. ಹಾಗಾಗಿ ಇಂಥ ಆಹಾರಗಳನ್ನು ಆದಷ್ಟು ಮಿತವಾಗಿ ನೀಡಿ. ಅಥವಾ ನೀಡಲೇಬೇಡಿ. ಯಾಕಂದ್ರೆ ಈ ಸಿಹಿ ತಿಂಡಿಗಳು ಹಲ್ಲಿನ ಅಡಿಗೆ ಸಿಲುಕಿ, ಹಲ್ಲು ಹುಳುಕಾಗುವಂತೆ ಮಾಡುತ್ತದೆ.

ಎರಡನೇಯದಾಗಿ ಕೂಲ್ ಡ್ರಿಂಕ್ಸ್. ಮಾರುಕಟ್ಟೆಯಲ್ಲಿ ಸಿಗುವ ಕೂಲ್ ಡ್ರಿಂಕ್ಸ್, ಸೋಡಾ ಇವುಗಳೆಲ್ಲ ಮನುಷ್ಯನ ದೇಹಕ್ಕೆ ಎಷ್ಟು ಹಾನಿಕಾರಕ ಅಂದ್ರೆ, ಇದು ಕ್ಯಾನ್ಸರ್, ಕಿಡ್ನಿ ಫೇಲ್‌ನಂಥ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಾಗಾಗಿ ಇಂಥ ಕೂಲ್‌ಡ್ರಿಂಕ್ಸ್‌ಗಳನ್ನು ಮಕ್ಕಳಿಗೆ ಕೊಡಲೇಬೇಡಿ. ಇದರಿಂದ ಹಲ್ಲುಗಳು ಕೂಡ ಬೇಗ ಹಾಳಾಗುತ್ತದೆ.

ಮೂರನೇಯದಾಗಿ ಚಿಪ್ಸ್. ಮಕ್ಕಳ ಫೇವರಿಟ್ ತಿಂಡಿ ಅಂದ್ರೆ ಆಲೂಗಡ್ಡೆ ಚಿಪ್ಸ್.  ಯಾವುದೇ ಚಿಪ್ಸ್ ತಿಂದರೂ ಅದು ಹಲ್ಲಿನಡಿಗೆ ಕೂರುತ್ತದೆ. ಅಲ್ಲಿ ಕೀಟಾಣುಗಳು ಹುಟ್ಟಿಕೊಳ್ಳುತ್ತದೆ. ಆಗ ಹಲ್ಲು ಹುಳುಕು ಹಿಡಿಯುತ್ತದೆ. ಅಲ್ಲದೇ ಹುಳಿಯಾದ ಹಣ್ಣು, ಪದಾರ್ಥಗಳು ತಿಂದೂ ಕೂಡ, ಮಕ್ಕಳ ಹಲ್ಲು ಹುಳುಕಾಗುತ್ತದೆ.

ಹಾಗಾಗಿ ಯಾವುದೇ ಪದಾರ್ಥ ತಿಂದರೂ, ಬಾಯಿ ಮುಕ್ಕಳಿಸಲು ಕಲಿಸಿ. ಅಲ್ಲದೇ ದಿನಕ್ಕೆ ಎರಡು ಹೊತ್ತು, ಅಂದರೆ ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ವೇಳೆ ಬ್ರಶ್ ಮಾಡಿ ಮಲಗುವ ಅಭ್ಯಾಸವನ್ನು ಮಾಡಿ. ಇದರಿಂದ ಹಲ್ಲಿನ ಆರೋಗ್ಯ ಚೆನ್ನಾಗಿರುತ್ತದೆ.

ರವೆ ಲಾಡು ರೆಸಿಪಿ: ವೀಡಿಯೋ ಸಮೇತ

ನಿಮ್ಮ ಮುಖ ಸುಂದರವಾಗಿ ಕಾಣಬೇಕು ಅಂದ್ರೆ ಈ ಸೇರಮ್ ಬಳಸಿ ನೋಡಿ..

ವಿವಾಹಿತೆಯರು ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

- Advertisement -

Latest Posts

Don't Miss