Food Adda: ಎಲ್ಲರಿಗೂ ಸಾಮಾನ್ಯವಾಗಿ ಇಷವಾಗುವ ಆರೋಗ್ಯಕರ ಆಹಾರ ಅಂದ್ರೆ ಡ್ರೈಫ್ರೂಟ್ಸ್ ಮತ್ತು ನಟ್ಸ್. ಬಾದಾಮಿ, ಅಂಜೂರ, ಗೇರುಬೀಜ, ಒಣದ್ರಾಕ್ಷಿ, ಪಿಸ್ತಾ, ಅಖ್ರೋಟ್, ಹೀಗೆ ವೆರೈಟಿ ವೆರೈಟಿ ಡ್ರೈ ಫ್ರೂಟ್ಸ್ ಇದೆ. ಬೆಂಗಳೂರಿನಲ್ಲಿ ನಿಮಗೆ ಹೀಗೆ ವೆರೈಟಿ ಡ್ರಾಫ್ರೂಟ್ಸ್ ಬೇಕಂದ್‌ರೆ, ನೀವು ಇಲ್ಲೊಂದು ಸ್ಥಳಕ್ಕೆ ಬರಬೇಕು. ಯಾವುದು ಆ ಜಾಗ..? ಅಲ್ಲಿ ಯಾವ ಯಾವ ರೀತಿಯ ಡ್ರೈಫ್ರೂಟ್ಸ್ ಸಿಗುತ್ತದೆ ಅಂತಾ ತಿಳಿಯೋಣ ಬನ್ನಿ..
ಶಿವಾಜಿನಗರದ ರಸಲ್ ಮಾರುಕಟ್ಟೆಯ ಡಿಲಿಶಿಯಸ್ ಡ್ರೈ ಫ್ರೂಟ್ಸ್ ಆ್ಯಂಡ್ ಡೇಟ್ಸ್ ಎಂಬ ಅಂಗಡಿಯಲ್ಲಿ ತರಹೇವಾರಿ ಡ್ರೈಫ್ರೂಟ್ಸ್ ಸಿಗುತ್ತದೆ. ಖರ್ಜೂರದಲ್ಲೇ ಸಿಕ್ಕಾಪಟ್ಟೆ ಬಗೆಯನ್ನ ನೀವು ನೋಡಬಹುದು. ರಂಜಾನ್ ಉಪವಾಸ ಶುರುವಾದಾಗ, ಬೆಂಗಳೂರಿನ ಶೇ.90ರಷ್ಟು ಮುಸ್ಲಿಂಮರು ರಸಲ್ ಮಾರ್ಕೆಟ್‌ಗೆ ಬಂದು ಡ್ರೈಫ್ರೂಟ್ಸ್, ಮತ್ತು ಖರ್ಜೂರವನ್ನು ಖರೀದಿಸುತ್ತಾರೆ. ಅಲ್ಲದೇ, ಬರೀ ಮುಸ್ಲೀಂಮರಷ್ಟೇ ಅಲ್ಲದೇ, ಹಲವರು ಇಲ್ಲಿ ಬಂದು ಡ್ರೈಫ್ರೂಟ್ಸ್ ಖರೀದಿಸುತ್ತಾರೆ. ಯಾಕಂದ್ರೆ, ಇಡೀ ಬೆಂಗಳೂರಲ್ಲಿ ಅಷ್ಟು ಫೇಮಸ್ ಈ ರಸಲ್ ಮಾರ್ಕೇಟ್.
ಡಿಲಿಶಿಯಸ್ ಡ್ರೈ ಫ್ರೂಟ್ಸ್ ಆ್ಯಂಡ್ ಡೇಟ್ಸ್ ಅಂಗಡಿಯಲ್ಲಿ 365ಕ್ಕೂ ಹೆಚ್ಚು ವೆರೈಟಿ ಡ್ರೈಫ್ರೂಟ್ಸ್ ಮತ್ತು ಖರ್ಜೂರ ಸಿಗುತ್ತದೆ. ಬೇರೆ ಬೇರೆ ದೇಶಗಳಿಂದಲೂ ಇಲ್ಲಿ ಒಣಹಣ್ಣು ಮತ್ತು ಖರ್ಜೂರವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಇಲ್ಲಿ 32ರಿಂದ 33 ಬಗೆಯ ಖರ್ಜೂರಗಳು ಸಿಗುತ್ತದೆ. ಮಕ್ಕಾ ಮದೀನಾ, ಸೌದಿ ಅರೇಬಿಯಾ, ಇರಾಕ್, ಇರಾನ್, ಜೋರ್ಡಾನ್, ಟುನಿಶಿಯಾ ಸೇರಿ ಹಲವು ದೇಶಗಳಿಂದ ಖರ್ಜೂರವನ್ನು ಆಮದು ಮಾಡಿಕೊಳ್ಳಾಗುತ್ತದೆ.
ಈ ಅಂಗಡಿಗೆ ಬರೀ ಸಾಮಾನ್ಯರಷ್ಟೇ ಅಲ್ಲದೇ, ಸಿನಿಮಾ ತಾರೆಯರು, ರಾಜಕಾರಣಿಗಳು, ಐಪಿಎಸ್, ಐಐಎಸ್ ಆಫೀಸರ್‌ಗಳು ಸೇರಿ ಹಲವು ಗಣ್ಯರು ಕೂಡ ಇಲ್ಲಿಂದಲೇ, ಡ್ರೈಫ್ರೂಟ್ಸ್, ಖರ್ಜೂರವನ್ನು ಖರೀದಿಸಿ, ತೆಗೆದುಕೊಂಡು ಹೋಗುತ್ತಾರೆ. ಈ ಅಂಗಡಿಯ ಓನರ್ ಎಲ್ಲ ಡ್ರೈಫ್ರೂಟ್ಸ್ ಮತ್ತು ಡೇಟ್ಸ್ ಸೇವನೆಯ ಆರೋಗ್ಯಕರ ಲಾಭಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ. ಪೂರ್ತಿ ಮಾಹಿತಿಗಾಗಿ ಈ ವೀಡಿಯೋ ವೀಕ್ಷಿಸಿ.
ಬೆಂಗಳೂರಲ್ಲಿ ದೇವಸ್ಥಾನ ಪ್ರಸಾದದ ರೀತಿಯ ಊಟ ಮಾಡ್ಬೇಕಾ..? ಹಾಗಾದ್ರೆ ಈ ಹೊಟೇಲ್‌ಗೆ ಬನ್ನಿ..
ತಳ್ಳೋಗಾಡಿಯಲ್ಲೂ ಸಖತ್ ಟೇಸ್ಟಿಯಾಗಿರುವ ಇಡ್ಲಿ-ಚಟ್ನಿ ಕೊಡ್ತಿದ್ದಾರೆ ಇಡ್ಲಿ ಬ್ರೋ..
ವೆರೈಟಿ ವೆರೈಟಿ ಸ್ವೀಟ್ ಕಾರ್ನ್ ತಿನ್ನಬೇಕಾ..? ಹಾಗಾದ್ರೆ ಬೆಂಗಳೂರಿನ ಈ ಫುಡ್ ಅಡ್ಡಾಗೆ ಬನ್ನಿ..