ಮೊದಲ ಬಾರಿ ಗರ್ಭಿಣಿಯಾದಾಗ ಹಲವು ವಿಚಾರಗಳು ತಿಳಿಯುವುದಿಲ್ಲ. ಆ ಸಮಯದಲ್ಲಿ ನಾನು ನಿಜವಾಗ್ಲೂ ಗರ್ಭಣಿಯಾಗಿದ್ದೇನಾ..? ನಾನೇನು ತಿನ್ನಬೇಕು..? ವಾಕಿಂಗ್, ಯೋಗಾಸನ ಎಲ್ಲ ಮಾಡಬೇಕೋ ಬೇಡವೋ..? ಆರೋಗ್ಯದಲ್ಲಿ ಒಂದು ರೀತಿಯ ಬದಲಾವಣೆ, ಪರಿಮಳವೂ ವಾಕರಿಕೆ ತರಿಸುವಂತಿರುತ್ತದೆ. ಹಾಗಾದ್ರೆ ಗರ್ಭಿಣಿಯಾದಾಗ ಎಂಥ ಲಕ್ಷಣಗಳಿರುತ್ತದೆ. ನೀವು ಗರ್ಭಿಣಿಯಾಗಿದ್ದರೆ, ನಿಮಗೆ ಗೊತ್ತಾಗುವ ಮೊದಲ ಲಕ್ಷಣವೇನು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ…
ನೀವು ಮೊದಲ ಬಾರಿ ಗರ್ಭಿಣಿಯಾಗಿದ್ದರೆ, ನಿಮ್ಮ ಋತುಚಕ್ರ ನಿಲ್ಲುತ್ತದೆ. ದಿನಾಂಕ ಕಳೆದರೂ ನೀವು ಋುತುಮತಿಯಾಗದಿದ್ದಲ್ಲಿ, ಪ್ರೆಗ್ನೆನ್ಸಿ ಕಿಟ್ ಮೂಲಕ ನೀವು ಗರ್ಭಿಣಿಯಾಗಿದ್ದೀರಾ, ಇಲ್ಲವಾ ಅನ್ನೋದನ್ನ ಚೆಕ್ ಮಾಡಿಕೊಳ್ಳಿ. ನೀವು ಗರ್ಭಿಣಿಯಾಗಿದ್ದಲ್ಲಿ, ತಕ್ಷಣ ವೈದ್ಯರ ಬಳಿ ಹೋಗಿ, ಸ್ಕ್ಯಾನಿಂಗ್ ಮಾಡಿಸಿಕೊಂಡು, ಮಗುವಿನ ಆರೋಗ್ಯದ ಬಗ್ಗೆ ತಿಳಿದುಕೊಳ್ಳಿ. ಆಹಾರ ಕ್ರಮದ ಬಗ್ಗೆ ವೈದ್ಯರಲ್ಲಿ ವಿಚಾರಿಸಿ.
ಈ ಸಮಯದಲ್ಲಿ ನಿಮಗೆ ವಾಮಿಟಿಂಗ್ ಆಗಬಹುದು. ತಲೆ ಸುತ್ತು ಬರಬಹುದು. ಮುಟ್ಟಾದ ಸಮಯದಲ್ಲಿ ಹೇಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆಯೋ, ಅದೇ ರೀತಿ ಕೊಂಚ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಕೈ ಕಾಲು ನೋವು, ಸೊಂಟ ನೋವು, ಇತ್ಯಾದಿ ಇರುತ್ತದೆ. ಆಗಾಗ ಮೂಡ್ ಚೇಂಜ್ ಆಗುತ್ತಿರುತ್ತದೆ. ಆದ್ರೆ ಎಲ್ಲರಿಗೂ ಇಂಥದ್ದೇ ಲಕ್ಷಣ ಇರುತ್ತದೆ ಅಂತಾ ಹೇಳಲು ಸಾಧ್ಯವಿಲ್ಲ. ಹಲವರಿಗೆ ಇಂಥದ್ದೇನೂ ಇರುವುದಿಲ್ಲ. ಕೆಲವರು ಆರಾಮವಾಗಿ ಇರುತ್ತಾರೆ.
ಆದ್ದರಿಂದ ಗರ್ಭಿಣಿಯರಿಗೆ ಈ ಎಲ್ಲ ಲಕ್ಷಣಗಳಿರಲೇಬೇಕು ಅಂತೇನಿಲ್ಲ. ಬದಲಾಗಿ ಕೆಲವರು ಆರಾಮವಾಗಿಯೇ ಇರ್ತಾರೆ. ಹಾಗಾಗಿ ಈ ಲಕ್ಷಣಕ್ಕೂ ಮಗುವಿನ ಬೆಳವಣಿಗೆಗೂ ಏನೂ ಸಂಭಂಧವಿಲ್ಲ. ನೀವು ಉತ್ತಮ ಆಹಾರ ಸೇವಿಸಿದರೆ, ನಿಮ್ಮ ಮಗುವಿನ ಬೆಳವಣಿಗೆ ಉತ್ತಮವಾಗಿರುತ್ತದೆ.